ನೌಕರರ ರಾಜ್ಯಮಟ್ಟದ ಕ್ರೀಡಾಕೂಟ: ಉಡುಪಿ ಜಿಲ್ಲಾ ತಂಡಕ್ಕೆ ಸಮಗ್ರ ದ್ವಿತೀಯ ಸ್ಥಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜೂ.08:
ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮೇ 30 ರಿಂದ ಜೂನ್ 1 ರ ವರೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಉಡುಪಿ ಜಿಲ್ಲೆಯಿಂದ ಒಟ್ಟು 76 ನೌಕರರು ಭಾಗವಹಿಸಿ, 14 ಚಿನ್ನ, 8 ಬೆಳ್ಳಿ ಹಾಗೂ 8 ಕಂಚಿನೊಂದಿಗೆ ಸಮಗ್ರ ತಂಡ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

Call us

Click Here

ವಿಜೇತ ಕ್ರೀಡಾಪಟುಗಳ ವಿವರ:
ನ್ಯಾಯಾಂಗ ಇಲಾಖೆಯ ವಾಣಿ-ಈಜು ಸ್ಪರ್ದೆಯಲ್ಲಿ 3 ಚಿನ್ನ, ಮಂಜುಳಾ-2 ಕಂಚು, ಲಿನಿ ಅವರಿಗೆ ಉದ್ದ ಜಿಗಿತದಲ್ಲಿ 1 ಕಂಚು.

ವಾಣಿಜ್ಯ ತೆರಿಗೆ ಇಲಾಖೆಯ ಸಾರಿಕಾ- ಈಜು ಸ್ಪರ್ದೆಯಲ್ಲಿ 3 ಚಿನ್ನ, ಶ್ರೀಕಾಂತ್ – ಭಾರ ಎತ್ತುವ ಸ್ಪರ್ದೆಯಲ್ಲಿ 1 ಬೆಳ್ಳಿ.

ಶಿಕ್ಷಣ ಇಲಾಖೆಯ ವಿಜಯ ಲಕ್ಷ್ಮೀ ಕಾರ್ಕಳ- ಈಜು ಸ್ಪರ್ದೆಯಲ್ಲಿ 1 ಚಿನ್ನ, 2 ಬೆಳ್ಳಿ, ಮಂಜುನಾಥ್ ಐತಾಳ್ – ಈಜು ಸ್ಪರ್ದೆಯಲ್ಲಿ 2 ಕಂಚು, ಗಣೇಶ್ ಶೆಟ್ಟಿ- ಉದ್ದ ಜಿಗಿತದಲ್ಲಿ 1 ಕಂಚು, ಗೀತಾ- 100 ಮೀ. ಓಟದಲ್ಲಿ 1 ಬೆಳ್ಳಿ, 200 ಮೀ. ಓಟದಲ್ಲಿ 1 ಕಂಚು, ಶ್ರೀದೇವಿ ಭಾರ ಎತ್ತುವಿಕೆ 2 ಚಿನ್ನ, ವಸಂತಿ ಭಾರ ಎತ್ತುವಲ್ಲಿ 1 ಬೆಳ್ಳಿ, ನಾಗರತ್ನ 100 ಮೀ. ಓಟದಲ್ಲಿ 1 ಕಂಚು.

ಅಗ್ನಿ ಶಾಮಕ ಇಲಾಖೆಯ ಅಶ್ವಿನ್ ಸನಿಲ್ – ಭಾರ ಎತ್ತುವಲ್ಲಿ 2 ಚಿನ್ನ, 100 ಮೀ. ಓಟದಲ್ಲಿ 1 ಬೆಳ್ಳಿ. ತಾಂತ್ರಿಕ ಶಿಕ್ಷಣ ಇಲಾಖೆಯ ನಯನ ಪಿ ಬಿ ಭರತನಾಟ್ಯದಲ್ಲಿ ಚಿನ್ನ. ಆರೋಗ್ಯ ಇಲಾಖೆಯ ಉದಯ್ ಕುಮಾರ್ ಶೆಟ್ಟಿ 400 ಮೀ. ಓಟದಲ್ಲಿ ಚಿನ್ನ, ಪಲ್ಲವಿ ಭಾರ ಎತ್ತುವಿಕೆಯಲ್ಲಿ 2 ಬೆಳ್ಳಿ.

Click here

Click here

Click here

Click Here

Call us

Call us

ಕಿರು ನಾಟಕ ಸ್ಪರ್ದೆಯಲ್ಲಿ ಶಿಕ್ಷಣ ಇಲಾಖೆಯ ರವಿ ಎಸ್ ಪೂಜಾರಿ ಇವರ ತಂಡವು ಬರ್ಬರೀಕ ನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿರುತ್ತದೆ. ಪ್ರಥಮ ಸ್ಥಾನ ಪಡೆದ ಎಲ್ಲಾ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ವಿಜೇತ ಕ್ರೀಡಾಪಟುಗಳೊಂದಿಗೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply