ಕೋಟ: ಹಾಲೆ ಗಿಡ ನೆಟ್ಟು ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ, ಜು.28:
ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮ ಕೋಟ ಪಶು ಆಸ್ಪತ್ರೆ ವಠಾರದಲ್ಲಿ ಜರಗಿತು.

Call us

Click Here

ಹಿರಿಯ ಕೃಷಿಕರಾದ ಕೂಸ ಪೂಜಾರಿಯವರು ಹಾಲೆ ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಉದ್ಯಮಿ ಆನಂದ ಸಿ. ಕುಂದರ್ ಮಾತನಾಡಿ, ನಮ್ಮ ಹಿಂದಿನ ತಲೆಮಾರಿನವರು ಗಿಡ ಮರಗಳನ್ನು ಬೆಳೆಸಿ ಸಂರಕ್ಷಿಸಿದ್ದರಿಂದ ಅದರ ಫಲ ಇವತ್ತು ನಾವು ಉಣ್ಣುವಂತಾಗಿದೆ. ಈ ಪರಂಪರೆಯನ್ನು ಮುಂದುವರಿಸುವಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಯಂತಹ ಕಾರ್ಯಕ್ರಮಗಳು ನೆಪವಾಗುತ್ತಿರುವುದು ಅರ್ಥಪೂರ್ಣ ಎಂದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕುಂದಗನ್ನಡದ ವಿಶೇಷತೆಯನ್ನು ತಿಳಿಸಿದರು ಹಾಗೂ ಈ ಭಾಷೆಯನ್ನು ಬಳಸುವುದರ ಮೂಲಕ ಬೆಳೆಸಬೇಕು ಎಂದರು.

ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಆಶಯಗಳನ್ನು ವಿವರಿಸಿದರು. ಪಶು ವೈದ್ಯಾಕಾರಿ ಡಾ| ಅರುಣ ಕುಮಾರ್ ಶೆಟ್ಟಿ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ನಿದೇರ್ಶಕ ಟಿ. ಮಂಜುನಾಥ ಗಿಳಿಯಾರು, ಮುಖ್ಯ ಕಾರ್ಯನಿರ್ವಹಣಾಽಕಾರಿ ಶರತ್ ಶೆಟ್ಟಿ, ಸಾಲಿಗ್ರಾಮ ಪ.ಪಂ. ಮಾಜಿ ಸದಸ್ಯ ಭೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಜನ ಸೇವಾ ಟ್ರಸ್ಟಿನ ಸಂಚಾಲಕ ವಸಂತ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply