ಉಡುಪಿ ಜಿಲ್ಲೆಯಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ, ತಪಾಸಣಾ ಶಿಬಿರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜೂ.09:
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಯಲದ ಎ.ಡಿ.ಐ.ಪಿ ಯೋಜನೆಯಡಿ ಬೆಂಗಳೂರು ಅಲಿಮ್ಕೋ ಎ.ಸಿ.ಸಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ವ್ಯಾಪ್ತಿಯ ವಿಕಲಚೇತನರಿಗೆ ದೈನಂದಿನ ಚಟುವಟಿಕೆಗಳಿಗೆ ಪೂರಕವಾದ ಸಾಧನ ಸಲಕರಣೆಯನ್ನು ವಿತರಿಸಲು ಜೂನ್ 13 ರಿಂದ 23 ರ ವರೆಗೆ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

Call us

Click Here

ಜೂ. 13 ರಂದು ಕಾಪುವಿನ ಜೆ.ಸಿ ಭವನ, ಜೂ. 14 ರಂದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ, ಜೂ. 15 ರಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ, ಜೂ. 16 ರಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರ, ಜೂ. 17 ರಂದು ಕುಂದಾಪುರದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಜೂ. 18 ರಂದು ವಂಡ್ಸೆ ಸಮುದಾಯ ಆರೋಗ್ಯ ಕೇಂದ್ರ, ಜೂ. 20 ರಂದು ನಾವುಂದ ಹಿರಿಯ ಪ್ರಾಥಮಿಕ ಶಾಲೆ, ಜೂ. 21 ರಂದು ಹಾಲಾಡಿ ಕಿರಿಯ ಪ್ರಾಥಮಿಕ ಶಾಲೆ, ಜೂ. 22 ರಂದು ಕಾರ್ಕಳ ತಾಲೂಕು ಆಸ್ಪತ್ರೆ ಮತ್ತು ಜೂ. 23 ರಂದು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ಭಾಗವಹಿಸುವ ವಿಕಲಚೇತನ ವ್ಯಕ್ತಿಗಳು ಕನಿಷ್ಟ ಶೇ. 40 ಅಂಗವೈಕಲ್ಯತೆ ಹೊಂದಿರುವ ವೈದ್ಯಕೀಯ ದೃಢಪತ್ರ, ಮಾಸಿಕ ಆದಾಯ ರೂ. 22500 ಕ್ಕಿಂತ ಕಡಿಮೆ ಇರುವ ಬಗ್ಗೆ ದೃಢಪತ್ರ ಅಥವಾ ಬಿ.ಪಿ.ಎಲ್ ಕಾರ್ಡ್, ವಿಳಾಸ ದೃಢಪತ್ರ, 2 ಪಾಸ್ಪೋರ್ಟ್ ಸೈಜ್ ಫೋಟೋವನ್ನು ಕಡ್ಡಾಯವಾಗಿ ತರಬೇಕು.

ವಿಕಲಚೇತನರಿಗೆ ಉಚಿತವಾಗಿ ಶ್ರವಣ ಸಾಧನ, ಕೃತಕ ಆವಯವ, ಕ್ಯಾಲಿಪರ್, ಮೊಣಕೈ ಊರುಗೋಲು, ಕಂಕುಳ ದೊಣ್ಣೆ, ರೊಲೇಟರ್, ಊರುಗೋಲು, ಗಾಲಿಕುರ್ಚಿ, ಸಿ.ಪಿ. ಗಾಲಿಕುರ್ಚಿ, ತ್ರಿಚಕ್ರ ಸೈಕಲ್, ಬ್ರೆöÊಲ್ ಕಿಟ್, ಅಂಧರಿಗೆ ಮೊಬೈಲ್ ಫೋನ್, ಸ್ಮಾರ್ಟ್ಕೇನ್, ಕುಷ್ಟರೋಗದಿಂದ ಗುಣಮುಖರಾದವರಿಗೆ ಎ.ಡಿ.ಎಲ್ ಕಿಟ್ ಮತ್ತು ಮೊಬೈಲ್ ಫೋನ್ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ: 0820-2574810/811ನ್ನು ಸಂಪರ್ಕಿಸುವAತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click here

Click here

Click here

Click Here

Call us

Call us

Leave a Reply