ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ವಿಶಿ? ಹಾಗೂ ಅಪರೂಪದ ಹಳೆ ವಿದ್ಯಾರ್ಥಿಗಳ ಸಹಮಿಲನ ಕಾರ್ಯಕ್ರಮ ಮತ್ತು ಶಾಶ್ವತ ನಿಧಿ ಸಂಗ್ರಹಣೆ ಅಭಿಯಾನ ಬೆಂಗಳೂರಿನ ಪೈವಿಸ್ತಾ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ನಡೆಯಿತು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಶಾಲೆಗಳ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಲ್ಪಟ್ಟ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಆತ್ಮರಾಮ ಕಿಣಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಗಣೇಶ ಕಾಮತ್ ಅವರು ಶಾಲೆಯ ಇತಿಹಾಸ, ನಡೆದು ಬಂದ ದಾರಿ, ಆಗಿರುವ ಅಭಿವೃದ್ಧಿ ಕಾರ್ಯಗಳು, ಶಾಲಾಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರ, ಕೊಡುಗೆಗಳನ್ನು ಸ್ಮರಿಸಿದರು. ಹಳೆ ವಿದ್ಯಾರ್ಥಿಗಳು ಶಾಲೆಯ ಮೇಲಿಟ್ಟಿರುವ ಪ್ರೀತಿ, ಅಭಿಮಾನವನ್ನು ಅವರು ಶ್ಲಾಘಿಸಿದರು.
ಶಾಲೆ ಸಂಚಾಲಕ ಎನ್. ಸದಾಶಿವ ನಾಯಕ್ ಮಾತನಾಡಿ, ಶಾಲೆಗಳಲ್ಲಿ ಪ್ರಸ್ತುತ ಸಿಗುತ್ತಿರುವ ಸೌಲಭ್ಯಗಳು, ಮುಂದಿನ ಯೋಜನೆಗಳು, ಪ್ರಸಕ್ತ ಶಾಲಾ ಹಣಕಾಸಿನ ಪರಿಸ್ಥಿತಿ, ಕೋವಿಡ್-೧೯ ನಿಂದ ಶಾಲಾ ದೈನಂದಿನ ಚಟುವಟಿಕೆ ಹಾಗೂ ಆರ್ಥಿಕತೆಯ ಮೇಲಾದ ದುಷ್ಪರಿಣಾಮಗಳು ಮತ್ತು ಚೇತರಿಕೆಗಾಗಿ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮ ಆಯೋಜಕರ ಪರವಾಗಿ ಎನ್. ಪ್ರಕಾಶ ನಾಯಕ್, ಶಾಲೆಯ ಹಳೆ ವಿದ್ಯಾರ್ಥಿ, ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ಸುರೇಶ್ ಕರ್ಣಿಕ್, ಕೃ?ಮೂರ್ತಿ ಕಿಣಿ ಶುಭ ಕೋರಿದರು. ಶಾಲೆಯ ಹಳೆ ವಿದ್ಯಾರ್ಥಿ, ಬೆಂಗಳೂರಿನ ಹೊಟೇಲ್ ಉದ್ಯಮಿ ಎಂ. ಜಗನ್ನಾಥ್ ವಿ. ಪೈ ಅವರನ್ನು ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿ ಸದಸ್ಯ ಎನ್.ಅಶ್ವಿನ್ ನಾಯಕ್, ಎಂ.ನಾಗೇಂದ್ರ ಪೈ ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಕೆ.ರಾಮನಾಥ್ ನಾಯಕ ಸ್ವಾಗತಿಸಿದರು. ಪತ್ರಕರ್ತ ಯು.ಎಸ್.ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ವಿ. ನಾಗೇಶ್ ಪೈ ವಂದಿಸಿದರು.