ಜಿಲ್ಲೆಯ ಕಡಲತೀರಗಳ ಸ್ವಚ್ಛತೆಗೆ ಶಾಶ್ವತ ವ್ಯವಸ್ಥೆ: ಜಿ.ಪಂ. ಸಿಇಒ ಪ್ರಸನ್ನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜೂ.4:
ಉಡುಪಿ ಜಿಲ್ಲೆಯ ಎಲ್ಲಾ ಕಡಲತೀರಗಳನ್ನು ಪ್ರತಿನಿತ್ಯ ಸ್ವಚ್ಛ ಮತ್ತು ಸುಂದರವಾಗಿ ಇರುವಂತೆ ಮಾಡಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳು ಶಾಶ್ವತ ವ್ಯವಸ್ಥೆಯನ್ನು ರೂಪಿಸುವಂತೆ ಕಡಲತೀರ ಮತ್ತು ನದಿ ತೀರ ವ್ಯಾಪ್ತಿಯ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಸೂಚಿಸಿದರು.

Call us

Click Here

ಅವರು ಇಂದು ಜಿ.ಪಂ. ಸಭಾಂಗಣದಲ್ಲಿ, ಜಿಲ್ಲೆಯ ಕಡಲತೀರಗಳಲ್ಲಿ ತ್ಯಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕುರಿತಂತೆ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಡಿದರು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 80 ಕಿಮೀ ಕಡಲತೀರ ಪ್ರದೇಶವಿದ್ದು, ಈ ಕಡಲತೀರಗಳ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳ ಮೂಲಕ ಬೀಚ್ ನಲ್ಲಿ ಪ್ರತಿನಿತ್ಯ ಶಾಶ್ವತ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು, ಈ ಬಗ್ಗೆ ಶಾಶ್ವತ ವ್ಯವಸ್ಥೆಗಳನ್ನು ರೂಪಿಸಲು , ಜಿಲ್ಲಾ ಪಂಚಾಯತ್ ನಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಲತೀರಗಳ ಸ್ವಚ್ಚತೆಯನ್ನು ಸ್ಥಳೀಯ ಸಂಜೀವನಿ ಸ್ವಸಹಾಯ ಸಂಘಕ್ಕೆ ನೀಡುವ ಮೂಲಕ ಬೀಚ್ ನಲ್ಲಿ ಸ್ವಚ್ಛತೆ ಕಾಪಾಡಬೇಕು, ತ್ಯಾಜ್ಯ ನಿರ್ವಹಣೆಯ ಜೊತೆಗೆ ಈ ಸಂಘದ ಮಹಿಳೆಯರಿಗೆ ಬೀಚ್ ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ನೀಡಿ ಅವರಿಗೂ ಅರ್ಥಿಕ ಲಾಬ ದೊರೆಯುವಂತೆ ಮಾಡಬೇಕು, ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸುವ ಕುರಿತಂತೆ ಇವರಿಗೆ ಅಗತ್ಯ ತರಬೇತಿಯನ್ನು ನೀಡಲಾಗುವುದು. ಬೀಚ್ ಗಳಲ್ಲಿ ಹಸಿ ಮತ್ತು ಒಣಕಸಗಳನ್ನು ಹಾಕಲು ಪ್ರವಾಸೋದ್ಯಮ ಇಲಾಖೆಯಿದ ಅಗತ್ಯವಿರುವಷ್ಟು ಸಂಖ್ಯೆಯ ಡಸ್ಟ್ ಬಿನ್ ಗಳನ್ನು ಒದಗಿಸಲಾಗುವುದು ಎಂದರು.

ಕಡಲತೀರಗಳ ವ್ಯಾಪ್ತಿಯಲ್ಲಿನ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ತ್ಯಾಜ್ಯದಿಂದ ಅಘುವ ದುಷ್ಪರಿಣಾಮಗಳು ಮತ್ತು ಅದರ ಸೂಕ್ತ ನಿರ್ವಹಣೆ ಕುರಿತಂತೆ ಜಾಗೃತಿ ಮೂಡಿಸಬೇಕು,ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ತ್ಯಾಜ್ಯ ನಿರ್ಮೂಲನೆ ಕುರಿತ ಅರಿವು ಮೂಡಿಸುವುದರ ಜೊತೆಗೆ, ಗ್ರಾಮಗಳಲ್ಲಿ ಒಣಕಸ ಸಂಗ್ರಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೆಕು ಎಂದರು.

Click here

Click here

Click here

Click Here

Call us

Call us

ಬೀಚ್ ಗಳಲ್ಲಿ ತ್ಯಾಜ್ಯ ಹಾಕದ ಕುರಿತಂತೆ ಜಾಗೃತಿ ಮೂಡಿಸುವ ಹೋರ್ಡಿಂಗ್ ಅಳವಡಿಸಲು ಪ್ರವಾಸೋದ್ಯಮ ಇಲಾಖೆವತಿಯಿಂದ ಕ್ರಮ ಕೈಗೊಳ್ಳಲಾಗುವುದು, ಬೀಚ ಗಳಲ್ಲಿ ತ್ಯಾಜ್ಯ ಬಿಸಾಡುವವರ ಕುರಿತು ನಿಗಾ ವಹಿಸುವಂತೆ ತಿಳಿಸಿದ ಅವರು ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕುರಿತಂತೆ ಪಿಡಿಓ ಗಳು ತಮಗೆ ನೀಡಿರುವ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಸುವಂತೆ ತಿಳಿಸಿದರು.

ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಸಮುದ್ರದಲ್ಲಿ ಯಾವುದೇ ತ್ಯಾಜ್ಯವನ್ನು ಬಿಸಾಡದಂತೆ ಮತ್ತು ಹರಿದ ಮೀನಿನ ಬಲೆ ಮತ್ತಿತರ ಅನುಪಯುಕ್ತ ವಸ್ತುಗಳನ್ನು ದಡಕ್ಕೆ ಬಂದು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಮೀನುಗಾರಿಕೆ ಇಲಾಖೆ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ಸ್ವಚ್ಛ ಸಮುದ್ರ ತೀರದಿಂದ ಸಮುದ್ರಕ್ಕೆ ಸೇರುವ ತ್ಯಾಜ್ಯ ಇಲ್ಲದಂತಾಗಿ ಅಮೆಗಳು ಸೇರಿದಂತೆ ಅನೇಕ ಅಪರೂಪದ ವೈವಿಧ್ಯಮಯ ಜಲಚರಗಳ ಸಂತತಿ ವೃದ್ಧಿಯಾಗಲಿದೆ ಹಾಗೂ ಜಿಲ್ಲೆಯ ಪರಿಸರ ಸೂಕ್ಷö್ಮ ವಲಯದ ಉಳಿವು ಮತ್ತು ಬೆಳವಣಿಗೆ ಸಹ ಸಾಧ್ಯವಾಗಲಿದೆ ಎಂದರು.

ಜಿಲ್ಲೆಯಲ್ಲಿ 15 ದಿನಗಳ ಒಳಗೆ ಪೈಲಟ್ ಯೋಜನೆಯಾಗಿ ಯಾವುದಾದರೊಂದು ಕಡಲತೀರದ ಗ್ರಾಮ ಪಂಚಾಯತ್ ನಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫಡ್ ð ಲೋಬೋ, ವಿವಿಧ ಸ್ವಯ ಸೇವಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಕಡಲತೀರ ವ್ಯಾಪ್ತಿಯ ಪಿಡಿಓ ಗಳು ಉಪಸ್ಥಿತರಿದ್ದರು.

Leave a Reply