ವಿನಾಯಕ ಕೋಡ್ಸರ, ಬೆಂಗಳೂರು
ಈಗೊಂದು 7 ವರ್ಷದ ಕೆಳಗಿನ ಮಾತು. ದಾವಣಗೆರೆಯ ಯಾವುದೋ ಮೆಡಿಕಲ್ ಕಾಲೇಜು ಸಂಭಾಗಣದಲ್ಲಿ ಕಾರ್ಯಕ್ರಮ. ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಇದೆ ಅಂದಮೇಲೆ ಕೇಳುವುದು ಬೇಡ! ಸಭಾಂಗಣ ಕಿಕ್ಕಿರಿದಿತ್ತು. ಎಂದಿನಂತೆ ಭರ್ಜರಿ ಭಾಷಣ. ಮಾತು ಮುಗಿದ ಮೇಲೆ ಒಂದು 50-60 ಜನ ಬಂದು ಅವರಿಗೆ ಕೈಕುಲುಕುವುದು, ಸಾರ್ ನಾವು ದೇಶಸೇವೆ ಮಾಡಬೇಕು ಅನ್ನುವುದು ಮಾಮೂಲು. ಅದ್ರಲ್ಲಿ ಕೆಲವ್ರು ಆಸಕ್ತಿಯಿಂದ ಮತ್ತೆ ಸಂಪರ್ಕಕ್ಕೆ ಬರುತ್ತಾರೆ. ಹಲವರು ಹಾಗೆ ಮರೆತು ಹೋಗುತ್ತಾರೆ. ಕಾರ್ಯಕ್ರಮ ಎಲ್ಲ ಮುಗಿದ ಮೇಲೆ ಓರ್ವ ಮಹಿಳೆ ಬಂದ್ರು. ಅವರು ಡಾಕ್ಟರ್ ಅಂತೆ. ‘ಸಾರ್ ನಾನೊಂದು ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ತುಂಬಾ ಅದ್ಭುತವಾದ ಜಾಗ. ಇವತ್ತು ರಾತ್ರಿ ಅಲ್ಲೇ ಊಟ ಮಾಡಬೇಕು’ ಅಂದ್ರು. ಬೆಂಗಳೂರಿನಿಂದ ಹೋಗಿದ್ದು ನಾವಿಬ್ಬರು ಮಾತ್ರ. ಸರಿ ಆಯ್ತು ಅಂತ ಹೊರಟ್ವಿ.
ಆ ಮಹಿಳೆ ಕರೆದುಕೊಂಡು ಹೋಗಿದ್ದು ಒಂದು ಅನಾಥಾಶ್ರಮಕ್ಕೆ. ಡಾಕ್ಟರ್ ಆಗಿರುವ ಮಹಿಳೆ ತಣ್ಣಗೆ ಒಂದಿಪ್ಪತ್ತೈದು ಮಕ್ಕಳನ್ನು ಸಾಕುತ್ತಿದ್ದಾರೆ. ಜೊತೆಗೆ ಒಂದೆರಡು ಸಣ್ಣ-ಪುಟ್ಟ ಸಂಸ್ಥೆಗಳು ಅವರೊಂದಿಗೆ ಕೈಜೋಡಿಸಿವೆ. ಆ ಮಕ್ಕಳು ಚಿತ್ರ ಬಿಡಿಸುವುದು, ಹಾಡುವುದು ಎಲ್ಲ ನೋಡಿ ನಮಗೆ ಎದೆ ಚುರ್ ಅಂತು. ಆ ವೈದ್ಯೆಯ ಮೇಲೆ ಅಭಿಮಾನವೂ ಹೆಚ್ಚಾಯ್ತು. ನಮ್ಮಿಬ್ಬರಿಗೂ ಅದೊಂದು ಅವಿಸ್ಮರಣೀಯ ಘಳಿಗೆ.
ಯಸ್, ಒಬ್ಬ ಚಕ್ರವರ್ತಿಯ ಸುತ್ತ ಸಿಗುವುದು ಬರೀ ಇಂಥದ್ದೆ ಅನುಭವಗಳು. ಅವರ ಭಾಷಣ ಕೇಳುತ್ತಿದ್ರೆ ಒಂದಷ್ಟು ಜನಕ್ಕೆ ರೋಷ ಉಕ್ಕಿಬರುತ್ತೆ. ಬ್ರಿಟಿಷರ ಕಾಲದ ಕಥೆ ಹೇಳುತ್ತಿದ್ದರೆ ಚಚ್ಚಿ ಬಿಡಬೇಕು ಅನ್ನಿಸುತ್ತೆ. ಇನ್ನು ಹಲವರಿಗೆ ಅವೆಲ್ಲ ಸುಳ್ಳು ಅನ್ನಿಸುತ್ತೆ. ಇತಿಹಾಸ ಯಾವತ್ತಿದ್ರೂ ಇತಿಹಾಸ. ಅದನ್ನು ಕಂಡವರಿಲ್ಲ. ಹೀಗಾಗಿ ಅದು ಬರಹಗಾರನ ಇತಿಹಾಸ. ನೀವು ಯಾರು ಬರೆದಿದ್ದನ್ನು ಓದುತ್ತೀರೋ ಅದರ ಮೇಲೆ ಇತಿಹಾಸ ಅವಲಂಬಿಸಿರುತ್ತೆ. ಚಕ್ರವರ್ತಿ ಬರೀ ಬಲಪಂಥೀಯ ಇತಿಹಾಸ ಓದಿಕೊಂಡು ಭಾಷಣ ಬಿಗಿಯುತ್ತಾರೆ ಅಂತ ಅನೇಕ ಬುದ್ಧಿಜೀವಿಗಳು ಆರೋಪಿಸುತ್ತಾರೆ. ಅವರು ಎಲ್ಲವನ್ನೂ ಓವರ್ ಆಗಿ ಹೇಳ್ತಾರೆ ಎನ್ನುತ್ತಾರೆ. ‘ಅಲ್ಲ ನೀವು ಸತ್ಯ ಮುಚ್ಚಿಟ್ಟು ಬ್ರಿಟಿಷ್ ಅಧಿಕಾರಿಗಳ ಪಾಠ ಹೇಳಿಕೊಟ್ರಿ. ವಾಸ್ಕೋಡಿಗಾಮ ಗ್ರೇಟ್ ಅಂದ್ರಿ ಬಿಟ್ಟರೆ ಉದ್ದಮ್ ಸಿಂಗ್ ಬಗ್ಗೆ ಎಲ್ಲೂ ಹೇಳಲೇ ಇಲ್ಲ. ಭಾರತೀಯರು ಭಾರತೀಯರಿಗೆ ಮೋಸ ಮಾಡಿದಷ್ಟು ಹೇಳಿದ್ರಿ ಬಿಟ್ರೆ, ಬ್ರಿಟಿಷರು ಮೋಸ ಮಾಡಿದ್ರು ಎಂಬ ಇತಿಹಾಸ ಮುಚ್ಚಿಟ್ರಿ’ ಎಂಬ ಅವರ ಮರು ಉತ್ತರಕ್ಕೆ ಯಾರೂ ಮಾತೇ ಆಡಲ್ಲ ಅನ್ನೋದು ನಂತರದ ಮಾತು ಬಿಡಿ!
ಈ ಮಾನವೀಯತೆ, ಕೋಮುವಾದ ಅಂತ ಹಲವರು ಭಯಂಕರ ಭಾಷಣ ಬಿಗಿಯುತ್ತಾರೆ. ಸತ್ಯವಾಗ್ಲು ಇವತ್ತಿಗೂ ನಂಗೆ ಅದೆಲ್ಲ ಏನು ಅರ್ಥ ಆಗಿಲ್ಲ. ದೇಶಭಕ್ತಿ, ರಾಷ್ಟ್ರಸೇವೆ ಮಾತಾಡುವ ಚಕ್ರವರ್ತಿಗೆ ಅಭಿಮಾನಿಗಳಷ್ಟೆ ವಿರೋಧಿಗಳಿದ್ದಾರೆ. ಅವರನ್ನು ಹಿಂದುತ್ವದ ಐಕಾನ್ ಎಂಬಂತೆ ಬಿಂಬಿಸುತ್ತಾರೆ. ಮಜ ಅಂದ್ರೆ ಅವರೆಲ್ಲೂ ಮುಸ್ಲಿಂರನ್ನೋ, ಕ್ರೈಸ್ತರನ್ನೋ ವಿರೋಧಿಸುವುದು ಹಿಂದೂತ್ವ ಎಂದಿಲ್ಲ. ನಮ್ಮ ದೇಶದ ಸಂಸ್ಕೃತಿ, ಬದುಕಿನ ಪದ್ಧತಿಯ ಹಿಂದುತ್ವದ ಬಗ್ಗೆ ಮಾತಾಡಿದವರು.
ಸೂಲಿಬೆಲೆ ಹೊಸಕೋಟೆ ತಾಲೂಕಿನ ಪುಟ್ಟ ಊರು. ಚಕ್ರವರ್ತಿ ತಂದೆ ಮೇಷ್ಟ್ರು ಆಗಿದ್ದವರು. ಸೂಲಿಬೆಲೆಯಲ್ಲೊಂದು ಸ್ವಂತ ಮನೆಯನ್ನು ಕಟ್ಟಿದ್ದಾರೆ. ಅವರ ಮನೆಯಲ್ಲೊಂದು ಕುಟುಂಬ ಇದೆ. ಅದು ಗೌಸ್‌ಫೀರ್ ಕುಟುಂಬ. ಮನೆ ಕೆಲಸ ಮಾಡುವ ಗೌಸ್‌ಫೀರ್, ಸುಲ್ತಾನ್, ರಜಿಯಾ ಎಲ್ಲರೂ ಮನೆಯ ಸದಸ್ಯರಂತೆ ಜೊತೆ ಕುಳಿತು ಊಟ ಮಾಡ್ತಾರೆ. ದೇವ್ರಾಣೆ ಅವರ‍್ಯಾರಿಗೂ ಈ ಕೋಮುವಾದ, ಹಿಂದುತ್ವ ಏನು ಗೊತ್ತಿಲ್ಲ. ನೀವು ಸೂಲಿಬೆಲೆಗೆ ಹೋದ್ರೆ ನಿಮಗಲ್ಲಿ ಜಾತಿ, ದೇಶ, ಭಾಷೆ ಯಾವುದೂ ಕಾಣಿಸಿಲ್ಲ. ಅಲ್ಲಿ ಸಿಗೋದೊಂದೇ, ಅದು ಅಮ್ಮನ ಪ್ರೀತಿ. ಚಕ್ರವರ್ತಿ ಜೊತೆಗೆ ಯಾರೇ ಅಪರಿಚಿತರು ಆ ಮನೆಗೆ ಹೋದ್ರೂ ಕೊನೆಗವ್ರು ಆ ಮನೆಯ ಸದಸ್ಯರಾಗುತ್ತಾರೆ.
ಒಂದ್ಸಲ ಮೈಸೂರಿನಲ್ಲಿ ಕಾರ್ಯಕ್ರಮ. ಸಂಜೆ ಎಬಿವಿಪಿ ಸದಸ್ಯರೊಬ್ಬರ ಮನೆಗೆ ಊಟಕ್ಕೆ ಹೋದ್ವಿ. ಮಂಡ್ಯ, ಮೈಸೂರು ನಡುವೆ ಎಲ್ಲೋ ಬರುತ್ತೆ ಅವರ ಮನೆ. ತುಂಬಾ ಪ್ರೀತಿಯಿಂದ ಊಟಕ್ಕೆ ಕರೆದಿದ್ರು. ವಾಸ್ತವವಾಗಿ ನಾವಿಬ್ಬರು ಏನೋ ತಿಂದುಕೊಂಡು ಹೋಗಿದ್ವಿ. ಆದ್ರೆ ಆ ಮನೆಯವರಿಗೆ ಚಕ್ರವರ್ತಿ ಊಟಕ್ಕೆ ಬರಬೇಕು ಅಂತ ಬಹುದಿನದ ಆಸೆಯಂತೆ. ಹಿಂದೆ ಹಲವು ಸಲ ಕರೆದಿದ್ರಂತೆ ಕೂಡ. ಆವತ್ತಿನ ಊಟ ನಿಜವಾಗ್ಲೂ ಬದುಕಿನಲ್ಲಿ ನೆನಪಿನಲ್ಲಿ ಉಳಿಯುತ್ತೆ. ಅದೆಷ್ಟು ಪ್ರೀತಿ ಇತ್ತು ಅಂದ್ರೆ, ‘ಛೇ ಜನ ಎಷ್ಟು ಪ್ರೀತಿಸ್ತಾರೆ. ಇವ್ರೆಲ್ಲ ತುಂಬ ಕೆಳಮಟ್ಟದ ಕಾರ್ಯಕರ್ತರು ವಿನಾಯಕ. ಆವತ್ತಿನ ದುಡಿಮೆ ಇದ್ರೆ ಮಾತ್ರ ಇವ್ರಿಗೆ ಆವತ್ತಿನ ಊಟ. ಆದ್ರೆ ಅದ್ಯಾವುದನ್ನು ಲೆಕ್ಕಿಸದೆ ಸಂಘ, ಸೇವೆ ಅಂತ ಬರ್ತಾರೆ’ ಅಂದಿದ್ರು.
ಒಬ್ಬ ಚಕ್ರವರ್ತಿಯ ಸುತ್ತ ಖಂಡಿತವಾಗಿಯೂ ಒಂದು ಹತ್ತು ಲಕ್ಷ ರೂ. ಹೊಂದಿರುವ ವ್ಯಕ್ತಿ ಸಿಗಲಾರ. ಸಿಗೋರೆಲ್ಲ ಇಂಥವ್ರೆ. ಒಬ್ಬರಿಗಿಂತ ಒಬ್ಬರದ್ದು ಅದ್ಭುತವಾದ ಕಥೆಗಳು. ಎಲ್ಲರಿಗೂ ಒಂದೇ ಹಂಬಲ. ಬದುಕಿದ್ದಕ್ಕೆ ಸಾರ್ಥಕ ಆಗಬೇಕು. ದೇಶಕ್ಕೆ ಏನಾದ್ರು ಮಾಡಬೇಕು!
‘ರೀ ಸ್ವಾಮಿ ನಿಮಗೆ ಮಾಡೋಕೆ ಬೇರೆ ಕೆಲ್ಸ ಇಲ್ಲ. ನೀವಿಲ್ಲಿ ದೇಶ, ದೇಶ ಅಂತ ಬಡ್ಕೋಳಿ. ಅಲ್ಲವರು ಆರಾಮವಾಗಿ ಕೊಳ್ಳೆ ಹೊಡೆದು ಚೆನ್ನಾಗಿ ತಿಂದು ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ತಾರೆ. ನೀವೋಬ್ಬರು ಹಾಳಾಗಿದ್ದು ಸಾಲ ಅಂತ ಆ ಹುಡುಗ್ರನ್ನು ಹಾಳು ಮಾಡಿ’ ಅಂತ ಆವಾಗವಾಗ ಬಯ್ಯುತ್ತ ಇರ್ತಿದ್ದೆ. ಖಂಡಿತ ಅವರು ಯಾರನ್ನೂ ನನ್ನ ಜೊತೆ ಬನ್ನಿ ಎಂದು ಕರೆದಿಲ್ಲ ಮತ್ತು ಕರೆಯುವುದಿಲ್ಲ. ಅವ್ರಿಗೆ ಒಂದು ತಂಡ ಕಟ್ಟಬೇಕು, ಏನೋ ಮಾಡಬೇಕು ಎಂಬ ಹಂಬಲವೂ ಇಲ್ಲ ಅಥವಾ ಜೊತೆಗೆ ಬಂದವರಿಗೆಲ್ಲ ಕೊಡ್ಲಿಕ್ಕೆ ಅವರ ಹತ್ರ ಏನು ಕೆಲಸವೂ ಇಲ್ಲ. ‘ರಾಷ್ಟ್ರಸೇವೆ, ಜಾಗೃತಿ ನನ್ನ ಕೆಲಸ. ನನ್ನ ಪಾಡಿಗೆ ನಾನು ಮಾಡ್ತಾ ಹೋಗ್ತೀನಿ. ಜೊತೆಗೆ ಬರುವವರು ಬರಬಹುದು’ ಎಂಬ ಲೆಕ್ಕಾಚಾರ. ಅವರಾಗಿಯೇ ಬಂದ್ರೆ ಆ ಹುಡುಗರಿಗೆ ಬರಬೇಡಿ ಎನ್ನಲು ಸಾಧ್ಯವಿಲ್ಲ!
ಒಂದು ಲಕ್ಷ ಜನ ಭಾಷಣ ಕೇಳಿ ಥ್ರಿಲ್ ಆಗಿರುತ್ತಾರೆ. ಅದ್ರಲ್ಲಿ 99,900 ಜನ ಆ ಭಾಷಣವನ್ನು ಕಾಂಪೌಂಡ್‌ನಿಂದ ಹೊರಗೆ ಹೋಗುತ್ತಿದ್ದಂತೆ ಮರೆಯುತ್ತಾರೆ. ಖಂಡಿತ ಒಬ್ಬ ಅನಾಥ ಹುಡುಗನಿಗೆ 100ರೂ. ಪ್ರೀತಿಯಿಂದ ಕೈಯೆತ್ತಿ ಕೊಡಲ್ಲ. ಅದ್ರ ಪ್ರಯೋಜನ ಏನು ಅನ್ನೋದು ನನ್ನ ವಾದ. ’ಲಕ್ಷದಲ್ಲಿ 100 ಜನ ಇನ್ನೊಬ್ಬರಿಗೆ ಸಹಾಯ ಮಾಡಿದ್ರು ಸಾಕು. ಇವತ್ತಿನ ಭಾಷಣ ಸಾರ್ಥಕ’ ಎಂಬುದು ಅವರ ಉತ್ತರ.
ಏನಿಲ್ಲ ಅಂದ್ರು ಇವತ್ತು 1,000 ಜನ ಅವ್ರಿಂದಾಗಿ ಬದ್ಲಾಗಿದ್ದಾರೆ. ಇದ್ದಿದ್ರಲ್ಲಿ ಸ್ವಲ್ಪವನ್ನು ಬೇರೆಯವರಿಗೆ ಹಂಚಿಕೊಂಡು ತಿನ್ನುವುದನ್ನು, ಅಸಹಾಯಕರಿಗೆ ಸಹಾಯ ಮಾಡುವುದನ್ನು ಕಲಿತ್ತಿದ್ದಾರೆ. ಅದು ಅವರ ಬದುಕಿನ ಸಾರ್ಥಕತೆ.
ಚಕ್ರವರ್ತಿ ಸೂಲಿಬೆಲೆ ಅವ್ರು ನನ್ನನ್ನು ಸೇರಿಸಿ ನೂರಾರು ಜನ್ರಿಗೆ ಅಣ್ಣ. ಅದ್ಕೆ ಹೇಳಿದ್ದು ಒಬ್ಬ ಸಿದ್ಧರಾಮಯ್ಯ ಹೋದ್ರೆ ಮತ್ತೊಬ್ಬ ಬರ್ತಾನೆ. ಆದ್ರೆ ಒಬ್ಬ ಚಕ್ರವರ್ತಿ ಹಾಗಲ್ಲ ಅಂತ. ದುಡ್ಡು ಮಾಡಿಕೊಳ್ಳುವುದಿದ್ರೆ ಅಥವಾ ಬದುಕಿನಲ್ಲಿ ಬೇರೆ ಇನ್ನು ಏನೇ ಮಾಡಿಕೊಳ್ಳುವುದಿದ್ದರು ಅವರ ಪ್ರತಿಭೆಗೆ ಯಾವುದೂ ಅಸಾಧ್ಯವಲ್ಲ. ಅಂದಹಾಗೆ ಚಕ್ರವರ್ತಿ ಒಂದು ಸಲ ಭಾಷಣಕ್ಕೆ ಬಂದ್ರೆ ಎಷ್ಟು ಚಾರ್ಜ್ ಮಾಡ್ತಾರೆ ಅಂತ ಬಹಳಷ್ಟು ಜನ ನನ್ನ ಬಳಿ ಕೇಳಿದ್ದಾರೆ. ಅವರು ಏನು ಜಾರ್ಜ್ ಮಾಡಲ್ಲ. ಬಳ್ಳಾರಿಯಲ್ಲಿ ಭಾಷಣ ಅಂದ್ರೆ, ಅಲ್ಲಿನ ಟಿಕೆಟ್ ಮತ್ತು ವಸತಿ ವ್ಯವಸ್ಥೆ ಮಾಡಬೇಕು ಅಷ್ಟೆ. ಅದ್ರ ಮೇಲೆ ಒಂದು ರೂಪಾಯಿ ಕೊಟ್ಟರು ಅದನ್ನು ಅವರ ಸ್ವಂತಕ್ಕೆ ಬಳಸುವುದಿಲ್ಲ. ಹಾಗಂತ ಅವರಿಗೆ ಬೇರೆ ಯಾವುದೇ ರೀತಿಯ ದುಡಿಮೆ ಇಲ್ಲ. ಲೇಖನ ಬರೆದು, ಟಿವಿಗೆ ಕಾರ್ಯಕ್ರಮ ಕೊಟ್ಟು ಅವರು ವೈಯಕ್ತಿಕವಾಗಿ ದುಡಿದುಕೊಳ್ಳುವ ಹಣವೇ ಅವರ ಸಂಪಾದನೆ ಹೊರತು ಯಾವುದೇ ಸಾರ್ವಜನಿಕ ಕಾರ್ಯಕ್ರಮದಿಂದ ಬಂದಿದಲ್ಲ. ಹಾಗಾಗಿಯೇ ರಾಜ್ಯದ ಮುಖ್ಯಮಂತ್ರಿಗೆ ಚಕ್ರವರ್ತಿ ಗೊತ್ತಿಲ್ಲದೇ ಹೋದ್ರು, ನನ್ನಂಥ ಸಾವಿರಾರು ಮಂದಿಗೆ ಗೊತ್ತು.
ರಾಷ್ಟ್ರಶಕ್ತಿ ಕೇಂದ್ರ ಚಕ್ರವರ್ತಿಯಿಂದ ಸ್ಪೂರ್ತಿ ಪಡೆದ ಹುಡುಗರು ಕಟ್ಟಿದ ಸಂಘಟನೆ. ಆನೇಕಲ್‌ನ ಜಿಗಣಿ ಫ್ಯಾಕ್ಟರಿಯಲ್ಲಿ ಒಂದಷ್ಟು ಹುಡುಗರು ಕೆಲಸ ಮಾಡುತ್ತಾರೆ. ಅವರಿಗೆಲ್ಲ ರಾಷ್ಟ್ರಸೇವೆಯ ಹುಚ್ಚು. ಹಾಗಂತ ಒಂದು ಹೊತ್ತು ಕೆಲಸ ಮಾಡ್ಲಿಲ್ಲ ಅಂದ್ರೆ, ಅದು ಅವರ ಮನೆಯ ಆರ್ಥಿಕತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆದ್ರೂ ಅವ್ರೆಲ್ಲ ಶಿಫ್ಟ್ ಬದ್ಲು ಮಾಡಿಕೊಂಡು ರಾಷ್ಟ್ರಕ್ಕೆ ಏನೋ ಒಂದಷ್ಟು ಮಾಡುತ್ತಾರೆ ಅಂದ್ರೆ, ಖಂಡಿತ ಅದ್ರ ಹಿಂದೆ ಒಬ್ಬ ಚಕ್ರವರ್ತಿ ಇದ್ದಾರೆ. ಕುಂದಾಪ್ರ ಡಾಟ್ ಕಾಂ.
ಹೀಗೆ ಹೇಳುತ್ತ ಹೋದ್ರೆ ನನ್ನ ಹತ್ರ 3 ಪುಸ್ತಕಕ್ಕೆ ಆಗುವಷ್ಟು ಸರಕಿದೆ! ನಂಗೊಂದು ಭಯಂಕರ ಆಸೆಯಿತ್ತು. ಅದು ಅವ್ರು ಚುನಾವಣೆಗೆ ನಿಲ್ಲಬೇಕು ಅಂತ. ಕಾರಣವಿಷ್ಟೆ ಇಡೀ ದೇಶದಲ್ಲಿ ಒಂದು ವಿಧಾನಸಭೆ ಮಾದರಿ ಕ್ಷೇತ್ರ ಅನ್ನಿಸಿಕೊಳ್ಳಬೇಕು. ಅಲ್ಲಿ ಬಡವರಿರಬಾರದು, ಭ್ರಷ್ಟಾಚಾರ ಇರಬಾರದು ಇತ್ಯಾದಿ, ಇತ್ಯಾದಿ. ಚಕ್ರವರ್ತಿ ಏನಾದ್ರೂ ಎಂಎಲ್‌ಎ ಆದ್ರೆ ಅದು ಸಾಧ್ಯವಾಗಬಹುದು ಅಂತಿತ್ತು. ’ಹಾಲು ಎಷ್ಟೆ ಚೆನ್ನಾಗಿದ್ರು, ಪಾತ್ರೆ ಕೆಟ್ಟಿದ್ರೆ ಹಾಲು ಒಡೆಯುತ್ತೆ’ ಎಂಬುದು ಅವರ ಉತ್ತರ. ಎಂಎಲ್‌ಎ ಆಗ್ಲಿಕ್ಕೆ 250 ಜನ ಇದಾರೆ. ಆದ್ರೆ ರಾಷ್ಟ್ರಸೇವೆಗೆ ಯಾರೂ ಇಲ್ಲ. ನಾನು ಅಲ್ಲಿ ಹೋದ್ರೆ ಇಲ್ಲಿ ನನ್ನ ಕೆಲಸ ಯಾರು ಮಾಡುತ್ತಾರೆ ಎಂಬ ಅವರ ವಾದಕ್ಕೆ ಖಂಡಿತ ಉತ್ತರವಿಲ್ಲ!

ಫೈನಲಿ, ನನ್ನ ಪಾಲಿಗೆ ಚಕ್ರವರ್ತಿ ಅಂದ್ರೆ ಅನಾಥಾಶ್ರಮ, ಬಡವರು, ಅಸಹಾಯಕರು ಎಲ್ಲಕ್ಕಿಂತ ಹೆಚ್ಚಾಗಿ ರಾಮಕೃಷ್ಣ ಆಶ್ರಮ, ಸ್ವಾಮಿ ವಿವೇಕಾನಂದ ಆದರ್ಶಗಳು ಎಲ್ಲವೂ ಹೌದು. ಅವರು ದುಡ್ಡು ಕೊಡಬೇಕು, ಸಹಾಯ ಮಾಡಬೇಕು ಅಂತಿಲ್ಲ. ಆದ್ರೆ ಸಹಾಯ ಮಾಡುವ ನೂರಾರು ಕೈಗಳನ್ನು ಸೃಷ್ಟಿಸುತ್ತಾರೆ. ಅವರಂತೆ ಬದುಕಲು, ಆ ಪರಿ ದೇಶವೆಂಬ ಹುಚ್ಚುತನದಲ್ಲಿ ತಿರುಗಾಡಲು ನಮಗ್ಯಾರಿಗೂ ಸಾಧ್ಯವಿಲ್ಲ. ನಿಜವಾಗ್ಲೂ ಅದೊಂಥರ ದೇವ್ರು ಅವ್ರಿಗೆ ಕೊಟ್ಟ ಶಕ್ತಿ. ಅವ್ರಮ್ಮ ಮದ್ವೆ ಆಗು ಅಂತ ಅದೆಷ್ಟು ಸಲ ಹೇಳಿದ್ರೂ, ಅದನ್ನು ಲೆಕ್ಕಿಸದೆ ರಾಷ್ಟ್ರ, ರಾಷ್ಟ್ರ ಅಂತ ಸದಾ ಮುನ್ನುಗುವ ಅವರ ವ್ಯಕ್ತಿತ್ವಕ್ಕೆ ರಿಪ್ಲೆಸ್‌ಮೆಂಟ್ ಎಂಬ ಕಷ್ಟ. ಕುಂದಾಪ್ರ ಡಾಟ್ ಕಾಂ
ಈ ಲೇಖನ ಓದುವ ನಿಮಗೆಲ್ಲ ಇದು ಒಂಚೂರು ಜಾಸ್ತಿನೇ ಹೊಗಳಿಕೆ ಅನ್ನಿಸಬಹುದು. ಆದ್ರೆ ತೀರಾ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ಹೆಚ್ಚಾಯಿತು ಅನ್ನಿಸೊಲ್ಲ. ನಾನು ಸೂಟ್‌ಕೇಸ್‌ನಲ್ಲಿ ನಾಲ್ಕು ಬಟ್ಟೆ ಹಾಕಿಕೊಂಡು ಆವತ್ತು ಅನಾಥವಾಗಿ ಬೆಂಗಳೂರಿಗೆ ಬಂದು ಇವತ್ತು ಹೀಗಿದ್ದೇನೆ ಅಂದ್ರೆ, ಸುತ್ತಲಿನ ಕೊಳಕುಗಳ ನಡುವೆಯೂ ಎಲ್ಲೋ ಕಷ್ಟ ನೋಡಿದಾಗ ಕಣ್ಣಂಚು ಒಂಚೂರು ಒದ್ದೆ ಮಾಡಿಕೊಳ್ಳುವ ಮನಸ್ಥಿತಿ ಉಳಿದಿದೆ ಎಂದ್ರೆ, ಖಂಡಿತ ಅದ್ರ ಹಿಂದೆ ಚಕ್ರವರ್ತಿಯವರ ವ್ಯಕ್ತಿತ್ವದ ಪ್ರಭಾವ ಇದೆ./ ಕುಂದಾಪ್ರ ಡಾಟ್ ಕಾಂ/
ಲೇಖಕರು ವೃತ್ತಿಯಲ್ಲಿ ಪತ್ರಕರ್ತರು. ಪ್ರಸ್ತುತ ಟಿ.ವಿ. ಮಾಧ್ಯಮವೊಂದರಲ್ಲಿ ದುಡಿಯುತ್ತಿದ್ದಾರೆ
ವಿನಾಯಕ ಅವರ ಬ್ಲಾಗ್: ಅಕ್ಷರ ವಿಹಾರ
***
ಇಲ್ಲಿ ಪ್ರಕಟವಾದ ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವೇ ಆಗಿರುತ್ತದೆ
ಮಾಧ್ಯಮಗಳ ಮೂಲಕ ಒಬ್ಬ ವ್ಯಕ್ತಿಯನ್ನು ಅರಸನಾಗಿಯೂ ಆಳಾಗಿಯೂ ಮಾರ್ಪಡಿಸಬಹುದು… ಸೂಲಿಬೆಲೆ ಎಂಬ ಪಕ್ಕಾ ದಲಿತ ವಿರೋಧಿ,ಕ್ರಿಮಿನಲ್ ಬಾಯಿಬಡುಕನನ್ನು ಯಾವ ಪುರುಷಾರ್ಥಕ್ಕಾಗಿ ಹೀರೋ ಮಾಡಿದ್ದೀರೆಂದು ತಿಳಿಯುತ್ತಿಲ್ಲ… ಇಲ್ಲಿ ನೈಜ ವಿಷಯವೆಂದರೆ ಇದರ ಶೀರ್ಷಿಕೆ ಮಾತ್ರ….
Spr…God gives a better gift not for me. But for my state….that is. Chakravarti…
Hi my name is Donna and I just wanted to drop you a quick note here instead of calling you. I discovered your ಚಕ್ರವರ್ತಿ ಎಂಬ ಕೋಮುವಾದಿಯ ಕುರಿತು! | Kundapra.com ಕುಂದಾಪ್ರ ಡಾಟ್ ಕಾಂ page and noticed you could have a lot more hits. I have found that the key to running a successful website is making sure the visitors you are getting are interested in your subject matter. There is a company that you can get targeted visitors from and they let you try their service for free for 7 days. I managed to get over 300 targeted visitors to day to my website. Check it out here: http://s.t0m-s.be/2X
Chakravarty sir nimage kotti kotti nammaskara
Chakravati Sir is very great person.
thanks for giving such a good information abt chakravarthi sir.
Nanna jeevanadalli athi santasada galige yendare adu…SNP seriddu…..neevu prati baariyu namma sahayakke barutheeri….neevilladidhare SNP huttirutitho illavo…Hrudaya Poorvaka Danyavadagalu Anna….nimmage naanu yendigu chiraruni…..
snp andre enu madam…?
ನನ್ನ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅಲುಕಾಡದೆ ಕೂತು ಭಾಷಣ ಕೇಳಿದೆ ಅಂದರೆ ಅದು ಚಕ್ರವರ್ತಿ ಸೂಲಿಬೆಲೆಯವರದು ಅಂಹ ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ.. ಆದರೆ ಮಂಗಳೂರು ಜನತೆಗೆ ಕುಮಾರಿ ಸೌಜನ್ಯ ಪ್ರಕರಣದಲ್ಲಿ ದ್ರೋಹ ಮಾಡಿದರು. ಯಾಕೆ ಬಡವರ ಬಗ್ಗೆ ಕಾಲಜಿ ಇರುವ ಮತ್ತು ದುರ್ಬಲ ಕಾನೂನಿನ ವಿರುದ್ಧವಾಗಿರುವ ಚಕ್ರವರ್ತಿ ಅಣ್ಣ ಸೌಜನ್ಯ ನ್ಯಾಯಕ್ಕಾಗಿ ಒಂದೆರಡು ಮಾತಡಾಬೇಕಿತ್ತು.-ಕುಂತಿಪುತ್ರ
ಅಕ್ಷರಶಃ ನಿಜಾ ವಿನಾಯಕ್ ಅವರೇ… ಸೂಲಿಬೆಲೆಯವರು ಸಾವಿರಾರು ಜನರಿಗೆ ದಾರಿ ದೀಪ..
Hindu Hrudaya Samrat.
“Rashtra Devo Bhava” e jagruti mudisuva karya madutiruva Chakravarthi Sir avaru ,namma ellarigu adarsha.
ವಿನಾಯಕ ಅಣ್ಣ ಚಕ್ರವರ್ತಿ ಸರ್ ಮೇಲೆ ಮೊದಲೇ ತುಂಬಾನೆ ಅಭಿಮಾನ ಇತ್ತು ಮತ್ತೆ ನಿಮ್ಮ ಈ ಬ್ಲಾಗ್ ಓದಿ ಅವರ ಮೇಲೆ ಅಭಿಮಾನ ಇನ್ನು ಜಾಸ್ತಿ ಆಯಿತು. ಅವರ ಯಾವುದೇ ಭಾಷಣವನ್ನು ಲೈವ್ ನಲ್ಲಿ ಕುಳಿತು ಕೇಳಿಲ್ಲ ಆದ್ರೆ ಅವರು ಈ ವರೆಗೆ ಮಾಡಿದ ಎಲ್ಲಾ ಭಾಷಣಗಳ ವಿಡಿಯೋ ನನ್ನ ಹತ್ರ ಇವೆ. ಆ ಕಾಲದಲ್ಲಿ ಏಕಲವ್ಯ ಹೇಗೆ ದ್ರೋಣಾಚಾರ್ಯರ ಮೂರ್ತಿಯನ್ನು ಪೂಜಿಸಿ ವಿದ್ಯೆ ಪಡಕೊಂಡನೊ ಹಾಗೆ ನನ್ನಂತ ಅನೇಕ ಯುವಕರಿಗೆ ಸ್ಪೂರ್ಥಿ ಅವರು. ಅದರಲ್ಲೂ ಅವರು ನಮ್ಮ ಕರ್ನಾಟಕದವರು ಅನ್ನೋದು ನಮ್ಮ ಹೆಮ್ಮೆಯ ಸಂಗತಿ. ನಮ್ಮ ಈಗಿನ ಯುವಪಿಳಿಗೆಗೆ ರೋಲ್ ಮಾಡಲ್ ಅವರು. ಅವರ ಬಗ್ಗೆ ಸಿದ್ದರಾಮಯ್ಯನವರಿಗೆ ಮಾತನಾಡಲು ಯೋಗ್ಯತೆನು ಇಲ್ಲ.
Really superb man , he is one of the youth icon in Karnataka
supper…
great person
keep writing boss….
Really very nice writing
chakravthi is not leader of karnataka to know about him for CM,CM knows about all,Chakravathi is follower of MODI,HE is trying to become CM of karnataka
Let him be… Let Karnataka get an Intelligent and Sensible CM
Thanks for the beautiful information Vinayak sir. .
Keep your writing going on …
Thanks again…
Thumbha sogasaagidey
Thanks for gud information about Chakravarthi sir.. Vinayak keep write like this
Nice thought about chakravarthi sir… Thanks for gud information.. Vinayak keep write like this
ies grat myan Karnatkad vevakanda bartha mhtaya hamay puttra jai hind
Ies grat myn karnatakda vevakanda bhrata mathay hmmaya putrra jai hinda
E article odutta nanneradu
Kannugalu oddeyadavu…
Anna-nannu aradhisuv bhaktaralli naanu obba Vinayaka….
I heard the speech of chakravati sir n read books written by him… Excellent
At last we came to know his final intention of entering into politics. How selfish?
ಕರ್ನಾಟಕ ಯುವಜನತೆಯ ಹ್ರುದಯದಲ್ಲಿ ಸದಾ ಚೈತನ್ಯದಚಿಲುಮೆಯಗಿ. ಯುವಜನತೆಯ ನಾಯಕ ನಮ್ಮ ಅಣ್ಣ ಸೂಲಿಬೆಲೆ ಚಕ್ರವರತಿ. ಇವರ ಬಗ್ಗೆ ತಿಳಿಯದೆ ಮತನಾಡುವ ಮೂರ್ಖರ ಬಗ್ಗೆ ಮಾತನಾಡುವದು ದೊಡ್ಡ ತಪ್ಪು.
Our karnataka CM don’t know about the legends.
Would want chakravarthy to be Next CM of Karnataka
DEAR VINAYAK,
I KNOW VERY LITTLE ABOUT CHAKRAVARTI. BUT I HEARD 3-4 SPEECH OF HIM . I DO AGREE 100% WHAT YOU SAY. I ADMIRE AND APPLAUSE MR. CHAKRAVARTI…..
GANESH BHAT
Nice One… Good Writing..!!