ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ: ಮೇ.3ರಂದು ರೈತಸಿರಿ ಅಗ್ರಿ ಮಾಲ್ ಶಂಕುಸ್ಥಾಪನೆ, ರೈತಸಿರಿ ಸಮಾವೇಶ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಜ್ಯದ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಪ್ರಥಮ ಭಾರಿಗೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ರೈತಸಿರಿ ಅಗ್ರಿ ಮಾಲ್ ಎಂ.ಎಸ್.ಸಿ ಯೋಜನೆಯ ಶಿಲಾನ್ಯಾಸ ಹಾಗೂ ರೈತಸಿರಿ ಸಮಾವೇಶ ಮೇ.3ರ ಮಂಗಳವಾರ ಪೂರ್ವಾಹ್ನ 10ರಿಂದ ಕಂಬದಕೋಣೆ ಪಿಯು ಕಾಲೇಜು ಮೈದಾನದಲ್ಲಿ ಜರುಗಲಿದೆ.

Call us

Click Here

ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ್ ಯೋಜನೆಯಡಿ ಆರಂಭಗೊಳ್ಳಲಿರುವ ಅಗ್ರಿಮಾಲ್‌ನಲ್ಲಿ ನಿತ್ಯ ಕೃಷಿ ಸಂತೆ, ಕೃಷಿ ಮತ್ತು ಕೃಷಿಕರ ಅಭ್ಯುದಯಕ್ಕಾಗಿ ಕೃಷಿ ಉತ್ಪನ್ನ ಖರೀದಿ, ಮಾರುಕಟ್ಟೆ ಮತ್ತು ಕೊಲ್ಡ್ ಸ್ಟೊರೇಜ್ ವ್ಯವಸ್ಥೆಯನ್ನು ಒಳಗೊಂಡಿರುವ ಬೃಹತ್ ಗೋದಾಮು ಹಾಗೂ ದಾಸ್ತಾನು ಮೊದಲಾದ ಯೋಜನೆಯನ್ನು ರೂಪಿಸಲಾಗಿದೆ. ಸಂಘದ ಕಾರ್ಯವ್ಯಾಪ್ತಿಯಲ್ಲಿನ ಅಡಿಕೆ, ತೆಂಗು, ಭತ್ತ, ನೆಲಗಡಲೆ ಹಾಗೂ ಕಾಡುತ್ಪತ್ತಿ ಮೊದಲಾದ ಬೆಳೆಗಳನ್ನು ಖರೀದಿಸಿ, ದಾಸ್ತಾನು ಮಾಡಿ, ಉತ್ತಮ ದರ ಹಾಗೂ ಮಾರುಕಟ್ಟೆ ಸಂಘದಿಂದ ಒದಗಿಸುವ ದೂರದೃಷ್ಠಿಯನ್ನು ಹೊಂದಲಾಗಿದೆ. ರೈತಸಿರಿಯಿಂದಾಗಿ ಸಂಘದ ಕಾರ್ಯವ್ಯಾಪ್ತಿಯ ನೂರಾರು ಯುವಕ, ಯುವತಿಯರಿಗೆ ಉದ್ಯೋಗಾವಕಾಶ ದೊರೆಯಲಿದೆ.

ಅಂದಾಜು ರೂ. 7.65ಕೋಟಿ ವೆಚ್ಚದಲ್ಲಿ ರೈತರಿಸಿ ಕಟ್ಟಡ ನಿರ್ಮಾಣ, ರೂ. 3ಕೋಟಿ ವೆಚ್ಚದ ಒಳಾಂಗಣ ವಿನ್ಯಾಸ ಹಾಗೂ ರೂ. 4 ಕೋಟಿ ದುಡಿಯುವ ಬಂಡವಾಳದೊಂದಿಗೆ ಒಟ್ಟು ರೂ. 15ಕೋಟಿ ವಿನಿಯೋಗದ ನಿರ್ಮಾಣವಾಗಲಿರುವ ಬೃಹತ್ ಪ್ರಮಾಣದ ಒಂದೇ ನಿವೇಶನದಲ್ಲಿ ಬಹುಮಹಡಿ ಕಟ್ಟಡದಲ್ಲಿ ರೈತರಿಗಾಗಿ ಎಂ.ಎಸ್.ಸಿ. ಯೋಜನೆ ರೂಪಿಸಲಾಗಿದೆ.

ಅಗ್ರಿಮಾಲ್‌ನಲ್ಲಿ ವಿವಿಧ ಬಗೆಯ ಕೃಷಿ ಸರ್ವಿಸ್ ಸೆಂಟರ್‌ಗಳು, ಸೂಪರ್ ಮಾರ್ಕೇಟ್‌ಗಳು, ಬಡಗಿ, ಕಮ್ಮಾರಿಕೆ, ಗ್ಯಾರೇಜ್, ವೆಲ್ಡಿಂಗ್ ಶಾಪ್, ಇಲೆಕ್ಟ್ರೀಕಲ್ ಸರ್ವಿಸ್, ಫಾರ್ಮರ್ ಕ್ಲಬ್, ಕೃಷಿಕ ತರಬೇತಿ ಕೇಂದ್ರ, ಕೃಷಿ ಯಂತ್ರೋಪಕರಣಗಳ ಮಳಿಗೆ, ಉಪಹಾರ ಕೇಂದ್ರ, ಮೀನುಗಾರಿಕೆಗೆ ಅಗತ್ಯ ಉಪಕರಣಗಳು ಅಲ್ಲದೇ ಸಭಾಂಗಣ, ಎಸ್ಕ್ಯುಲೇಟರ್, ಲಿಫ್ಟ್ ಹಾಗೂ ಸುತ್ತಲೂ ವಿಶಾಲವಾದ ಪಾರ್ಕಿಂಗ್ ಮಾಡಲು ರ‍್ಯಾಂಪ್‌ನ ವ್ಯವಸ್ಥೆ ಇದೆ. ಮಳಿಗೆಯು ಒಟ್ಟು 23,000 ಚದರ ಅಡಿ ವಿಸ್ತೀರ್ಣ ಮತ್ತು 8,000 ಚದರ ಅಡಿ ಟೆರೇಸ್ ಇದ್ದು ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಕಂಬದಕೋಣೆ ಸುಮಾರು ೬೫ಸೆಂಟ್ಸ್ ನಿವೇಶನ ಖರೀದಿ ಮಾಡಲಾಗಿದೆ. ಅದರೊಂದಿಗೆ ರಸಾಯಿನಿಕ ಗೊಬ್ಬರ, ಕೃಷಿ ಉಪಕರಣಗಳ ಮಾರಾಟ ಮತ್ತು ಬಾಡಿಗೆ, ಪಡಿತರ ಸಾಮಾಗ್ರಿ ವಿತರಣೆ, ಮೀನುಗಾರಿಕಾ ಸೀಮೆಎಣ್ಣೆ ವಿತರಣೆ, ಪ್ರಧಾನ ಮಂತ್ರಿ ಯೋಜನೆಯ ಡಿಜಿಟಲ್ ಸೇವಾ ಸಿಂಧೂ (ಸಿ.ಎಸ್.ಸಿ) ಹಾಗೂ ಇನ್ನಿತರ ಸೇವಾ ಸೌಲಭ್ಯಗಳು ಸದಸ್ಯರಿಗೆ, ಗ್ರಾಹಕರಿಗೆ ಒದಗಿಸುತ್ತಿದೆ.

Click here

Click here

Click here

Click Here

Call us

Call us

ಗೌರಿಗದ್ದೆ ದತ್ತ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಅವರು ಶಿಲನ್ಯಾಸ ನೆರವೇರಿಸಲಿದ್ದು, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ವೇಳೆ ರೈತರಿಸಿ ಸಮಾವೇಶ ಉದ್ಘಾಟಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟ ರಿಷಬ್ ಶೆಟ್ಟಿ ರೈತಸಿರಿ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಬಿ. ಅಪ್ಪಣ್ಣ ಹೆಗ್ಡೆ, ಕೆ. ಲಕ್ಷ್ಮೀನಾರಾಯಣ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಲಾವಣ್ಯ ಕೆ.ಆರ್., ಕೆರ್ಗಾಲು ಗ್ರಾಮ ಪಂಚಾಯತ್ ಅಧ್ಯಕ್ಷ ಮಾದವ ದೇವಾಡಿಗ, ಕಂಬದಕೋಣೆ ಗ್ರಾ.ಪಂ ಅಧ್ಯಕ್ಷ ಸುಕೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಅಂದು ಬೆಳಿಗ್ಗೆ 9ರಿಂದ ಕಲರ‍್ಸ್ ಕನ್ನಡದ ಎದೆ ತುಂಬಿ ಹಾಡುವೆನು ಖ್ಯಾತಿಯ ಕಲಾವಿದರಿಂದ ಸಂಗೀತ ಸ್ವರ ಸಂಭ್ರಮ ಜರುಗಲಿದೆ.

Khambadakone Raithara Seva Sahakari Sangha R. Uppunda

Leave a Reply