ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: 2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ್ಯಾಂಕ್‍ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಒಟ್ಟು 26 ರ್ಯಾಂಕ್‍ಗಳನ್ನು ಗಳಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಕಳೆದ 12 ವರ್ಷಗಳಿಂದ ಸರಾಸರಿ 25ಕ್ಕಿಂತಲೂ ಅಧಿಕ ರ್ಯಾಂಕ್‍ಗಳನ್ನು ಪಡೆಯುತ್ತಾ ವಿವಿ ಮಟ್ಟದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.
ಪದವಿ, ಸ್ನಾತಕೋತ್ತರ ಹಾಗೂ ಬಿಪಿಎಡ್ ವಿಭಾಗದಲ್ಲಿ ಒಟ್ಟು 11 ಪ್ರಥಮ ರ್ಯಾಂಕ್, ಪದವಿ ಹಾಗೂ ಬಿಪಿಎಡ್ ವಿಭಾಗದಲ್ಲಿ 4 ದ್ವಿತೀಯ ರ್ಯಾಂಕ್, 5 ತೃತೀಯ ರ್ಯಾಂಕ್, 1 ಚತುರ್ಥ ರ್ಯಾಂಕ್, ಪದವಿ ಹಾಗೂ ಬಿ.ಎಡ್‍ನಲ್ಲಿ ಎರಡು 6ನೇ ರ್ಯಾಂಕ್, ಪದವಿ ವಿಭಾಗದಲ್ಲಿ ಎರಡು 8ನೇ ರ್ಯಾಂಕ್, ಒಂದು 10ನೇ ರ್ಯಾಂಕ್ ಗಳಿಸಿದೆ.
ಪದವಿ ವಿಭಾಗ:
ಬಿ.ಎ ವಿಭಾಗದಲ್ಲಿ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ (89.19% ) ಪ್ರಥಮ ರ್ಯಾಂಕ್, ಚುಮ್ತಾಂಗ್ (88.33%) ದ್ವಿತೀಯ ರ್ಯಾಂಕ್, ಫಾತಿಮ ಮುಸ್ಕಾನ್ ಜಿ ಡಿ (88.31%) ತೃತೀಯ ರ್ಯಾಂಕ್, ನವ್ಯ ಕೆ (87.12%) ಚತುರ್ಥ ರ್ಯಾಂಕ್, ಬಿ.ಕಾಂನಲ್ಲಿ ಅನ್ನಪೂರ್ಣ ಜಿ ಕೆ (96.02%) ಪ್ರಥಮ ರ್ಯಾಂಕ್, ಭರತ್ ಗಜಾನನ ಹೆಗ್ಡೆ (93.81%) ಹತ್ತನೇ ರ್ಯಾಂಕ್, ಬಿಎಸ್ಸಿ (ಎಫ್‍ಎನ್‍ಡಿ) ವಿಭಾಗದಲ್ಲಿ ಯಶಸ್ವಿ (92.33%) ಪ್ರಥಮ ರ್ಯಾಂಕ್, ಅಲೆಂಟಾ ಜಿಜಿ (88.95%) ದ್ವಿತೀಯ ರ್ಯಾಂಕ್, ಬಿ.ಎಸ್.ಡಬ್ಲ್ಯೂನಲ್ಲಿ ಕಾವ್ಯ ಯು.ಪಿ (82.24%) ತೃತೀಯ ರ್ಯಾಂಕ್, ಬಿ.ಬಿ.ಎ ವಿಭಾಗದಲ್ಲಿ ಕೆ.ಎ ಸೃಷ್ಠಿ ಜೈನ್ (91.49% ) ಪ್ರಥಮ ರ್ಯಾಂಕ್, ಸಂಘವಿ ಎಚ್.ಆರ್ (89.4%) ಆರನೇ ರ್ಯಾಂಕ್, ಒಯಿನಂ ಪೂರ್ಣಚಂದ್ರ ಸಿಂಗ್ (88.82% ) ಎಂಟನೇ ರ್ಯಾಂಕ್, ಕೃಪಾ ಕರುಣಾಕರ ಶೆಟ್ಟಿ (88.82%) ಎಂಟನೇ ರ್ಯಾಂಕ್, ಬಿವಿಎ ವಿಭಾಗದಲ್ಲಿ ಸಾತ್ವಿಕ್ ಬಿ ಜೆ (85.69%) ಪ್ರಥಮ ರ್ಯಾಂಕ್, ಕುಟಿನ್ಹೋ ಫ್ಲರ್ ಅಗ್ನೆತಾ (82.42%) ದ್ವಿತೀಯ ರ್ಯಾಂಕ್, ಸನ್ನಿಧಿ (81.65%) ತೃತೀಯ ರ್ಯಾಂಕ್ , ವೈಷ್ಣವಿ ಶಶಿಕಾಂತ್ ಅಮಾಶಿ (81.65%) ತೃತೀಯ ರ್ಯಾಂಕ್, ಬಿಪಿಎಡ್‍ನಲ್ಲಿ ಲೀಲಾವತಿ ಎಂಜೆ (84.67%) ಪ್ರಥಮ ರ್ಯಾಂಕ್, ಶಾಲಿನಿ ಕೆ ಎಸ್ (82.79%) ದ್ವಿತೀಯ ರ್ಯಾಂಕ್, ರಕ್ಷತ್ (81.33%) ತೃತೀಯ ರ್ಯಾಂಕ್, ಬಿ.ಎಡ್ ನಲ್ಲಿ ಮೇಘಶ್ರೀ ಯಾನೆ ಗೌತಮಿ 6ನೇ ರ್ಯಾಂಕ್ ಪಡೆದಿದ್ದಾರೆ.
ಸ್ನಾತಕೋತ್ತರ ವಿಭಾಗ:
ಎಂ.ಕಾಂನಲ್ಲಿ ಸ್ವರ್ಣಗೌರಿ ಶೆಣೈ, ಎಂವಿಎ ವಿಭಾಗದಲ್ಲಿ ಹರೀಶ ಟಿ, ಎಂ.ಎಸ್ಸಿ. (ಮನ:ಶಾಸ್ತ್ರ)ಯಲ್ಲಿ ವೈಶಾಲಿ ಹೆಗಡೆ ಎಂ, ಎಂ.ಎಸ್ಸಿ. (ಅನಾಲಿಟಿಕಲ್ ರಸಾಯನಶಾಸ್ತ್ರ) ವಿಭಾಗದಲ್ಲಿ ಸೌಮ್ಯ, ಎಂ.ಎ (ಇಂಗ್ಲಿಷ್)ನಲ್ಲಿ ನವ್ಯಾ ಎಂ ಉಪಾಧ್ಯಾಯ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಬಿಪಿಎಡ್ ಪ್ರಾಚಾರ್ಯ ಮಧು ಜಿ ಆರ್, ಬಿಎಡ್ ಪ್ರಾಂಶುಪಾಲ ಶಂಕರಮೂರ್ತಿ ಉಪಸ್ಥಿತರಿದ್ದರು.