ಶ್ರೀ ಕಾಲಾಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಾಭೈರವ ದೇವರ ಅಷ್ಟಬಂಧ ಸಹಿತ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮೂಹೂರ್ತ ಕಾರ್ಯಕ್ರಮ ಜರುಗಿತು.

Call us

Click Here

ಇದನ್ನೂ ಓದಿ:
► ಜೀರ್ಣೋದ್ಧಾರ ಕಾರ್ಯದಲ್ಲಿ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ – https://kundapraa.com/?p=63270 .

ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿಗಳಾದ ರಘುರಾಮ ಮಧ್ಯಸ್ಥರ ಮಾರ್ಗದರ್ಶನದಂತೆ ಕ್ಷೇತ್ರ ಜೋಯಿಸರಾದ ರಾಮಚಂದ್ರ ನಾವುಡ ತೆಂಕಬೆಟ್ಟು ಇವರ ನೇತೃತ್ವದಲ್ಲಿ ನಡೆದವು.

ಈ ಸಂದರ್ಭದಲ್ಲಿ ಕೆ. ಕೃಷ್ಣ ಪೂಜಾರಿ ಮುಂಬೈ, ದಯಾನಂದ ಜೋಗಿ ನಾವುಂದ, ನವೀನ್ ಚಂದ್ರ ಜೋಗಿ ಕಾಪು, ಸುಕೇಶ್ ಕುಮಾರ ಶೆಟ್ಟಿ ಹಳಗೇರಿ, ನಾಗೇಶ್ ಜೋಗಿ ಕೆಳಮನೆ, ನರಸಿಂಹ ಹಳಗೇರಿ ರಮೇಶ ದೇವಾಡಿಗ ನಾಗೂರು, ಸುಬ್ರಮಣ್ಯ ಜೋಗಿ ಕೆಳಮನೆ ಹಾಗೂ ನಂಬಿದ ಭಕ್ತಾಭಿಮಾನಿಗಳು, ಕುಟುಂಬಸ್ಥರು ಹಾಜರಿದ್ದರು. ಜನವರಿ 26ರಿಂದ ಮೊದಲ್ಗೊಂಡು 30ರ ಪರ್ಯಂತ ಶ್ರೀ ಕಾಲಾಭೈರವ ದೇವರ ಅಷ್ಟಬಂಧ ಸಹಿತ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಜರುಗಲಿದೆ.

Leave a Reply