ಮಳೆಗಾಲ ಶುರುವಾಗಿದೆ. ಜೋರಾಗಿ ಸುರಿಯುವ ಮಳೆ ಖುಷಿ, ಸಂತೋಷ, ಆತಂಕವನ್ನು ತರುವುದರ ಜೊತೆಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಆಹ್ವಾನ ನೀಡುತ್ತದೆ. ಕೊರೊನಾದಂತಹ ಸಾಂಕ್ರಾಮಿಕದ ನಡುವೆ ಈ ಮಳೆಗಾಲದ ರೋಗಗಳು ನಮ್ಮನ್ನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದ್ದರಿಂದ ಇಂತಹ ರೋಗಗಳಿಂದ ಮಳೆಗಾಲದಲ್ಲಿ ನಮ್ಮ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕು.
ಸೊಳ್ಳೆಯಿಂದ ಹರಡುವ ರೋಗಗಳು:
ಮಳೆಗಾಲ ಸೊಳ್ಳೆಗಳ ಸಂತಾನೋತ್ಪತ್ತಿ ಕಾಲ. ಆದ್ದರಿಂದ ಈ ಕಾಲದಲ್ಲಿ ಹಲವಾರು ರೋಗಗಳಿಗೆ ಕಾರಣವಾಗಬಹುದು.
ಮಲೇರಿಯಾ: ಮಲೇರಿಯಾವು ಪ್ಲಾಸ್ಮೋಡಿಯಮ್ ಎಂಬ ಏಕಕೋಶೀಯ ಪರಾವಲಂಬಿಯಿಂದ ಬರುವುದು. ಇದು ಮಳೆಗಾಲದಲ್ಲಿ ಕಂಡುಬರುವ ಆರೋಗ್ಯದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ನೀರಿನ ಕಾಲುವೆಗಳು ಮತ್ತು ತೊರೆಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಉಂಟಾಗುತ್ತಿದ್ದು, ಹಲವಾರು ದಿನಗಳವರೆಗೆ ಜ್ವರ ಬರುತ್ತದೆ.
ಡೆಂಗ್ಯೂ: ಡೆಂಗ್ಯೂವು ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಉಂಟಾಗುತ್ತದೆ. ಇದು ನಿಂತ ಅಥವಾ ಶೇಖರಣೆಯಾದ ನೀರಿನಲ್ಲಿ (ಬಕೆಟ್, ಡ್ರಮ್ಸ್, ಬಾವಿಗಳು, ಮರದ ರಂಧ್ರಗಳು ಮತ್ತು ಹೂವಿನ ಮಡಿಕೆಗಳು) ಸಂತಾನೋತ್ಪತ್ತಿ ಮಾಡುತ್ತದೆ. ಕಚ್ಚಿದ ನಾಲ್ಕರಿಂದ ಏಳು ದಿನಗಳ ನಂತರ ಡೆಂಗ್ಯೂ ಬರಲಿದ್ದು, ಮೊದಲ ಲಕ್ಷಣ ಜ್ವರ ಮತ್ತು ಆಯಾಸವನ್ನು ಒಳಗೊಂಡಿದೆ.
ಚಿಕುನ್ ಗುನ್ಯಾ: ಚಿಕುನ್ ಗುನ್ಯಾವು ಈಡಿಸ್ ಅಲ್ಬೋಪಿಕ್ಟಸ್ ಸೊಳ್ಳೆಯಿಂದ ಉಂಟಾಗುವುದಲ್ಲದೇ, ಇದು ಮಾರಣಾಂತಿಕವಲ್ಲದ ವೈರಲ್ ಕಾಯಿಲೆಯಾಗಿದೆ. ಈ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಈ ಸೊಳ್ಳೆಗಳು ರಾತ್ರಿಯ ಸಮಯದಲ್ಲಿ ಮಾತ್ರವಲ್ಲದೆ ಹಗಲಿನಲ್ಲಿಯೂ ನಿಮ್ಮನ್ನು ಕಚ್ಚುತ್ತವೆ.
ಸೊಳ್ಳೆಯಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು:
ನಿಮ್ಮ ಮನೆಯಲ್ಲಿ ಸೊಳ್ಳೆ ಪರದೆಗಳನ್ನು ಬಳಸಿ ಮನೆಯ ಸುತ್ತಲೂ ಅಥವಾ ಮನೆಯಲ್ಲಿಯೂ ನೀರು ಸಂಗ್ರಹಿಸಲು ಅಥವಾ ನಿಲ್ಲಲು ಬಿಡಬೇಡಿ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ನೀವು ಮನೆಯಿಂದ ಹೊರಬರುವ ಮೊದಲು ಅಥವಾ ಒಳಗೆ ಇರುವಾಗಲೂ ಸೊಳ್ಳೆ ನಿವಾರಕಗಳು / ಕ್ರೀಮ್‌ಗಳನ್ನು ಬಳಸಿ
ನೀರಿನಿಂದ ಹರಡುವ ರೋಗಗಳು ಹೀಗಿವೆ:
ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳು ಮತ್ತೊಂದು ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳು ಈ ರೋಗಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ ಏಕೆಂದರೆ ಅವರ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ನೀರಿನಿಂದ ಹರಡುವ ಕೆಲವು ಸಾಮಾನ್ಯ ರೋಗಗಳು ಹೀಗಿವೆ: ಟೈಫಾಯಿಡ್: ಎಸ್. ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುವ ಟೈಫಾಯಿಡ್ ನೀರಿನಿಂದ ಹರಡುವ ರೋಗವಾಗಿದ್ದು, ಇದು ನೈರ್ಮಲ್ಯದ ಕೊರತೆಯಿಂದ ಉಂಟಾಗುವುದು. ತೆರೆದ ಅಥವಾ ಹಾಳಾದ ಆಹಾರವನ್ನು ಸೇವಿಸುವುದು ಅಥವಾ ಕಲುಷಿತ ನೀರನ್ನು ಕುಡಿಯುವುದು ಟೈಫಾಯಿಡ್ ನ ಎರಡು ಪ್ರಮುಖ ಕಾರಣಗಳಾಗಿವೆ. ತಲೆನೋವು, ಕೀಲು ನೋವು, ಜ್ವರ ಮತ್ತು ಗಂಟಲು ನೋವು ಟೈಫಾಯಿಡ್ ನ ಲಕ್ಷಣಗಳಾಗಿವೆ.
ಕಾಲರಾ: ಕಳಪೆ ನೈರ್ಮಲ್ಯ ಮತ್ತು ಕಲುಷಿತ ಆಹಾರದ ಕಾರಣದಿಂದಾಗಿ, ಕಾಲರಾವು ಉಂಟಾಗಬಹುದು. ಕಾಮಾಲೆ( ಹಳದಿ ಕಾಯಿಲೆ) ಕಳಪೆ ನೈರ್ಮಲ್ಯ, ಕಲುಷಿತ ನೀರು ಮತ್ತು ಆಹಾರದಿಂದ ಕಾಮಾಲೆ ಉಂಟಾಗುತ್ತದೆ. ಇದು ಆಯಾಸ, ಹಳದಿ ಮೂತ್ರ, ವಾಂತಿ ಮತ್ತು ಹಳದಿ ಕಣ್ಣುಗಳಂತಹ ಲಕ್ಷಣಗಳನ್ನು ಹೊಂದಿರುತ್ತದೆ.
ಹೆಪಟೈಟಿಸ್ ಎ: ಇದು ವೈರಲ್ ಸೋಂಕು, ಇದು ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಇದು ನಿಮ್ಮ ಯಕೃತ್ತನ್ನು ಹಾನಿಗೊಳಿವುದಲ್ಲದೇ, ಉಬ್ಬುವಿಕೆಗೆ ಕಾರಣವಾಗುವುದು. ಹೆಪಟೈಟಿಸ್ ನ ಲಕ್ಷಣಗಳು ಆಯಾಸ, ಜ್ವರ, ಹಳದಿ ಕಣ್ಣುಗಳು, ಹೊಟ್ಟೆಯ ಮೃದುತ್ವ, ಗಾಢ ಬಣ್ಣದ ಮೂತ್ರ ಮತ್ತು ಹಸಿವಿಲ್ಲದಿರುವುದು.
ನೀರಿನಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು:
ಸೇವಿಸುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ ಆಹಾರವನ್ನು ಮುಚ್ಚಿಡಿ ಹೊರಗಿನ ಆಹಾರವನ್ನು ಸೇವಿಸಬೇಡಿ ವೈಯಕ್ತಿಕ ಮತ್ತು ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ ನಿಮ್ಮ ಮಕ್ಕಳಿಗೆ ಸಮಯಕ್ಕೆ ಲಸಿಕೆ ನೀಡಿ
ಗಾಳಿಯಿಂದ ಹರಡುವ ರೋಗಗಳು:
ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ, ಮಕ್ಕಳು ಮತ್ತು ವೃದ್ಧರು ಮಳೆಗಾಲದಲ್ಲಿ ಗಾಳಿಯಿಂದ ಹರಡುವ ಸೋಂಕನ್ನು ಪಡೆಯುವ ಸಾಧ್ಯತೆ ಹೆಚ್ಚು. ಶೀತ ಮತ್ತು ಜ್ವರ: ಶೀತ ಮತ್ತು ಜ್ವರವು ಸಾಮಾನ್ಯ ವೈರಲ್ ಸೋಂಕುಗಳಾಗಿದ್ದು, ಮಳೆಗಾಲದಲ್ಲಿ ತಾಪಮಾನದಲ್ಲಿನ ಹಠಾತ್ ಏರಿಳಿತದಿಂದಾಗಿ ಉಂಟಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯು ಈ ಸಣ್ಣ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಇದು ಮೂಗು ಸೋರುವಿಕೆ, ಗಂಟಲು ನೋವು, ಕಣ್ಣಿನಲ್ಲಿ ನೀರು ಬರುವುದು, ಜ್ವರ ಮತ್ತು ಶೀತಗಳಿಂದ ಕೂಡಿದೆ.
ಗಾಳಿಯಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು: ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿ ಕೆಲವು ಗಂಟೆಗಳಿಗೊಮ್ಮೆ ಬೆಚ್ಚಗಿನ ನೀರನ್ನು ಕುಡಿಯಿರಿ ಈಗಾಗಲೇ ಸೋಂಕಿಗೆ ಒಳಗಾದ ಜನರಿಂದ ನಿಮ್ಮ ಮಕ್ಕಳನ್ನು ದೂರವಿಡಿ ನೀವು ಮನೆಗೆ ಹಿಂತಿರುಗಿದ ನಂತರ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯುವುದು ಖಚಿತಪಡಿಸಿಕೊಳ್ಳಿ
ಕುಂದಾಪ್ರ ಡಾಟ್ ಕಾಂ ಲೇಖನ
ಇದನ್ನೂ ಓದಿ:
► ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದದ ಟಿಪ್ಸ್ – https://kundapraa.com/?p=49896 .
► ಮನೆಯಲ್ಲಿ ಈ ಗಿಡಗಳಿದ್ದರೆ ಸೊಳ್ಳೆಗಳು ಬರುವುದೇ ಇಲ್ಲ! – https://kundapraa.com/?p=49236 .