ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೆಕ್ಕೆ ಒಕ್ಕೂಟದಲ್ಲಿ ನಾಲ್ಕು ಹೊಸ ತಂಡಗಳ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು, ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟದಲ್ಲಿ ನೂತನವಾಗಿ ನಾಲ್ಕು ಹೊಸ ತಂಡಗಳ ಉದ್ಘಾಟನಾ ಕಾರ್ಯಕ್ರಮ
ಜರುಗಿತು.

Call us

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಕ್ಕೆ ಒಕ್ಕೂಟ ಅಧ್ಯಕ್ಷರಾದ ಎಂ.ಜೆ. ಬೇಬಿ ವಹಿಸಿದ್ದರು. ಕೊಲ್ಲೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.

ವಲಯ ಮೇಲ್ವಿಚಾರಕ ರಾಮ್ ಎನ್. ನಾಲ್ಕು ಹೊಸ ತಂಡದ ಸದಸ್ಯರಿಗೆ ದಾಖಲಾತಿ ಹಸ್ತಾಂತರಿಸಿ ತಂಡದ ಸಭಾ ನಡವಳಿಕೆ ಮತ್ತು ಜವಾಬ್ದಾರಿಗಳನ್ನು ತಿಳಿಸಿದರು. ಯೋಜನೆಯ ನಿಕಟವರ್ತಿ ದಿನೇಶ್ ಶಾಸ್ತ್ರೀ, ರಾಜು ನಾಯ್ಕ ಮೇಲ್ ಕೆಂಜಿ, ಒಕ್ಕೂಟದ ಉಪಾಧ್ಯಕ್ಷ ಸೂಲ್ಯ ಪೂಜಾರಿ, ಕಾರ್ಯದರ್ಶಿ ವಿದ್ಯಾ, ಜೊತೆ ಕಾರ್ಯದರ್ಶಿ ಶ್ಯಾಮಲಾ, ಕೋಶಾಧಿಕಾರಿ ಮಂಜುನಾಥ್ ನಾಯ್ಕ ಉಪಸ್ಥಿತರಿದ್ದರು.

ಕೊಳಲು ತಂಡದ ಸದಸ್ಯ ಸತೀಶ್ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ನೂತನ ನಾಲ್ಕು ತಂಡದ ಸದಸ್ಯರ ಕುಟುಂಬದವರು ಹಿರಿಯ ತಂಡಗಳ ಸದಸ್ಯರು ಹಾಜರಿದ್ದರು. ತಂಡ ಉದ್ಘಾಟನಾ ಸವಿನೆನಪಿಗಾಗಿ ನಾಲ್ಕು ತಂಡಕ್ಕೆ ಗಿಡಗಳನ್ನು ನೀಡಲಾಯಿತು. ಮೆಕ್ಕೆ ಒಕ್ಕೂಟದ ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಿದ್ಯಾ ಕಾರ್ಯಕ್ರಮ ನಿರ್ವಹಿಸಿ, ಸ್ಪಂದನ ತಂಡದ ಸದಸ್ಯೆ ವಸಂತಿ ವಂದಿಸಿದರು.

Leave a Reply