ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರಿ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿಗಳ ಕುಂದಾಪುರ ಪುರಸಭೆ ಹಾಗೂ ಕಂದಾವರದಲ್ಲಿರುವ ಪುರಸಭೆಯ ಡಂಪಿಂಗ್ ಯಾರ್ಡ್‌ಗೆ ಶುಕ್ರವಾರ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪುರಸಭೆಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ವಿಂಗಡನೆ, ಗೊಬ್ಬರ ಸಿದ್ದಪಡಿಸುವ ಯಂತ್ರಗಳ ಕೆಲಸ, ತ್ಯಾಜ್ಯ ನೀರು ಸಂಸ್ಕರಣ ಘಟಕದ ಒಂದು ತೊಟ್ಟು ನೀರು ಹೊರಗೆ ಬಿಡದೆ, ಶುದ್ದೀಕರಿಸಿ ಗಿಡಗಳಿಗೆ ಉಣಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು. ಬಳಿಕ ವಿದ್ಯಾರ್ಥಿಗಳು ಪುರಸಭೆ ಕಚೇರಿಗೆ ಭೇಟಿ ನೀಡಿದರು.
ವಿದ್ಯಾರ್ಥಿಗಳಿಗೆ ತ್ಯಾಜ್ಯ ನಿರ್ವಹಣೆ ಬಗ್ಗೆ ಕ್ವಿಜ್ ನಡೆಸಲಾಗಿದ್ದು, ತ್ಯಾಜ್ಯ ಸಮಪರ್ಕಕ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
ಕುಂದಾಪುರ ಪುರಸಭೆಯಲ್ಲಿ ಇಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ ಎನ್ನೋದು ನಮಗೆ ಗೊತ್ತೇಯಿರಲಿಲ್ಲ. ತ್ಯಾಜ್ಯ ನಿರ್ವಹಣೆ, ಗೊಬ್ಬರ ತಯಾರಿಕೆ ನಿಜಕ್ಕೂ ಅಚ್ಚರಿ. ನಾವು ಇನ್ನುಮುಂದೆ ತ್ಯಾಜ್ಯ ಕುರಿತು ಮನೆಯಲ್ಲಿ ಜಾಗೃತಿ ಮೂಡಿಸಿ, ಆದಷ್ಟು ತ್ಯಾಜ್ಯ ಕಡಿಮೆ ಆಗುವಂತೆ ಪ್ರಯತ್ನಿಸುತ್ತೇವೆ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದಾರೆ.
ಪ್ರತಿದಿನ ಪುರಸಭೆಯಲ್ಲಿ 14 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದರಲ್ಲಿ 10 ಟನ್ ಪ್ಲಾಸ್ಟಿಕ್ ಇರುತ್ತದೆ. ಎಲ್ಲೆಂದರಲ್ಲಿ ಬಿಸಾಡುವ ಕೋಳಿ ತ್ಯಾಜ್ಯ ಪುರಸಭೆಗೆ ನೀಡುವಂತೆ ವಿನಂತಿ ಮಾಡಿದ್ದರಿಂದ ಕೋಳಿ ತ್ಯಾಜ್ಯ ಸಂಗ್ರಹಿಸಿ ಬೆಲ್ಲದ ನೀರು, ವೇಸ್ಟ್ ತರಕಾರಿ ಸೇರಿಸಿ ಗೊಬ್ಬರ ಸಿದ್ದ ಪಡಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ಪುರಸಭೆಯೊಂದು ತ್ಯಾಜ್ಯ ವಿಲೇವಾರಿ, ಗೊಬ್ಬರ ತಯಾರು, ಅತ್ಯಾಧುನಿಕ ಯಂತ್ರಗಳ ಬಳಕೆ ಮೂಲಕ ಮಾಡುತ್ತಿರುವುದು ಕುಂದಾಪುರ ಪುರಸಭೆ ಮೊದಲನೆಯದಾಗಿದೆ. ಪ್ರತಿ ತಿಂಗಳು ೧೦ ಟನ್ ಉತ್ಪತ್ತಿ ಮಾಡಿದ ಗೊಬ್ಬರ ರೈತರು ಪಡೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕದೆ. ಗೊಬ್ಬರ ಗುಣಮಟ್ಟ ಮದ್ರಾಸ್ ಹಾಗೂ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರೀಕ್ಷೆ ನಡೆಸಿದ್ದು, ಒಳ್ಳೆಯ ಪೌಷ್ಟಿಕಾಂಶ ಇರುವ ಗೊಬ್ಬರ ಎನ್ನುವ ಸರ್ಟಿಫಿಕೇಟ್ ನೀಡಿದ್ದಾರೆ. ವಿದ್ಯಾರ್ಥಿಗಳು ತ್ಯಾಜ್ಯ ಸಮಸ್ಯೆ ಕಣ್ಣಾರೆ ಕಂಡಿದ್ದು, ತಮ್ಮ ಮನೆಯಲ್ಲಿ ತ್ಯಾಜ್ಯ ಬಗ್ಗೆ ಮನೆಯವರಲ್ಲಿ ಜಾಗೃತಿ ಮೂಡಿಸಿ, ಆದಷ್ಟು ತ್ಯಾಜ್ಯ ಕಡಿಮೆ ಮಾಡುವಂತೆ ಪ್ರಯತ್ನಿಸಬೇಕು. – ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ
ಈ ವೇಳೆ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ ಖಾರ್ವಿ, ನಾಮ ನಿರ್ದೇಶಕ ಸದಸ್ಯೆ ಪುಷ್ಪಾ ಶೇಟ್, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕರಾದ ಅರಣ್ ಕುಮಾರ್ ಶೆಟ್ಟಿ, ವಿದ್ಯಾ, ನಾಗರತ್ನಾ, ವಿಜಯಾ, ಪ್ರೌಢಶಾಲಾ ಎನ್‌ಎಸ್‌ಎಸ್ ಯೋಜನಾಧಿಕಾರಿ ಉದಯ ಮಡಿವಾಳ ಎಂ., ಪರಿಸರ ಎಂಜಿನಿಯರ್ ಗುರುಪ್ರಸಾದ್ ಶೆಟ್ಟಿ, ಆರೋಗ್ಯಾಧಿಖಾರಿ ರಾಘವೇಂದ್ರ ನಾಯಕ್, ಕಂದಾಯ ಇಲಾಖೆ ಅಂಜನಿ ಗೌಡ, ಆರ್‌ಐ ಜ್ಯೋತಿ ಆರ್‌ಐ, ಸಮುದಾಯ ಅಧಿಕಾರಿ ಗಣೇಶ್ ಇದ್ದರು.
ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಉದ್ದೇಶದಿಂದ ಎಸ್‌ಎಸ್‌ಎಸ್ ನೇತೃತ್ವದಲ್ಲಿ ಕಂದಾವರ ಡಂಪಿಂಗ್ ಯಾರ್ಡ್ ಹಾಗೂ ಪುರಸಭೆ ಭೇಟಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮನೆಯವರಲ್ಲಿ ಜಾಗೃತಿ ಮೂಡಿಸುವ ಮೂಲಕ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ಮಾಡಬೇಕು ಎನ್ನುವ ಸದುದ್ದೇಶ ಹಾಗೂ ಅತ್ಯಾಧುನಿಕ ಪದ್ದತಿಯಲ್ಲಿ ಕಸ ವಿಲೇವಾರಿ ಮಾಡುವ ಪುರಸಭೆ ಕಾರ್ಯವೈಖರಿ ಬಗ್ಗೆ ತಿಳಿಸುವ ಉದ್ದೇಶ ಈ ಭೇಟಿಯದ್ದಾಗಿತ್ತು. – ಉದಯ ಮಡಿವಾಳ ಎಂ, ಎನ್‌ಎಸ್‌ಎಸ್ ಯೋಜನಾಧಿಕಾರಿ, ಪ್ರೌಢಶಾಲಾ ವಿಭಾಗ, ಕುಂದಾಪುರ