ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ವಚ್ಛ ಕಡಲ ತೀರ, ಹಸಿರು ಕೋಡಿ ಅಭಿಯಾನದ ಮೂರನೆಯ ಹಂತವನ್ನು ಬ್ಯಾರೀಸ್ ವಿದ್ಯಾ ಸಂಸ್ಥೆ, ಕುಂದಾಪುರ ಪುರಸಭೆ ಮತ್ತು ಕೋಡಿ ಮಹಾಜನರ ಸಹಯೋಗದೊಂದಿಗೆ ಹಳಅಳಿವೆಯಿಂದ ಕೋಡಿಯ ಸೀ ವಾಕ್ ವರೆಗಿನ 4 ಕಿಲೋ ಮೀಟರ್ ದೂರದ ಕಡಲ ತೀರ ಹಾಗೂ ತೀರದ ಪಕ್ಕದಲ್ಲಿರುವ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಹಮ್ಮಿಕೊಳ್ಳಲಾಯಿತು. ಪುರಸಭೆಯ ಸಹಕಾರದೊಂದಿಗೆ ಕಸದ ವಿಲೇವಾರಿ ಮಾಡಲಾಯಿತು.
ಈ ಅಭಿಯಾನದ ನಿರಂತರ ಪ್ರಕ್ರಿಯೆಯಾಗಿ ಪ್ರತಿ ತಿಂಗಳ ಕೊನೆಯ ರವಿವಾರ ನಡೆಸಲಾಗುವುದು ಮತ್ತು ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಈ ಕಾರ್ಯವನ್ನು ಕುಂದಾಪುರ ಜನರ ಆದ್ಯತೆ ಹಾಗೂ ಆಶಯವಾಗಿ ರೂಪಿಸುವ ಇಚ್ಛೆಯನ್ನು ಬ್ಯಾರೀಸ್ ಗ್ರೂಪಿನ ಛೇರ್ಮನ್ ಸಯ್ಯದ್ ಮೊಹಮ್ಮದ್ ಬ್ಯಾರಿ ವ್ಯಕ್ತಪಡಿಸಿದರು.
ಬ್ಯಾರೀಸ್ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಕುಂದಾಪುರ ಪುರಸಭೆಯ ಕೌನ್ಸಿಲರ್ ಗಳು, ಶಿಕ್ಷಕರು, ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.