ಕುಂದಾಪುರ: ಮಕ್ಕಳಿಗೆ, ಸಾರ್ವಜನಿಕರಿಗೆ ಸ್ಪರ್ಧೆ, ಪ್ರತಿಭಾ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳಿಂಧಾಗಿ ಜೇಸಿ ಸಪ್ತಾಹವೆಂದರೇ ಕುಂದಾಪುರದಲ್ಲಿ ಹಬ್ಬ ಎಂಬ ವಾತಾವರಣ ನಿರ್ಮಾಣವಾಗುತ್ತದೆ. ಜೇಸಿ ಸಂಸ್ಥೆಯಲ್ಲಿ ತರಬೇತಿ ಪಡೆದವರು ಎಲ್ಲ ರಂಗದಲ್ಲಿಯೂ ಸಲ್ಲುವ ಜೊತೆಗೆ ಉತ್ತಮ ನಾಗರಿಕರಾಗಿ ಮೂಡಿ ಬರುತ್ತಾರೆ ಎಂದು ಪ್ಲೆಸೆಂಟ್ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಬಶೀರ್ ಕೋಟ ಹೇಳಿದರು.
ಅವರು ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಜೇಸಿ ಸಪ್ತಾಹದ ೬ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು.
ಕುಂದಾಪುರದ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ| ಮಧುಮಯೂರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ರಾಜೇಶ್ ಕಾವೇರಿ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಎಚ್. ಎಸ್. ಹತ್ವಾರ್, ಕುಂದಾಪುರ ಸ. ಪ. ಪೂ. ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ, ಜೇಸಿಐ ಕುಂದಾಪುರ ಸಿಟಿ ಸಲಹೆಗಾರರಾದ ಪುರುಷೋತ್ತಮ ಶೇಟ್, ಜೇಸಿಐ ಕುಂದಾಪುರ ಪೂರ್ವಾಧ್ಯಕ್ಷ ದಿನೇಶ್ ಗೋಡೆ, ಜೇಸಿಐ ಕುಂದಾಪುರ ಸಿಟಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ, ಜೇಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವಾಧ್ಯಕ್ಷ ನಿತಿನ್ ಅವಭೃತ, ಸಪ್ತಾಹ ಕಾರ್ಯದರ್ಶಿ ವೆಂಕಟೇಶ ಪ್ರಭು, ಖಜಾಂಚಿ ಯು. ರಾಘವೇಂದ್ರ ಭಟ್, ಜ್ಯೂನಿಯರ್ ಜೇಸಿ ಅಧ್ಯಕ್ಷ ಸನತ್ ಶೇಟ್, ಜೇಸಿರೆಟ್ ಅಧ್ಯಕ್ಷೆ ಸುನೀತಾ ಶ್ರೀಧರ್, ಸಪ್ತಾಹ ಸಂಚಾಲಕ ರಾಘವೇಂದ್ರ ಕೆ.ಸಿ, ಯೋಜನಾಧಿಕಾರಿ ಜಯಶೀಲ ಪೈ, ಬಿಂದು ತಂಗಪ್ಪನ್ ಉಪಸ್ಥಿತರಿದ್ದರು. ಸಪ್ತಾಹ ಸಭಾಪತಿ ವಿಜಯ ಭಂಡಾರಿ ಕಾರ್ಯಕ್ರಮದ ಮುನ್ನೋಟ ನೀಡಿದರು. ಕಾರ್ಯದರ್ಶಿ ನಾಗೇಶ್ ನಾವಡ ವಂದಿಸಿದರು. ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.