ಪುಂಡಲೀಕ ನಾಯಕ್‌ಗೆ ಕರ್ನಾಟಕ ವಿಭೂಷಣ ರಾಜ್ಯಪ್ರಶಸ್ತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್, ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ನಿಮಿತ್ತ ಹತ್ತಾರು ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇಲ್ಲಿನ ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಕವಿ, ಸಂಘಟಕ ಕೆ. ಪುಂಡಲೀಕ ನಾಯಕ್ ಅವರನ್ನು ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Call us

Click Here

ನಾಯಕ್ ಸಹಕಾರಿ ರಂಗದಲ್ಲಿ ದುಡಿದು ನಿವೃತ್ತರಾದ ಬಳಿಕ ಸಾಹಿತ್ಯದಲ್ಲಿ ಆಸಕ್ತಿ ತಾಳಿ, ಕವನ ರಚನೆ ಆರಂಭಿಸಿದರು. ಈಗಾಗಲೆ ಅವರ ಮೂರು ಸಂಕಲನಗಳು ಪ್ರಕಟವಾಗಿವೆ. ಸಾಹಿತ್ಯ ಸಂಘಟನೆಯಲ್ಲೂ ತೊಡಗಿರುವ ಅವರು ಎರಡು ರಾಜ್ಯ ಮಟ್ಟದ ಕವಿಗೋಷ್ಟಿ, ಸಾಹಿತ್ಯ ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದಾರೆ. ರಾಜ್ಯದ ವಿವಿಧೆಡೆ ನಡೆದ ಕವಿಗೋಷ್ಠಿಗಳಲ್ಲಿ ತಮ್ಮ ಕವನ ವಾಚಿಸಿದ್ದಾರೆ.

25ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಷ್ಠಾನದ 30ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು ಎಂದು ಪ್ರಕಟಿಸಲಾಗಿದೆ.

Leave a Reply