ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಮಲಶಿಲೆಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಉಪ್ಪುಂದದ ಶ್ರೀಧರ ಮಡಿವಾಳ (38) ಬಂಧಿತ ಆರೋಪಿಯಾಗಿದ್ದಾನೆ.
ಜೂನ್ 18 ರಂದು ರಾತ್ರಿ ಕೆಳಮದುರೆ ಮನೆ ರಾಘವೇಂದ್ರ ಯಡಿಯಾಳ ಎಂಬವರ ಮನೆಯ ಕೋಣೆಯ ಕಪಾಟಿನಲ್ಲಿ ಇರಿಸಿದ್ದ ಸುಮಾರು 1,30,000 ಲಕ್ಷ ಬೆಲೆ ಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ ಸುಮಾರು 1,50,000 ಲಕ್ಷ ಬೆಲೆ ಬಾಳುವ ಮಲ್ಲಿಗೆ ಮಿಟ್ಟಿಯ 30 ಗ್ರಾಂನ ಒಂದು ಚಿನ್ನದ ಸರ, ಸುಮಾರು 20,000 ಬೆಲೆ ಬಾಳುವ ಮೂರು ಹರಳಿನ 4 ಗ್ರಾಂ ಚಿನ್ನದ ಉಂಗುರ, 5 ಸಾವಿರ ನಗದು ಹಣ ಕಳವು ಮಾಡಿದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ. ಕಳವು ಮಾಡಿದ 2 ಚಿನ್ನದ ಬಳೆಗಳು, 1 ಮಲ್ಲಿಗೆ ಮಿಟ್ಟಿಯ ಚಿನ್ನದ ಸರ, ಹಾಗೂ ಒಂದು ಚಿನ್ನದ ಉಂಗುರ ಸೇರಿ ಮೌಲ್ಯ ಸುಮಾರು 3 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕಾರ್ಯಚರಣೆಯಲ್ಲಿ ಶಂಕರನಾರಯಣ ಪಿಎಸ್ಐ ಶ್ರೀಧರ ನಾಯ್ಕ, ಪಿಎಸ್ಐ ಸುದರ್ಶನ್ ಹಾಗೂ ಸಿಬ್ಬಂದಿಗಳಾದ ಸೀತರಾಮ ಶೆಟ್ಟಿಗಾರ್, ರಾಘವೇಂದ್ರ, ಗೋಪಾಲಕೃಷ್ಣ, ಮಂಜುನಾಥ್, ರಾಕೇಶ್, ಅನಿಲ್ ಕುಮಾರ್, ವಿಲ್ಫ್ರೆಡ್ ಡಿಸೋಜ, ವಿಲಾಸ್ ರಾಥೋಡ್, ಆಲಿಂಗರಾಯ ಕಾಟೆ, ಚಂದ್ರ ಕುಮಾರ್, ಜಯರಾಮ ನಾಯ್ಕ ಮೊದಲಾದವರು ಪಾಲ್ಗೊಂಡಿದ್ದಾರೆ.