ಉಡುಪಿ ಜಿಲ್ಲೆಯಲ್ಲಿ ಶನಿವಾರ 10 ಮಂದಿ ಕೋವಿಡ್ ಸೊಂಕಿಗೆ ಬಲಿ. 1047 ಪಾಸಿಟಿವ್

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಶನಿವಾರ 1047 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು 10 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 645, ಕುಂದಾಪುರ, ಬೈಂದೂರು ತಾಲೂಕಿನ 347, ಕಾರ್ಕಳ, ಹೆಬ್ರಿ ತಾಲೂಕಿನ 45 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 10 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.

Call us

Click Here

Click here

Click Here

Call us

Visit Now

Click here

ಒಟ್ಟು 1047 ಪ್ರಕರಣಗಳಲ್ಲಿ 237 ಸಿಂಟಮಿಕ್ ಹಾಗೂ 810 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 27 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 1020 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ.

► ಜಿಲ್ಲಾದ್ಯಂತ ಮೇ.10ರಿಂದ ಜಾರಿಯಾಗಲಿರುವ ಲಾಕ್‌ಡೌನ್ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ಉಡುಪಿ ಜಿಲ್ಲಾಧಿಕಾರಿ – https://kundapraa.com/?p=48059 .

ಇಂದು ಉಡುಪಿಯ 75 ವರ್ಷದ ವೃದ್ಧೆ, 79 ವರ್ಷದ ವೃದ್ಧೆ, 78 ವರ್ಷದ ವೃದ್ದ, 73 ವರ್ಷದ ವೃದ್ಧೆ ಹಾಗೂ 68 ವರ್ಷದ ವೃದ್ಧೆ, ಕಾರ್ಕಳದ 76 ವರ್ಷದ ವೃದ್ಧೆ, 69 ವರ್ಷದ ವೃದ್ಧೆ, 66 ವರ್ಷದ ವೃದ್ಧೆ, 41 ವರ್ಷದ ಪುರುಷ, ಕುಂದಾಪುರದ 55 ವರ್ಷದ ಮಹಿಳೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 328 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 5958 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 2807 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಇಂದು 17 ಮಂದಿಗೆ ಮೊದಲ ಡೋಸ್, 812 ಮಂದಿಗೆ ಎರಡನೇ ಡೋಸ್ ವಾಕ್ಸಿನೇಷನ್ ಮಾಡಲಾಗಿದೆ. ಇಲ್ಲಿಯತನಕ ಒಟ್ಟು 1,94,805 ಮಂದಿಗೆ ಮೊದಲ ಡೋಸ್ ಹಾಗೂ 57,648 ಮಂದಿಗೆ ಎರಡನೇ ಡೋಸ್ ವಾಕ್ಸಿನ್ ನೀಡಲಾಗಿದೆ.

Call us

Leave a Reply

Your email address will not be published. Required fields are marked *

fourteen + three =