ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಏ.28: ಜಿಲ್ಲೆಯಲ್ಲಿ ನೊಂದಾಯಿಸಲ್ಪಟ್ಟ ಕ್ಲಿನಿಕ್ ಹಾಗೂ ಆಸ್ಪತ್ರೆಗಳು ನೋಂದಾವಣೆಯಾದ ಪದ್ಧತಿಯಲ್ಲಿ ನಿಯಮಾನುಸಾರವಾಗಿ ಸೇವೆ ನೀಡಬೇಕು. ಆಯುರ್ವೇದ ಪದ್ಧತಿಯೊಂದಿಗೆ ಇಂಟಿಗ್ರೇಟೆಡ್ ಡಿಪ್ಲೋಮಾ ಕೋರ್ಸ್ಗಳನ್ನು ಮಾಡಿ ಪ್ರಮಾಣ ಪತ್ರ ಹೊಂದಿರುವ ವೈದ್ಯರುಗಳು ಆಧುನಿಕ ವೈದ್ಯ ಪದ್ಧತಿಯಲ್ಲಿ ವೈದ್ಯ ವೃತ್ತಿ ನಡೆಸಲು ಅವಕಾಶವಿದ್ದು, ನೋಂದಾವಣೆ ಹೊಂದಿರುವ ಪದ್ಧತಿಯನ್ನು ಬಿಟ್ಟು ಇನ್ನೊಂದು ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಲ್ಲಿ ತಾಲೂಕು ಪ್ರಾಧಿಕೃತ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.