ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನೂತನ ಕಛೇರಿ ಲೋಕಾರ್ಪಣೆಗೊಳಿಸಿದ ಶ್ರೀ ವಿನಯ ಗುರೂಜಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಬಿಜೂರಿನಲ್ಲಿ ನಿರ್ಮಿಸಲಾಗಿರುವ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಶುಕ್ರವಾರ ಜರುಗಿತು. ಗೌರಿಗದ್ದೆ ಶ್ರೀ ದತ್ತ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿಯವರು ನೂತನ ಕಛೇರಿಯನ್ನು ಲೋಕಾರ್ಪಣೆಗೊಳಿಸಿದರು.

Call us

Click Here

ಬಳಿಕ ಶ್ರೀ ವಿನಯ ಗುರೂಜಿಯವರು ಆಶೀರ್ವಚಿಸಿ ಕಠಿಣ ಪ್ರಯತ್ನ, ಸಮಾಜದ ಬಗ್ಗೆ ಒಲವು, ಅಶಕ್ತರಿಗೆ ನೆರವು ನೀಡುವ ಶ್ರದ್ದೆ ಇದ್ದವರು ಬದುಕಿನಲ್ಲಿ ಯಶಸ್ಸು ಕಾಣುತ್ತಾರೆ. ಭಗವಂತ ಒಬ್ಬೊಬ್ಬರಿಗೆ ಒಂದೊಂದು ಯೋಗ್ಯತೆ ನೀಡಿರುತ್ತಾನೆ. ಅದನ್ನು ಸಮರ್ಪಕವಾಗಿ ಸಮಾಜಮುಖಿಯಾಗಿ ಬಳಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ, ಟ್ರಸ್ಟೀ ಮಾಲತಿ ಗೋವಿಂದ ಪೂಜಾರಿ, ಗೋವಿಂದ ಬಾಬು ಪೂಜಾರಿ ಅವರ ತಂದೆ ಬಾಬು ಪೂಜಾರಿ, ತಾಯಿ ಮಂಜಮ್ಮ, ಕುಟುಂಬಿಕರು ಹಾಗೂ ಊರವರು ಉಪಸ್ಥಿತರಿದ್ದರು.

Leave a Reply