ಮೂಡ್ಲಕಟ್ಟೆ ಎಂಐಟಿ: ಉದ್ಯೋಗ ಮೇಳಕ್ಕೆ ಚಾಲನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಕಾಲೇಜಿನ ಕ್ಯಾಂಪಸ್ ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಯಿತು.

Call us

Click Here

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸುರತ್ಕಲ್ ಎನ್ಐಟಿಕೆ ಯ ಪ್ರಾಧ್ಯಾಪಕರಾದ ಪ್ರೊ. ನರೇಂದ್ರನಾತ್ ಎಸ್., ಪ್ರತಿಯೊಬ್ಬರೂ ತಮ್ಮದೇ ಆದ ಧ್ಯೇಯ ಮತ್ತು ಗುರಿಯನ್ನು ಅಳವಡಿಸಿಕೊಂಡು ಅದನ್ನು ಸಾಕಾರಗೊಳಿಸುವ ಕಡೆ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರ ರಾವ್ ಮದಾನೆ ಮಾತನಾಡಿ, ಕೆಲಸ ಮಾಡುವ ಮನಸ್ಥಿತಿ ಹಾಗೂ ಶ್ರದ್ಧೆ ಇಟ್ಟುಕೊಂಡು ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.

ಕಾಲೇಜಿನ ಪ್ಲೇಸ್ಮೆಂಟ್ ಡೀನ್ ಸತ್ಯನಾರಾಯಣ, ಅಭ್ಯರ್ಥಿಗಳ ಕೌಶಲ್ಯ ಹಾಗೂ ಪ್ರತಿಭೆಗೆ ತಕ್ಕಂತಹ ಕಂಪೆನಿಗಳನ್ನು ಆಯ್ದುಕೊಳ್ಳಲು ಸಲಹೆ ನೀಡಿದರು

ಮೇಳದಲ್ಲಿ ಹೆಸರಾಂತ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪೆನಿಗಳು ಪಾಲ್ಗೊಗೊಂಡಿದ್ದು ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇವೆ,  ಮಾರ್ಚ್ 27ರಂದು ಉದ್ಯೋಗ ಮೇಳದ ಎರಡನೇ ಆವ್ರತ್ತಿ ಇರಲಿದೆ ಹಾಗೂ ನೇರ ಸಂದರ್ಶನ ಇರಲಿದ್ದು, ಉದ್ಯೋಗಾಕಾಂಕ್ಷಿಗಳು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

Click here

Click here

Click here

Click Here

Call us

Call us

ಉದ್ಯೋಗ ಮೇಳದ ಸಹಭಾಗಿತ್ವವ ಹೊಂದಿದ್ದ ಕೊಟುಂಬ್ ಸಂಸ್ಥೆಯ ಸಹ ಸಂಸ್ಥಾಪಕ ರಾದ ಹೇಮಂತ್, ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ವಿಭಾಗದ ಮುಖ್ಯಸ್ಥರು, ಸಿಬಂದಿ ವರ್ಗ ಹಾಗು ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು. ಕಾಲೇಜಿನ ಅಕಾಡೆಮಿಕ್ ಡೀನ್, ಡಾ. ಪ್ರತಿಭಾ ಎಮ್. ಪಟೇಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Leave a Reply