ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಟ್ಕಳದಿಂದ ಕೆಮ್ಮಣ್ಣುವಿಗೆ ತೆರಳುತ್ತಿದ್ದ ಸಂದರ್ಭ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಾರಿನ ಟಯರ್ ಸಿಡಿದು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಸೇರಿ ಐದು ಮಂಂದಿ ಗಾಯಗೊಂಡಿದ್ದಾರೆ.
ಕಾರು ಚಲಾಯಿಸುತ್ತಿದ್ದ ಸಿಬ್ಬತುಲ್ಲ ಎಂಬುವವರ ಪತ್ನಿ ಸುಹಾನಾ (30) ಮೃತಪಟ್ಟಿದ್ದು, ಮಕ್ಕಳಾದ ಸಾಹಿಮ್ (7), ಸಿಬ್ರಾ (4), ಮನ್ಹಾ (2), ಮೂರು ತಿಂಗಳ ಮರಿಯಮ್ ಹಾಗೂ ಸಿಬ್ಬತುಲ್ಲ ಗಾಯಗೊಂಡವರು.
ಭಟ್ಕಳದ ಪತ್ನಿ ಮನೆಯಿಂದ ಕೆಮ್ಮಣ್ಣು ಹೊಡೆಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದ್ದು, ಹೆಮ್ಮಾಡಿ ಬಳಿ ಕಾರಿನ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಸಿಬ್ಬತುಲ್ಲ ಕಾರು ಚಲಾಯಿಸುತ್ತಿದ್ದರು. ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.