ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.11: ಕೇರಳ ವಯನಾಡ್ ಸುಲ್ತಾನ್ ಬತೇರಿಯಲ್ಲಿ ಬಂಧನವಾದ ನಂತರ ಮೇ.24ರಂದು ಕೇರಳ ಪೊಲೀಸರಿಂದ ರಾಜ್ಯ ಪೊಲೀಸರಿಗೆ ಹಸ್ತಾತರವಾದ ನಕ್ಸಲೈಟ್ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಎಂಬವರ ಪೊಲೀಸರು ಕುಂದಾಪುರ 1ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇಬ್ಬರನ್ನೂ ಹತ್ತುದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಶಂಕಿತ ನಕ್ಸಲ್ ವಾದಿ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅಮಾಸೆಬೈಲ್ ಠಾಣೆಯಲ್ಲಿ 2006ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆ ನಡೆದ ಸ್ಥಳದ ಮಹಜರಿಗೆ ಇಬ್ಬರನ್ನೂ ಪರಿಶೀಲನೆಗೆ ಕೊಂಡೊಯ್ಯಲಿದ್ದರೆ.
ನ್ಯಾಯಾಂಗ ಬಂಧನದಲ್ಲಿದ್ದ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಅವರ ಕಾರ್ಕಳ, ಹೆಬ್ರಿ ಹಾಗೂ ಅಜೆಕಾರು ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ.3 ರಂದು ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ ಬಳಿಕ ಮಂಗಳವಾರ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿ ಕೇಶವ್ ಯಡಿಯಾಳ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪ ವಿಭಾಗದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿದ್ದು, ಅಮಾಸೆಬೈಲ್ ಠಾಣೆಯಯಲ್ಲಿ ೪, ಶಂಕರನಾರಾಯಣ ಠಾಣೆಯಲ್ಲಿ 6, ಕೊಲ್ಲೂರು ಠಾಣೆಯಲ್ಲಿ ಪಾರೆಸ್ಟ್ ಚೆಕ್ಪೋಸ್ಟ್ ಹಾಗೂ ಪೊಲೀಸ್ ಚೆಕ್ಪೋಸ್ಟ್ ದ್ವಂಸ ಮಾಡಿದ ಪ್ರಕರಣಗಳು ದಾಖಲಾಗಿದೆ.ಕೃಷ್ಣಮೂರ್ತಿ ವಿರುದ್ದ 53, ಸಾವಿತ್ರಿ ವಿರುದ್ಧ 22 ಪ್ರಕರಣಗಳಿವೆ.
ಕುಂದಾಪುರ ಡಿಎಸ್ಪಿ ಶ್ರೀಕಾಂತ ಕೆ, ಸರ್ಕಲ್ ಇನ್ಸಪೆಕ್ಟರ್ ಗೋಪಿಕೃಷ್ಣ ಕೆ.ಆರ್ ಹಾಗೂ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ನೇತ್ರತ್ವದಲ್ಲಿ ವಿಚಾರಣೆ ಮುಂದುವರೆಯಲಿದೆ.
ಬಿ.ಜಿ.ಕೃಷ್ಣಮೂರ್ತಿ ಕೇರಳದಲ್ಲಿ ಬಂಧವಾದ ನಂತರ ಹೊಸಗದ್ದೆ ಪ್ರಭಾ ತಮಿಳುನಾಡು ಪೊಲೀಸರಿಗೆ ಶರಣಾಗಿದ್ದರು. ಪ್ರಭಾಗೆ ತೀರ್ವತರದ ಸ್ಟ್ರೋಕ್ ಆಗಿದ್ದರಿಂದ ಪೊಲೀಸರಿಗೆ ಶರಣಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸುತ್ತಿದ್ದಾರೆ. ಸಾವಿತ್ರಿ ಮತ್ತೊಬ್ಬ ನಕ್ಷಲೈಟ್ ಮೋಹನ್ ಗೌಡ ಎಂಬವರ ಪತ್ನಿಯಾಗಿದ್ದು, ಬಿ.ಜಿ.ಕೃಷ್ಣಮೂರ್ತಿ ಬಂಧಿಸಿದ ಸಂದರ್ಭದಲ್ಲಿ ಸಾವಿತ್ರಿಯನ್ನೂ ಪೊಲೀಸರು ಬಂದಿಸಿದ್ದರು. ಕೃಷ್ಣಮೂರ್ತಿ ಹಾಗೂ ಸಾವಿತ್ರ ಒಟ್ಟಾಗಿದ್ದರು ಎನ್ನುಲಾಗುತ್ತಿದೆ. ಪ್ರಭಾ ಶಿವಮೊಗ್ಗ ಜಿಲ್ಲೆಯವರಾದರೆ, ಕೃಷ್ಣಮೂರ್ತಿ, ಸಾವಿತ್ರ ಚಿಕ್ಕಮಗಳುರು ಜಿಲ್ಲೆ ಶೃಂಗೇರಿ ಪರಿಸರದವರು.