ತೆಕ್ಕಟ್ಟೆ ಕೊಮೆ ವಿಶೇಷಚೇತನ ಸಾಧಕ ಕೃಷಿಕ ನಾಗರಾಜ್ ಮೊಗವೀರ ಅವರಿಗೆ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಂ ಸುದ್ದಿ.
ಕೋಟ:
ಈ ದೇಶದ ಪ್ರಮುಖ ಆಸ್ತಿ ಕೃಷಿ ಮತ್ತು ಋಷಿ ಪರಂಪರೆ ಅದನ್ನು ಎಂದು ಮರೆಯಬಾರದು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ಕೆ. ವಿ ರಮೇಶ್ ರಾವ್ ಹೇಳಿದ್ದಾರೆ.

Call us

Click Here

ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದಲ್ಲಿ ಬುಧವಾರ 13 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಕ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ಜೀವನ ನಡೆಯಲು ಸಾಧ್ಯವಿದೆ ಇಲ್ಲವಾದಲ್ಲಿ ಆಧುನಿಕ ಜಗತ್ತು ಪ್ಲಾಸ್ಟಿಕ್ ಅನ್ನ ಬಳಕೆ ಮಾಡುವ ಸ್ಥಿತಿ ಸೃಷ್ಠಿಯಾಗಬಹುದು. ಆದರೆ ಅಂತಹ ರೈತನ ಗೋಳು ಇಂದಿನ ಸರಕಾರ ಕೇಳದ ಸ್ಥಿತಿ ನಿರ್ಮಾಗೊಳಿಸಿದೆ.ಹೀಗಾದರೆ ಕೃಷಿ ಉಳಿಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.ರೈತ ಸಮುದಾಯ ಯಾವುದೇ ಬೆಳೆ ಬೆಳೆದರೂ ಅದಕ್ಕೆ ಸಮರ್ಪದ ದರ ಆಯಾ ಸಂದರ್ಭದಲ್ಲಿ ಸಿಗದಿರುವುದು ಶೋಚನೀಯ,ಈ ಎಲ್ಲಾ ಸಮಸ್ಯೆಗಳಿಗೆ ಆಡಳಿತ ನಡೆಸುವ ಸರಕಾರಗಳೇ ನೇರ ಹೊಣೆಗಾರರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಧ್ಯಯನಶೀಲ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು ಮಾತನಾಡಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಯಾರ ಪಾಲಾಗುತ್ತಿದೆ ಕೇಳಿದರೆ ಅದು ಖಾಸಗಿ ಮೀಲ್ ದಾರರಿಗೆ ವರವಾಗಿ ಪರಿಣಮಿಸಿದೆ.ತಾನು ಬೆಳೆದ ಬೆಳೆಗೆ ಸೂಕ್ತ ದರ ಸರಕಾರ ಘೋಷಿಸಬೇಕು ಆದರೆ ಸರಕಾರ ನಿರ್ಲಕ್ಷ್ಯ ತೋರಿದ ಪರಿಣಾಮ ಈ ಪರಿಸ್ಥಿತಿ ಸಿಲುವ ಸ್ಥಿತಿ ನಿರ್ಮಾಣಗೊಂಡಿದೆ.

ಒಂದಿಷ್ಟು ಸಂಘಸಂಸ್ಥೆಗಳು ರೈತನ ಮನೆಬಾಗಿಲಿಗೆ ತೆರಳಿ ಗೌರವಿಸುವ ಕಾರ್ಯ ಇದೆಯಲ್ಲ ಅದು ರೈತನನ್ನು ಇಮ್ಮಡಿಗೊಳಿಸುತ್ತದೆ. ಜೀವನದಲ್ಲಿ ಸರ್ವಶ್ರೇಷ್ಠ ಯಾವುದು ಕೇಳಿದರೆ ಅದು ರೈತಕಾಯಕ ಎಂದರೆ ಅತಿಶಯೋಕ್ತಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Click here

Click here

Click here

Click Here

Call us

Call us

ಈ ಸಂದರ್ಭದಲ್ಲಿ ತೆಕ್ಕಟ್ಟೆಯ ಕೊಮೆ ವಿಶೇಷಚೇತನ ಸಾಧಕ ಕೃಷಿಕ ನಾಗರಾಜ್ ಮೊಗವೀರ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎ.ಪಿ.ಎಮ್.ಸಿ ಉಡುಪಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ,ಗಿಳಿಯಾರು ಯುವಕ ಮಂಡಲದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೇರ್ಳೆ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ವಿಪ್ರ ಮಹಿಳಾ ಬಳಗದ ಸಂಚಾಲಕಿ ವನೀತಾ ಉಪಾಧ್ಯ,ಸ್ಮೀತಾ ,ಪಂಚವರ್ಣ ಯುವಕ ಮಂಡಲ ಇದರ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಸದಸ್ಯ ಭಾಸ್ಕರ ದೇವಾಡಿಗ,ನಾಗರಾಜ ಪೂಜಾರಿ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಪ್ರ ಮಹಿಳಾ ಬಳಗದ ಸುಜಾತ ಮಹೇಶ್ ಬಾಯರಿ ನಿರೂಪಿಸಿದರು ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿ ವಂದಿಸಿದರು. ಸಂಚಾಲಕ ಅಜಿತ್ ಆಚಾರ್ಯ ಸಹಕರಿಸಿದರು.

Leave a Reply