ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಾಗಾರ ಪಾಲಕರ ಸಭೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಡಾ. ಕಾಶಿನಾಥ್ ಪೈ , ಗಂಗೊಳ್ಳಿ ಇವರು ಎಪಿಲೆಪ್ಸಿ (ಮೂರ್ಛೆ ರೋಗ)ದ ಬಗ್ಗೆ ಮಾಹಿತಿಯನ್ನು ನೀಡಿದರು. ಅದರಲ್ಲೂ ವಿಶೇಷ ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದಾಗ ತೆಗೆದುಕೂಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ವೈದ್ಯಕೀಯ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ವಿವರಣೆಯನ್ನು ನೀಡಿ ಸಂದೇಹಗಳಿಗೆ ಪರಿಹಾರವನ್ನು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ದಾನಿಗಳಾದ ಕಾರ್ತಿಕೇಯ ಶಿರೂರು ಹಾಗೂ ಕಮಲಬಾಯಿ ಟ್ರಸ್ಟ್ ನ ಜೀವಿತೇಶ್ವರ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುರೇಶ್ ತಲ್ಲೂರು ಸ್ವಾಗತಿಸಿದರು, ಟ್ರಸ್ಟೀ ವಸಂತ ಶಾನುಭಾಗ ವಂದಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.