ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ದಿನದಿಂದ ಪ್ರಕೃತಿ ಕಲುಷಿತವಾಗುತ್ತಿದೆ. ಪ್ಲಾಸ್ಟಿಕ್ ಅತಿಯಾದ ಪ್ಲಾಸ್ಟಿಕ್ ಬಳಕೆಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಪರಿಸರ ದಿನಾಚರಣೆ ಹೆಸರಿನಲ್ಲಿ ಗಿಡಗಳನ್ನು ನೆಡುವುದಷ್ಟೇ ಅಲ್ಲದೇ ಅವುಗಳನ್ನು ಪೋಷಿಸುವ ಕಾರ್ಯವನ್ನು, ಪ್ಲಾಸ್ಟಿಕ್ ಹಾಗೂ ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಮಿತವಾಗಿ ಬಳಸುವ ಕಾರ್ಯವನ್ನು ಮಾಡಬೇಕಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು.
ಅವರು ಅರಣ್ಯ ಇಲಾಖೆ ಕೊಲ್ಲೂರು ಹಾಗೂ ಸಿದ್ಧಾಪುರ ವನ್ಯಜೀವಿ ವಲಯ ಹಾಗೂ ಪರಿಸರ ಅಭಿವೃದ್ಧಿ ಸಮಿತಿ ಜಂಟಿ ಆಶ್ರಯದೊಂದಿಗೆ ಮಂಗಳವಾರ ಕೊಲ್ಲೂರು ಸೌಪರ್ಣಿಕ ಸಸ್ಯಕ್ಷೇತ್ರದಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಕೊಲ್ಲೂರು ಗ್ರಾಪಂ ಅಧ್ಯಕ್ಷರಾದ ಶಿವರಾಮ ಕೃಷ್ಣ ಭಟ್ಟ ಗಿಡ ನೆಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪ್ರಕಾಶ್ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ಉಪ ವಿಭಾಗ ಸಿದ್ದಾಪುರ, ರಮೇಶ್ ಗಾಣಿಗ, ಉದ್ಯಮಿಗಳು, ಕೊಲ್ಲೂರು, ರಾಜು ನಾಯ್ಕ, ವಲಯ ಅರಣ್ಯಾಧಿಕಾರಿ, ಕೊಲ್ಲೂರು ವನ್ಯಜೀವಿ ವಲಯ, ಸಂತೋಷ ಪವಾರ್, ವಲಯ ಅರಣ್ಯಾಧಿಕಾರಿ, ಸಿದ್ದಾಪುರ ವನ್ಯಜೀವಿ ವಲಯ, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶ್ರೀ ಮೂಕಾಂಬಿಕ ದೇವಳದ ಪದವಿ ಪೂರ್ವ, ಪ್ರೌಢಶಾಲೆ, ಕೊಲ್ಲೂರು, ದಳಿ ಮತ್ತು ಕಟ್ಟಿನಹೊಳೆ ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ದತ್ತಾತ್ರೇಯ ಮತ್ತು ಗಣಪತಿ ಶಿಕ್ಷಕರು, ಶ್ರೀ ಮೂಕಾಂಬಿಕಾ ದೇವಳದ ಪ್ರೌಡ ಶಾಲೆ, ಮತ್ತು ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು ಸಿಬ್ಬಂದಿಗಳು ಸದ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಇಕೋಕ್ಲಬ್ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕೊಲ್ಲೂರು ಬಸ್ ನಿಲ್ದಾಣದಿಂದ ಮಾಸ್ತಿಕಟ್ಟೆಯ ತನಕದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಯಿತು. ಉಪ ಅರಣ್ಯಾಧಿಕಾರಿ ಸಂಪತ್ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಉಪ ಅರಣ್ಯಾಧಿಕಾರಿ ಸುನಿತಾ ಭಟ್ ಸ್ವಾಗತಿಸಿದರು. ಅರಣ್ಯ ರಕ್ಷಕ ಗಂಗಾಧರ ಆದಗೊಂಡ ವಂದಿಸಿದರು.