ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ ರಿ .ದೊಡ್ಡೋಣಿ ಕೋಟೇಶ್ವರ ವತಿಯಿಂದ 14ನೇ ವರ್ಷದ ಮಹಾ ಶಿವರಾತ್ರಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯ ಭಾಸ್ಕರ್ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಗವಿಕಲತೆಯಿಂದ ಬಳಲುತ್ತದ್ದರು ನೂರಾರು ಜನರಿಗೆ ಸ್ಪೂರ್ತಿಯಾಗಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಲಲಿತಾ ಕೊರೊಡಿ ಹಾಗೂ ಕೋಟೀಲಿಂಗೇಶ್ವರ ದೇವಸ್ಥಾನದ ತಟ್ಟಿರಾಯ ಹೊತ್ತು ಕುಣಿವ ತೆರೆಮರೆಯ ವ್ಯಕ್ತಿಗಳಾದ ಶ್ರೀಧರ ದೇವಾಡಿಗ ಹಾಗು ಸುಬ್ರಹ್ಮಣ್ಯ ಗಾಣಿಗ್ ಇವರನ್ನು ಗುರುತಿಸಿ ಗೌರವಿಸಲಾಯಿತು.
ಮುಖ್ಯ ಅಥಿತಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಿತ್ರ ಕ್ಲಿನಿಕ್ನ ಡಾ ಅಶೋಕ ಶೆಟ್ಟಿ , ಕೋಟೇಶ್ವರ ಪಂಚಾಯತ್ನ ಅಧ್ಯಕ್ಷರಾದ ಕೃಷ್ಣ ಗೊಲ್ಲ ಬೀಜಾಡಿ ಗ್ರಾಮ ಪಂಚಾಯತ್ ನ ಸದಸ್ಯರಾದ ಪ್ರಸನ್ನ ದೇವಾಡಿಗ, ಶ್ರೀ ನೀರೇಶ್ವಾಲ್ಯ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷರಾದ ಉಮೇಶ್ ಎಮ್ ಕುಮಾರ್ ದೊಡ್ಡೋಣಿ, ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರು ರಾಘವೇಂದ್ರ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಭರತ್ ರಾಜ್ ಕೋಟೇಶ್ವರ ವರದಿ ವಾಚಿಸಿದರು, ಶಿವಾನಂದ ಗಾಣಿಗ ನಿರೂಪಿಸಿದರು.