ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2020-2021ನೇ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಕುಂದಾಪುರ ಆರ್. ಎನ್. ಶೆಟ್ಟಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಸ್ತುತಿ (ಪಿಸಿಎಂಬಿ), ರಾಜೇಶ್ವರಿ ಶೆಟ್ಟಿ ಆರ್. (ಪಿ.ಸಿ.ಎಂ.ಸಿ), ಶರಣ್ಯ (ಪಿಸಿಎಂಎಸ್), ವಾಣಿಜ್ಯ ವಿಭಾಗ ಧನ್ಯ ಕೆ (ಬಿಇಬಿಎ) ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಒಟ್ಟು 478 ವಿದ್ಯಾರ್ಥಿಗಳಲ್ಲಿ 206 ವಿಶಿಷ್ಠ ಶ್ರೇಣಿ ಹಾಗೂ 255 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.