ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಲಭ್ಯವಿರುವ ಕಾಳ ಮೆಣಸು ಪುನಃಶ್ಚೇತನ, ಅಣಬೆ ಉತ್ಪಾದನಾ ಘಟಕಗಳು ಸ್ಫಾಪನೆ, ಕೃಷಿ ಹೊಂಡಗಳ ನಿರ್ಮಾಣ, ಸಮಗ್ರ ಪೀಡೆ/ ಪೋಷಕಾಂಶಗಳ ನಿರ್ವಹಣೆ 20 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಟ್ರಾಕ್ಟರ್ ಖರೀದಿಗೆ, ಪ್ಯಾಕ್ ಹೌಸ್ ಘಟಕ ನಿರ್ಮಾಣಕ್ಕೆ, ಪ್ರಾಥಮಿಕ/ ಬಹುಪಯೋಗಿ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಒಣಗಿಸಲು ನಿರ್ಮಾಣ ಮಾಡುವ ಸೋಲರ್ ಡ್ರೆಯರ್ ಗಳಲ್ಲಿ ಉಪಯೋಗಿಸುವ ಸಿಲ್ ಪಾಲಿನ ಹಾಳೆಗಳಿಗೆ ಸಹಾಯ ಧನ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಉಡುಪಿ ಜಿಲ್ಲೆಯ ತೋಟಗಾರಿಕೆ ನಿರ್ದೇಶಕರ ಕಚೇರಿ 0820-2531950, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಉಡುಪಿ ತಾಲೂಕು 0820-2522837, ಕುಂದಾಪುರ ತಾಲೂಕು 08254-230813 ಹಾಗೂ ಕಾರ್ಕಳ ತಾಲೂಕು 08258-230288 ನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.