ಕಾರಂತರ ಬದುಕೇ ಜೀವನದ ಸಂದೇಶ: ಕೆ. ಜಯಪ್ರಕಾಶ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತರು ವಿಶ್ವ ಗುರುಗಳು ಅವರ ಜೀವನವೇ ಎಲ್ಲಾರಿಗೂ ಮಾದರಿಯಾಗಿದ್ದು, ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅಮೂಲ್ಯವಾಗಿದ್ದು ಇಂದಿನ ಯುವಕರು ಕಾರಂತರ ಬದುಕನ್ನು ಅನುಸರಿಸಿ ಅವರಂತೆ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ ಸಮಾಜಕ್ಕೆ ತನ್ನಿಂದಾದ ನೆರವು ನೀಡಬೇಕು ಎಂದು ಮುಜರಾಯಿ ಇಲಾಖೆಯ ಉಪ ಆಯುಕ್ತ ಕೆ. ಜಯಪ್ರಕಾಶ್ ಅವರು ಹೇಳಿದರು.

Call us

Click Here

ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗ ಮಂದಿರ, ಆರ್ಟ್ ಗ್ಯಾಲರಿ, ಕಿರು ಸಂಭಾಗಣ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿ ಥೀಮ್ ಪಾರ್ಕ್‌ನಲ್ಲಿ ನಡೆಯುವ ಚಟುವಟಿಕೆ, ಕಾರ್ಯಕ್ರಮಗಳು ಮಾದರಿಯಾಗಿದ್ದು ಇನ್ನಷ್ಟೂ ಅಭಿವೃದ್ಧಿ ಜೊತೆಗೆ ನಿರಂತರ ಸಾಹಿತ್ಯದ ಕಂಪು ಹರಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೊಲ್ಲೂರು ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಪಿ ಶೇಖರ್, ಅಮೃತೇಶ್ವರಿ ವ್ಯವಸ್ಥಾಪನ ಸಮಿತಿ ಸದಸ್ಯ ಸುಂದರ್ ಕೆ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್, ಸಹಾಯಕಿ ಸುಜಾತ ಉಪಸ್ಥಿತರಿದ್ದರು.

Leave a Reply