ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2022ನೇ ಸಾಲಿನ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ (Mch) ಪ್ರವೇಶ ಪರೀಕ್ಷೆ ಸರ್ಜರಿ ವಿಭಾಗದಲ್ಲಿ ಕುಂದಾಪುರದ ಡಾ. ಅತೀಶ್ ಬಿ. ಶೆಟ್ಟಿ ದೇಶದಲ್ಲೇ ಪ್ರಥಮ ರಾಂಕ್ ಪಡೆದುಕೊಂಡಿದ್ದಾರೆ.
ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಸರ್ಜನ್ ಡಾ. ಬಾಲಕೃಷ್ಣ ಶೆಟ್ಟಿ ಹಾಗೂ ಸುನಿತಾ ಶೆಟ್ಟಿ ಕಂದಾವರ ಅವರ ಪುತ್ರರಾದ ಅತೀಶ್ ಬಿ. ಶೆಟ್ಟಿ ಅವರು ಬ್ರಹ್ಮಾವರ ಲಿಟಲ್ ರಾಕ್ ಸ್ಕೂಲಿನಲ್ಲಿ ಪಿಯುಸಿ ತನಕದ ವಿದ್ಯಾಭ್ಯಾಸ ಪೂರೈಸಿ, ಸಿಇಟಿಯಲ್ಲಿ 13ನೇ ರ್ಯಾಂಕ್ ಪಡೆದುಕೊಂಡಿದ್ದರು.
ಬಳಿಕ ಕೆಎಂಸಿ ಮಣಿಪಾಲದಲ್ಲಿ ಎಂಬಿಬಿಎಸ್, ಬಿಎಂಸಿ ಮೆಡಿಕಲ್ ಕಾಲೇಜು ಬೆಂಗಳೂರಿನಲ್ಲಿ ಎಂ.ಎಸ್. ಪದವಿಯನ್ನು ಮುಗಿಸಿ ಅಗಸ್ಟ್’ನಲ್ಲಿ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆ ಬರೆದಿದ್ದರು.