ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಪ್ರಸಿದ್ಧ ಉದ್ಯಮಿ, ಖಾಸಗಿ ಆಸ್ಪತ್ರೆಯ ಮಾಲಕ ಗೋಪಾಲಕೃಷ್ಣ ರಾವ್ (ಕಟ್ಟೆ ಭೋಜಣ್ಣ) (80 ಪ್ರಾಯ) ತಮ್ಮ ಚಾರ್ಟೆಡ್ ಅಕೌಟೆಂಟ್ ಮನೆಯ ಸಿಟೌಟ್‌ನಲ್ಲಿ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಕೋಟೇಶ್ವರ ಬಳಿ ಪುರಾಣಿಕ ರಸ್ತೆಯಲ್ಲಿರುವ ಸಿಎ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬವರ ಮನೆಯ ಸಿಟೌಟ್ನಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೇಲ್ನೋಟಕ್ಕೆ ತಿಳಿದುಬಂದಿದೆ. ಜಮೀನು ಮತ್ತು ಹಣಕಾಸಿನ ವ್ಯವಹಾರವೇ ಆತ್ಮಹತ್ಯೆಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಿಎ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದರ ಹಿಂದಿನ ಉದ್ದೇಶವೇನು ಎಂಬುದು ತಿಳಿದುಬಂದಿಲ್ಲ. ತನಿಕೆ ಬಳಿಕ ಸತ್ಯ ತಿಳಿಯಲಿದೆ.
ಕಟ್ಟೆ ಭೋಜಣ್ಣ ಬೆಂಗಳೂರಿನಲ್ಲಿ ಹೋಟೆಲ್, ಬಟ್ಟೆ ಅಂಗಡಿಗಳನ್ನು ನಡೆಸುತ್ತಿದ್ದರು. ಕುಂದಾಪುರದ ಚಿನ್ಮಯಿ ಆಸ್ಪತ್ರೆ ನಡೆಸುತ್ತಿದ್ದರು. ಭೋಜಣ್ಣ ಅವರು ಪತ್ನಿ ಭಾಗೀರಥಿ, ಇಬ್ಬರು ಗಂಡು ಮಕ್ಕಳು, ಓರ್ವ ಮಗಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಹಾಗೂ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಪೊರೆನ್ಸಿಕ್ ತಜ್ಞರು ಆಗಮಿಸಿದ್ದು, ಪೊಲೀಸ್ ತನಿಕೆ ಮುಂದುವರಿದಿದೆ.
ಇದನ್ನೂ ಓದಿ ► ಆರ್ಥಿಕ ವ್ಯವಹಾರದಲ್ಲಿ 9 ಕೋಟಿ ಮೋಸ: ಡೆತ್‌ನೋಟ್‌ನಲ್ಲಿ ಕಾರಣ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಕಟ್ಟೆ ಭೋಜಣ್ಣ – https://kundapraa.com/?p=59482 .