ಮನೆಯಲ್ಲಿ ಈ ಗಿಡಗಳಿದ್ದರೆ ಸೊಳ್ಳೆಗಳು ಬರುವುದೇ ಇಲ್ಲ!

Call us

Call us

Call us

ಸೊಳ್ಳೆಗಳು ಯಾವುದೇ ಕಾಲಮಾನಕ್ಕೆ ಸೀಮಿತವಾಗದೇ ಎಲ್ಲಾ ಹವಾಮಾನದಲ್ಲೂ ಕಾಡುವ ಮಾರಣಾಂತಿಕ ಕೀಟವಾಗಿದೆ. ಯಕಶ್ಚಿತ್ ಸೊಳ್ಳೆ ಎಂದು ನಿರ್ಲಕ್ಷಿಸಿದರೆ ಅತ್ಯಂತ ಭೀಕರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

Call us

Click Here

ಸೊಳ್ಳೆಯಿಂದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಜಿಕಾ ವೈರಸ್, ಜ್ವರ, ಎನ್ಸೆಫಾಲಿಟಿಸ್ಗಳಂತಹ ಗಂಭೀರ ಕಾಯಿಲೆಗಳು ಹರಡುತ್ತವೆ. ಈ ಖಾಯಿಲೆಗಳು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇನ್ನು ನೀವೇನಾದರೂ ಸಾಕುಪ್ರಾಣಿಗಳನ್ನು ಸಾಕಿದ್ದರೆ ಅದರಲ್ಲೂ ನಾಯಿಗಳ ಹೃದಯದ ಹುಳುಗಳಿಗೆ ಸೊಳ್ಳೆಗಳೇ ಕಾರಣವಾಗುತ್ತದೆ. ಆದ್ದರಿಂದ ಇದು ಕೇವಲ ಕಿರಿಕಿರಿ ಅಥವಾ ಕಡಿತದ ಬಗ್ಗೆ ಅಷ್ಟಕ್ಕೇ ಸೀಮಿತಗೊಳಿಸದೇ ಇದು ಮನೆಗೆ ನುಸುಳದಂತೆ ಎಚ್ಚರಿಕೆ ವಹಿಸಬೇಕಿದೆ.

ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಗಳು, ರಿಪೆಲ್ಲೆಂಟ್ ಸ್ಪ್ರೇಗಳು ಲಭ್ಯವಿದ್ದರೂ ಬಹುತೇಕ ರಾಸಾಯನಿಕಗಳಿಂದ ಕೂಡಿರುತ್ತದೆ, ಇವು ಮತ್ತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೈಸರ್ಗಿಕವಾಗಿಯೇ ಯಾವುದೇ ರಾಸಾಯನಿಕ ಇಲ್ಲದೇ, ಮನೆಯಲ್ಲೇ ಕೆಲವು ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ನಿವಾರಣೆ ಮಾಡಬಹುದು. ಈ ಗಿಡಗಳಿದ್ದರೆ ಸೊಳ್ಳೆಗಲು ಮನೆಗೆ ಬರುವುದೇ ಇಲ್ಲ, ಯಾವೆಲ್ಲಾ ಗಿಡಗಳು, ಹೇಗೇ ಇದು ಸೊಳ್ಳೆ ನಿವಾರಣೆಗೆ ಸಹಕಾರಿ ಎಂಬುದನ್ನು ತಿಳಿಯೋಣ.

ತುಳಸಿ: ಸೊಳ್ಳೆ ನಿವಾರಿಸುವ ಸಸ್ಯಗಳ ಪಟ್ಟಿಯಲ್ಲಿ ತುಳಸಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಇದಕ್ಕೆ ವಿಶೇಷ ಮಹತ್ವವಿದೆ, ಪ್ರತಿಯೊಬ್ಬರ ಬೆಳೆಯುವ ಪೂಜ್ಯನೀಯ ಗಿಡ ಇದಾಗಿದೆ. ಇದು ಕೀಟ ನಿವಾರಕವಾಗಿ ಕಾರ್ಯನಿರ್ವಹಿಸುವ ಸಸ್ಯವಾಗಿದೆ. ತುಳಸಿ ಎಲೆಗಳ ಬಲವಾದ ವಾಸನೆಯು ಸೊಳ್ಳೆಗಳನ್ನು ನಿಮ್ಮ ಮನೆಯಿಂದ ದೂರವಿರಿಸಲು ಸಹಾಯ ಮಾಡುತ್ತದೆ. ತುಳಸಿಯು ತೇವಾಂಶವನ್ನು ಬಯಸುತ್ತದೆ, ಅದಕ್ಕಾಗಿ ಹೇರಳವಾದ ನೀರು ಮತ್ತು ಸಾಕಷ್ಟು ಸೂರ್ಯನ ಬೆಳಕು ಬೇಕು. ಸಸ್ಯವನ್ನು ಪಾತ್ರೆಗಳಲ್ಲಿ ಅಥವಾ ಪಾಟ್ಗಳಲ್ಲಿ ಬೆಳೆಸಬಹುದು. ಅಲ್ಲದೆ ಇದು ಗಿಡಮೂಲಿಕೆಯ ಇತರ ಅನೇಕ ಪ್ರಯೋಜನಕಾರಿ ಅಂಶ ಹೊಂದಿದೆ.

ಚೆಂಡು ಹೂ ಸಸ್ಯ: ಚೆಂಡು ಹೂ ಅಥವಾ ಸಸ್ಯ ನಮಗೆ ಹೊಸತೇನಲ್ಲ. ಬಹುತೇಕರ ಮನೆಗಳಲ್ಲಿ ಸುಲಭವಾಗಿಯೇ ಬೆಳೆಯಬಹುದಾದ ಸಸ್ಯಇದಾಗಿದೆ, ಇದು ಸುಲಭವಾಗಿ ಬೆಳೆಯುವ ಹೂವಾಗಿದ್ದು, ಇದು ಸೊಳ್ಳೆಗಳನ್ನು ತಡೆಯುವ ವಾಸನೆಯನ್ನು ಪಸರಿಸುತ್ತದೆ. ಸೊಳ್ಳೆಗಳು ಮನೆಗ ಬರದಂತೆ ತಡೆಯಲು ಅವುಗಳನ್ನು ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಸಹ ಇಡಬಹುದು. ಚೆಂಡು ಹೂ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವುದಲ್ಲದೆ, ಅವು ವೈಟ್ಫ್ಲೈಸ್, ಗಿಡಹೇನುಗಳು, ಥ್ರೈಪ್ಸ್ ಮತ್ತು ಟೊಮೆಟೊ ಹಾರ್ನ್ವರ್ಮ್ಗಳನ್ನು ಸಹ ತಡೆಯುತ್ತವೆ.

Click here

Click here

Click here

Click Here

Call us

Call us

ನಿಂಬೆ ಹುಲ್ಲು: ಮತ್ತೊಂದು ಸೊಳ್ಳೆ ನಿವಾರಕ ಸಸ್ಯ ನಿಂಬೆ ಹುಲ್ಲು, ಇದನ್ನು ಸಿಂಬೊಪೊಗನ್ ಸಿಟ್ರೇಟ್ ಎಂದೂ ಕರೆಯುತ್ತಾರೆ. ಇದರ ಹೂವು ಸಿಟ್ರೊನೆಲ್ಲಾವನ್ನು ಹೊಂದಿದ್ದು, ಇದು ಕೀಟವನ್ನು ಹಿಮ್ಮೆಟ್ಟಿಸುವ ನೈಸರ್ಗಿಕ ತೈಲವಾಗಿದೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಶಾಖಾಹಾರಿ ಭಕ್ಷ್ಯಗಳಲ್ಲಿ ಪರಿಮಳವನ್ನು ತರಲು ಲೆಮನ್ಗ್ರಾಸ್ ಅನ್ನು ಬಳಸಲಾಗುತ್ತದೆ. ಭಾರತದಲ್ಲಿ ಈ ಸಸ್ಯವನ್ನು ಉರಿಯೂತದ ಔಷಧಿಯಾಗಿ ಬಳಸಲಾಗುತ್ತದೆ. ನಿಂಬೆ ಹುಲ್ಲು ಸುಂದರವಾದ ಸುವಾಸನೆಯನ್ನು ಹೊಂದಿದ್ದು ಇದನ್ನು ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ.

ರೋಸ್ಮರಿ ಸಸ್ಯ: ರೋಸ್ಮರಿ ಎಂಬುದು ನಿಮಗೆ ಪರಿಚಿತವಾಗಿರುವ ಆರೊಮ್ಯಾಟಿಕ್ ಸಸ್ಯವಾಗಿದೆ ಮತ್ತು ಅವುಗಳ ಸುವಾಸನೆಯು ಸೊಳ್ಳೆಗಳನ್ನು ನಿಮ್ಮ ಮನೆಯಿಂದ ದೂರವಿರಿಸುತ್ತದೆ. ರೋಸ್ಮರಿ ಗಿಡಗಳು ಬೆಚ್ಚಗಿನ ಮತ್ತು ಶುಷ್ಕ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುವುದರಿಂದ ಅದನ್ನು ಸುಲಭವಾಗಿ ಪಾತ್ರೆಗಳಲ್ಲಿ ಬೆಳೆಸಬಹುದು. ರೋಸ್ಮರಿ ನೋಡಲು ಸಹ ಅಲಂಕಾರಿಕವಾಗಿದ್ದು, ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ನಿಮ್ಮ ತೋಟದಲ್ಲಿ ರೋಸ್ಮರಿಯನ್ನು ಇಟ್ಟುಕೊಳ್ಳುವುದರ ಮೂಲಕ ಸೊಳ್ಳೆಗಳು ಮಾತ್ರವಲ್ಲದೆ ಅನೇಕ ಕೀಟಗಳನ್ನು ಸಹ ನೀವು ನಿವಾರಿಸಬಹುದು ಅಲ್ಲದೇ, ಗಿಡಮೂಲಿಕೆಗಳ ಸುಂದರವಾದ ಸುಗಂಧವನ್ನು ಆನಂದಿಸಬಹುದು.

ಕ್ಯಾಟ್ನಿಪ್ / ನೇಪೆಟಾ ಕ್ಯಾಟರಿಯಾ ಕ್ಯಾಟ್ನಿಪ್ ಅಥವಾ ನೇಪೆಟಾ ಕ್ಯಾಟರಿಯಾ ಸಸ್ಯ:  ನೇಪೆಟಾ ಕ್ಯಾಟರಿಯಾ ಸಸ್ಯ ಸಾಂಪ್ರದಾಯಿಕ ರಾಸಾಯನಿಕ ದ್ರವೌಷಧವಾಗಿದ್ದು, ವಿಷಕಾರಿಯಲ್ಲದ ವಾತಾವರಣವನ್ನು ಶುದ್ಧಗೊಳಿಸುವ ಸಸ್ಯವಾಗಿದೆ. ಹೀಗೆ ಹಲವಾರು ಗಿಡಗಳು ಬೆಳೆಸುವುದರ ಮೂಲಕ ನಿಮ್ಮ ಮನೆಯನ್ನು ಸುಳ್ಳೆಯಿಂದ ಮುಕ್ತವಾಗಿಸಬಹುದು.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply