ಕುಂದಾಪುರ: ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಚಾರ್ಯ ಮೆಮೋರಿಯಲ್ ಹೈಸ್ಕೂಲಿನಲ್ಲಿ ಇತ್ತೀಚಿಗೆ ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Call us

Click Here

ಸಂಸ್ಥೆಯ ಸಂಚಾಲಕ, ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಅವರು 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 620 ಕ್ಕೂ ಅಧಿಕ ಅಂಕ ಪಡೆದ ಅನ್ವಿತಾ ಎಸ್ (624), ಅನಿರುದ್ದ್ ಎಸ್ ಹತ್ವಾರ್ (624), ಅಭಿಷೇಕ್ ಅಡಿಗ (623), ಆದಿತ್ಯ ಎಮ್ (623) ಸಿಂಧೂ ಕೆ.ಟಿ (622), ಛಾಯಾ (622,) ರಿಯಾ ಎಚ್ ಶೆಟ್ಟಿ (622), ಎಮ್ ಸೃಜನ್ (621), ಬಿ ಸುನಿಧಿ ಉಡುಪ ( 621), ಹರ್ಷಿತ ಡಿ.ಎಸ್ (620), ಅರ್ಪಿತ ಎನ್ (620), ಶಾನ್ವಿನ್ ರೋಯ್ಸ್ ಪಿರೇರಾ (620) ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಅವರು ಒಂದು ಒಳ್ಳೆಯ ಶೈಕ್ಷಣಿಕ ವಾತಾವರಣ ಜೊತೆಗೆ ಗುರಿಯ ಹಿಂದೆ ಗುರುವಿನ ಮಾರ್ಗದರ್ಶನದಿಂದ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಇಂತಹ ಸಾಧನೆಯ ಶಿಖರವನ್ನು ಏರಲು ಸಾಧ್ಯ ಎಂದರು.

ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿಯಾದ ಶಿಕ್ಷಕರನ್ನೂ ಕೂಡ ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಾಂಶುಪಾಲರಾದ ಚಿಂತನಾ ರಾಜೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮತ್ತು ಉಪಪ್ರಾಂಶುಪಾಲರಾದ ಶುಭಾ ಕೆ.ಎನ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲತಾ ಜಿ ಭಟ್ ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಾಯಕ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply