ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯತ್‌ನ 2021-22ನೇ ಸಾಲಿನ ದ್ವೀತಿಯ ಹಂತದ ಗ್ರಾಮಸಭೆ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಸಭಾಭವನದಲ್ಲಿ ಜರುಗಿತು.
ಮೀನುಗಾರಿಕಾ ಸಹಾಯಕ ನಿರ್ದೇಶಕಿ ಸುಮಲತ ಗ್ರಾಮಸಭೆಯ ನೋಡೆಲ್ ಅಧಿಕಾರಿಯಾಗಿ ಗ್ರಾಮಸಭೆ ನಡೆಸಿದರು. ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ಕಂದಾಯ ಇಲಾಖೆ ವಿಎ ಆನಂದ, ಗೋಪಾಡಿ ಮೆಸ್ಕಾಂ ಇಲಾಖೆ ಮಂಜುನಾಥ್, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ, ಶಿಕ್ಷಣ ಇಲಾಖೆಯ ಹೊಸ ಬಡಾಕೆರೆ ಶಾಲಾ ಮುಖ್ಯೋಪಾಧ್ಯಾಯ ಪದ್ಮಾವತಿ ಕೆ, ಕೋಟೇಶ್ವರ ಕೆಪಿಎಸ್ ಮುಖ್ಯ ಶಿಕ್ಷಕ ಯೋಗಿ ನಾಯ್ಕ್ ಇಲಾಖಾವರೂ ಮಾಹಿತಿ ನೀಡಿದರು.
ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಸದಸ್ಯರಾದ ಜಯಲಕ್ಷ್ಮೀ, ಲೋಲಾಕ್ಷಿ ಎನ್ ಕೋತ್ವಾಲ್, ಲೋಕೇಶ್, ಚಂದ್ರಮೋಹನ್, ಪುಟ್ಟಿ, ನೇತ್ರಾವತಿ, ರಾಜಶೇಖರ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿಗಾರ್, ಸುರೇಶ್ ದೇವಾಡಿಗ, ರೊಯ್ಸಿನ್ ಡಿ ಮೆಲ್ಲೋ, ಲತಾ ಶೇಖರ ಮೊಗವೀರ, ಶೋಭಾ ಶೆಟ್ಟಿ, ರಾಘವೇಂದ್ರ ಪೂಜಾರಿ, ನಾಗರಾಜ ಪೂಜಾರಿ, ಜಾನಕಿ ಬಿಲ್ಲವ, ರೇವತಿ, ರಾಜು, ಉದಯನಾಯಕ್, ಆಶಾ ಜಿ ಕುಂದರ್, ಸುಶೀಲ ಮತ್ತು ಆಶಾ ಮತ್ತು ಅಂಗನವಾಡಿ ಕಾರ‍್ಯಕರ್ತೆಯರು ಉಪಸ್ಥಿತರಿದ್ದರು. ಪಿಡಿಒ ದಿನೇಶ್ ನಾಯ್ಕ್ ಸ್ವಾಗತಿಸಿದರು. ಕಾರ‍್ಯದರ್ಶಿ ವನಿತಾ ಕಾರ‍್ಯಕ್ರಮ ನಿರೂಪಿಸಿದರು.