ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ28: ಕೋಟೇಶ್ವರದ ಅಂಕದಕಟ್ಟೆ ಎಂಬಲ್ಲಿ ಮೇ.27ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೊಳಹಳ್ಳಿ ಗಣೇಶ ಶೆಟ್ಟಿ ಅವರನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ.

ಆತ್ಮಹತ್ಯೆ ಸಂಬಂಧ ಮೃತರ ಪುತ್ರ ಸುಧೀಂದ್ರ ಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಸೆಕ್ಷನ್ 306 ಪ್ರಕಾರ ಪ್ರಕರಣ ದಾಖಲಾಗಿತ್ತು. ತಂದೆಯ ಸಾವಿಗೆ ಮೊಳಹಳ್ಳಿ ಗಣೇಶ ಶೆಟ್ಟಿ ಮತ್ತು ಬ್ರೊಕರ್ ಇಸ್ಮಾಯಿಲ್ ಅವರ ಪ್ರಚೋದನೆಯೇ ಕಾರಣ ಎಂದು ಅವರು ದೂರಿದ್ದರು. ಪ್ರಕರಣ ಆಪಾದಿತರ ಪ್ಯೆಕಿ ಗಣೇಶ ಶೆಟ್ಟಿ ಬಂಧಿಸಲ್ಪಟ್ಟಿದ್ದು, ಇಸ್ಮಾಯಿಲ್ ಬಂಧನಕ್ಕೆ ಬಲೆ ಬೀಸಲಾಗಿದೆ.
ಶುಕ್ರವಾರ ರಾತ್ರಿ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮನೆ ಮುಂದೆ ಹಾಜರುಪಡಿಸಲಾಗಿದ್ದು ಮೇ.30 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವಶ್ಯವಿದ್ದಲ್ಲಿ ವ್ಯೆದ್ಯಕೀಯ ಚಿಕಿತ್ಸೆಗೆ ಒಳಪಡಿಸಬಹುದು ಎಂದು ಅದೇಶಿಸಿದೆ.
ಇದನ್ನೂ ಓದಿ:
► ಕುಂದಾಪುರ: ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ – https://kundapraa.com/?p=59468
► ಆರ್ಥಿಕ ವ್ಯವಹಾರದಲ್ಲಿ 9 ಕೋಟಿ ಮೋಸ: ಡೆತ್‌ನೋಟ್‌ನಲ್ಲಿ ಕಾರಣ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಕಟ್ಟೆ ಭೋಜಣ್ಣ – https://kundapraa.com/?p=59482










