ಕೋಟೇಶ್ವರ ಗಾಣಿಗ ಯುವ ಸಂಘಟನೆ: ಕ್ರೀಡಾ ಸ್ಪರ್ಧೆ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯ ಬೆಳೆಯುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಎರಡನ್ನು ಸಮವಾಗಿ ಸ್ವೀಕರಿಸಬೇಕು. ವ್ಯವಸ್ಥಿತವಾಗಿ ಕ್ರೀಡಾ ಸ್ಪರ್ಧೆಯನ್ನು ಸಂಘಟಿಸಿದ ಕೋಟೇಶ್ವರ ಗಾಣಿಗ ಯುವ ಸಂಘಟನೆಗೆ ಅಭಿನಂದನೆಗಳು ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಹೇಳಿದರು.

Call us

Click Here

ಅವರು ಕೋಟೇಶ್ವರ ಗಾಣಿಗ ಯುವ ಸಂಘಟನೆ ದಶಮಾನೋತ್ಸವದ ಪ್ರಯುಕ್ತ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗಾಣಿಗ ಸಮಾಜ ಬಾಂಧವರಿಗೆ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾದ ವಿವಿಧ ಕ್ರೀಡಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಅಭಿಲಾಷ್ ಬಿ.ಎ ವಹಿಸಿದ್ದರು.

ಕ್ರೀಡಾ ಸ್ಪರ್ಧೆಗಳಾದ ಕಪ್ಪೆ ಜಿಗಿತ, ಚೆಂಡೆಸೆತ, ಬಕೆಟ್ ಬಾಲ್, ಓಟ, ಗುಂಡೆಸೆತ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ, ಥೋಬಾಲ್, ವಾಲಿಬಾಲ್, ಕ್ರಿಕೆಟ್ ಪಂದ್ಯಾಟ ನಡೆಯಿತು.

ಕ್ರೀಡಾಕೂಟದ ಯಶಸ್ವಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ಶೆಟ್ಟಿ, ರತ್ನಾಕರ ಶೆಟ್ಟಿ, ಸುನೀಲ್, ಕೇಶುಬಾಯಿ ರಾತೋಡ್ ಮತ್ತು ಶ್ರೀಧರ ಆಚಾರ್ ಸಹಕರಿಸಿದರು.

Click here

Click here

Click here

Click Here

Call us

Call us

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಉಪಾಧ್ಯಕ್ಷ ರವಿ ಗಾಣಿಗ ಆಜ್ರಿ, ಮಾಜಿ ಅಧ್ಯಕ್ಷ ಕೊಗ್ಗ ಗಾಣಿಗ, ಮಾಜಿ ಕೋಶಾಧಿಕಾರಿಗಳಾದ ಪರಮೇಶ್ವರ ಗಾಣಿಗ, ಶಂಕರನಾರಾಯಣ ಗಾಣಿಗ, ಗೋಪಾಲ ಗಾಣಿಗ ಆನಗಳ್ಳಿ, ಆಡಳಿತ ಮಂಡಳಿಯ ಸದಸ್ಯರಾದ ಭಾಸ್ಕರ್ ಜಿ.ಕೆ, ಶ್ವೇತಾ ಗಣೇಶ್, ದೇವಕಿರಾಜು, ರವಿ ಗಾಣಿಗ ಕೆಂಚನೂರು, ಪ್ರಸಾದ್ ಕೋಡಿ, ಶಿವಾನಂದ ಉಪ್ಪುಂದ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ರಾಜೀವ ಗಾಣಿಗ ಕುಂಭಾಶಿ, ಕರ್ಣಾಟಕ ಬ್ಯಾಂಕ್ ತ್ರಾಸಿ ಶಾಖಾ ಪ್ರಬಂಧಕ ಮಂಜುನಾಥ ಬೀಜಾಡಿ, ಬಸ್ರೂರು ಹಿಂದೂ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆ.ಎಸ್, ಬೀಜಾಡಿ ಮೂಡುಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಗಾಣಿಗ, ಕಸ್ತೂರಿ ಹೆಮ್ಮಾಡಿ, ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಗೌರವಾಧ್ಯಕ್ಷ ಮಂಜುನಾಥ್ ಹೊದ್ರಾಳಿ, ಕಾರ್ಯದರ್ಶಿ ಉದಯ ಗಾಣಿಗ ಬೀಜಾಡಿ, ಕೋಶಾಧಿಕಾರಿ ಸಂತೋಷ್ ಹೊದ್ರಾಳಿ, ಮಹಿಳಾ ಸಂಘಟನೆಯ ಗೌರವಾಧ್ಯಕ್ಷೆ ಕಲಾವತಿ ಅಚ್ಯುತ್, ಪ್ರಧಾನ ಕಾರ್ಯದರ್ಶಿ ವಿಜಯ ಕೃಷ್ಣಮೂರ್ತಿ, ಕೋಶಾಧಿಕಾರಿ ಕಲ್ಯಾಣಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಭಾವತಿ ಗಾಣಿಗ ಸ್ವಾಗತಿಸಿದರು. ಯುವ ಸಂಘಟನೆಯ ಮಾಜಿ ಅಧ್ಯಕ್ಷ ನಾಗರಾಜ್ ಬಿ.ಜಿ ವಂದಿಸಿದರು. ಮಾಜಿ ಕಾರ್ಯದರ್ಶಿ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply