ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬಯೋಕೆಮಿಸ್ಟ್ರಿ ಪ್ರೊಫೆಸರ್ ಡಾ| ಶಿವಾನಂದ ನಾಯಕ್ ಬಿ. ಅವರು ಮಂಡಿಸಿದ ಟೈಪ್-2 ಡಯಾಬಿಟಿಸ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಅತ್ಯುನ್ನತ ವಿಜ್ಞಾನ ಡಾಕ್ಟರೇಟ್ (ಡಿ.ಎಸ್ಸಿ) ಪದವಿ ದೊರೆತಿದ್ದು, ಎ.23ರಂದು ನಡೆಯುವ 40ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ.
ಡಾ ಶಿವಾನಂದ ನಾಯಕ್ ಬಿ ಇವರು ಮೂಲತಃ ಉಡುಪಿಯವರಾಗಿದ್ದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 14 ವರ್ಷಗಳ ಕಾಲ ಬಯೋಕೆಮಿಸ್ಪಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಂತರ ವೆಸ್ಟ್ ಇಂಡೀಸ್ ವಿಶ್ವವಿದ್ಯಾನಿಲಯದ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ 16 ವರ್ಷಗಳ ಕಾಲ ಪ್ರೊಫೆಸರ್ ಮತ್ತು ಡೆಪ್ಯುಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪ್ರೊಫೆಸರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಚೆನ್ನೈನ ಚೆನ್ನೈನ ಶ್ರೀ ರಾಮಚಂದ್ರ ವಿಶ್ವವಿದ್ಯಾನಿಲಯದ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬೋಧನಾ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸುಮಾರು 30 ವರ್ಷಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.
ಡಾ. ಶಿವಾನಂದ ನಾಯಕ್ ಅವರು 2002ರಲ್ಲಿ ಮಣಿಪಾಲ್ ವಿಶ್ವವಿದ್ಯಾಲಯದ ಅಲೈಡ್ ಹೆಲ್ತ್ ಸೈನ್ಸ್ನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2013ರ ಅವಧಿಯಲ್ಲಿ ತಮ್ಮ ಉತ್ತಮ ಬೋಧನೆಗಾಗಿ ವೈಸ್ ಚಾನ್ಸಲರ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಹಾಗೂ 2010ರಲ್ಲಿ ಯುಡಬ್ಲ್ಯೂಐಗಾರ್ಡಿಯನ್ ಲೈಫ್ ಪ್ರೀಮಿಯರ್ ಅವಾರ್ಡ್ ಪಡೆದಿರುತ್ತಾರೆ.
2013, 2014 ಹಾಗೂ 2015 ನೇ ಸಾಲಿನಲ್ಲಿ ಟ್ರಿನಿಡಾಡ್ ಆ್ಯಂಡ್ ಟ್ರೋಬ್ಯಾಗೋ ಮೆಡಿಕಲ್ ಸ್ಟುಡೆಂಟ್ಸ್ ಅಸೋಸಿಯೇಷನ್ನ ಔಟ್ಸ್ಟಾಂಡಿಂಗ್ ಪ್ರಿಕ್ಲಿನಿಕಲ್ ಲೆಕ್ಟರ್ ಅವಾರ್ಡ್ ಪಡೆದಿರುತ್ತಾರೆ. 2011 ಹಾಗೂ 2012ನೇ ಸಾಲಿನ ದಿ ಮೂವ್ಮೆಂಟ್ ಫಾರ್ ದಿ ಎಂಕರೇಜ್ಮೆಂಟ್ ಆಫ್ ಧಾರ್ಮಿಕ್ ಸರ್ವಿಸ್ನ ಔಟ್ ಸ್ಟ್ಯಾಂಡಿಂಗ್ ಪ್ರೀಕ್ಲಿನಿಕಲ್ ಲೆಕ್ಚರ್ ಅವಾರ್ಡ್ ಪಡೆದಿರುತ್ತಾರೆ. ಹಲವಾರು ಫೆಲೋಶಿಪ್ ಪಡೆದಿರುವ ಇವರು ನ್ಯಾಷನಲ್ ರೆಜಿಸ್ಟೀ ಫಾರ್ ಸರ್ಟಿಫೈಡ್ ಕೆಮಿಸ್ಟ್ & ಕ್ಲಿನಿಕಲ್ ಕೆಮಿಸ್ಪಿಯ ಅರ್ಹತೆ ಪಡೆದಿದ್ದಾರೆ.
ಇವರು ಮೆಡಿಕಲ್, ಡೆಂಟಲ್, ಅಲೈಡ್ ಹೆಲ್ತ್ ಹಾಗೂ ಫಾರ್ಮಸಿ ವಿದ್ಯಾರ್ಥಿಗಳಿಗೆ 9 ಪುಸ್ತಕಗಳನ್ನು ಬರೆದಿದ್ದು, ಭಾರತ, ಟ್ರಿನಿಡಾಡ್ ಹಾಗೂ ಇತರ ದೇಶದ ವಿದ್ಯಾರ್ಥಿ ಸಮುದಾಯದಲ್ಲಿ ಇದು ಪ್ರಸಿದ್ಧಿಯನ್ನು ಪಡೆದಿದೆ. ಸಂಶೋಧಕರಾಗಿ ಟೈಪ್ 2 ಡಯಾಬಿಟೀಸ್ ಹಾಗೂ ವೂಂಡ್ ಹೀಲಿಂಗ್ ಕುರಿತಾಗಿ 160ಕ್ಕೂ ಹೆಚ್ಚು ಪ್ರಬಂಧವನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜರ್ನಲ್ಗಳಲ್ಲಿ ಪ್ರಕಟವಾಗಿದೆ.
ಸಂಶೋಧನಾ ಕ್ಷೇತ್ರದ ಸಾಧನೆಗಾಗಿ 2020ರ ಇನ್ಸಿಟ್ಯೂಟ್ ಆಫ್ ಸ್ಕಾಲರ್ ಅವಾರ್ಡ್, ವಿಡಿಜಿಓಓಡಿ ಸಂಸ್ಥೆಯು ನವಂಬರ್ 2020ರಲ್ಲಿ ಡಿಸ್ಟಿಂಗ್ವಿಸ್ಟ್ ಸೈಂಟಿಸ್ಟ್ ಅವಾರ್ಡ್ ನೀಡಿದೆ.
ಡಾ. ಶಿವಾನಂದ ಅವರು ಶಿವಾನಿ ಡೈನಾನ್ಸಿಸ್ಟಿಕ್ ಮತ್ತು ಸೆಂಟರ್ನ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ನವ್ಯಚೇತನ ಎಜುಕೇಶನ್, ರಿಸರ್ಚ್ ಹಾಗೂ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.