‘ಪ್ರಹ್ಲಾದ ಚರಿತೆ’ಯ ಇಂಗ್ಲೀಷು ಹರಿಕಥೆ…!

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಕನ್ನಡ ಸೇರಿದಂತೆ ಭಾರತದ ಇತರ ಪ್ರಾದೇಶಿಕ ಭಾಷೆಗಳಲ್ಲಿ ನೀವು ಹರಿಕಥೆಯ ಸೊಗಡಿಗೆ ಸಾಕ್ಷಿಯಾಗಿರಬಹುದು. ಆದರೆ ಇಂಗ್ಲಿಷ್‌ನಲ್ಲಿ ಹರಿಕಥೆ ನಿರೂಪಿತವಾದರೆ ಹೇಗಿರುತ್ತದೆ? ಪರಭಾಷೆಯಲ್ಲಿ ನಮ್ಮದೇ ದೇಶದ ಪೌರಾಣಿಕ ಕಥೆಯ ಅಭಿವ್ಯಕ್ತಿ ಹೊಸ ಅನುಭವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿನ ಪ್ರೇಕ್ಷಕರಿಗೆ ದಾಟಿಕೊಂಡಿತು.

Call us

Click Here

ಬೆಂಗಳೂರಿನ ಶಾರ್ವರಿ ಅವರ ಧ್ವನಿಯಲ್ಲಿ ಅಭಿವ್ಯಕ್ತವಾದ ’ಪ್ರಹ್ಲಾದ ಚರಿತೆ’ ಹರಿಕಥೆಯು ಪ್ರಹ್ಲಾದನ ಭಕ್ತಿ ಮತ್ತು ಅವರ ತಂದೆಯ ನಡುವಿನ ಸಂಘರ್ಷದ ಕಥನವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹಿಡಿದಿಟ್ಟಿತು.

ಆರಂಭದಲ್ಲಿ ಕನ್ನಡ ಭಾಷೆಯಲ್ಲಿ ಪ್ರಹ್ಲಾದ ಮತ್ತು ಅವರ ತಂದೆ ಹಿರಣ್ಯಕಶ್ಯಪು ನಡುವಿನ ಸಂಘರ್ಷದ ವಿವಿಧ ಆಯಾಮಗಳನ್ನು ಶಾರ್ವರಿ ಪರಿಚಯಿಸಿದರು. ನಂತರ ಇಂಗ್ಲಿಷ್ ಭಾಷೆಯ ಮೂಲಕ ಪ್ರಹ್ಲಾದನ ಕಥನವನ್ನು ಸಂಕ್ಷಿಪ್ತವಾಗಿ ಅನಾವರಣಗೊಳಿಸಿದರು. ತಾಯಿಯ ಮೂಲಕ ಪ್ರಹ್ಲಾದನಿಗೆ ವಿಷ ನೀಡಿಸುವ ಪ್ರಸಂಗ ಮತ್ತು ವಿಷ್ಣು ಉಗ್ರನರಸಿಂಹಾವತಾರ ತಳೆದ ಸಂದರ್ಭವನ್ನು ಇಂಗ್ಲಿಷ್ ಭಾಷೆಯ ಮನೋಜ್ಞ ಶೈಲಿಯಲ್ಲಿ ನಿರೂಪಿಸಿದರು.

ಕನ್ನಡದ ಭಾಷೆಯಲ್ಲಿ ನಿರೂಪಿತವಾಗುವ ಹರಿಕಥೆಯನ್ನು ಪರಭಾಷೆಯಲ್ಲಿ ನಿರೂಪಿಸುವುದು ಸವಾಲಿನ ಕೆಲಸ. ಇಂಥ ಸವಾಲನ್ನು ಅತ್ಯಂತ ಸರಾಗವಾಗಿ ನಿರ್ವಹಿಸಿದರು ಶಾರ್ವರಿ. ಕನ್ನಡದ ಭಾಷಿಕ ಸೊಗಡನ್ನು ಹಿಡಿದಿಟ್ಟ ಹಾಗೆಯೇ ಇಂಗ್ಲಿಷ್‌ನಲ್ಲೂ ಪ್ರಹ್ಲಾದ ಮತ್ತು ಹಿರಣ್ಯಕಶ್ಯಪ ಪ್ರಸಂಗಗಳನ್ನು ಮನಮುಟ್ಟುವಂತೆ ನಿರೂಪಿಸಿದರು.

ಇಂಗ್ಲಿಷ್‌ನಲ್ಲಿ ಸಂಘರ್ಷದ ಸಂದರ್ಭದ ಎರಡು ಪ್ರಸಂಗಗಳನ್ನು ಹೇಳಿ ನಡುನಡುವೆ ಕನ್ನಡದ ಗೀತೆಗಳ ಮೂಲಕ ಆ ಸಂದರ್ಭದ ಭಾವತೀವ್ರತೆಯನ್ನು ಆಪ್ತವಾಗಿ ಪ್ರಸ್ತುತಪಡಿಸಿದ ಅವರ ಶೈಲಿ ವಿಶೇಷವಾಗಿತ್ತು. ಇಂಗ್ಲಿಷ್ ನಿರೂಪಣೆಯೊಳಗೂ ಭಾರತೀಯ ದೇಶೀಯತೆಯ ಸೊಗಡು ಬೆರೆತ ಅನನ್ಯತೆಯನ್ನು ಈ ಶೈಲಿ ಬಿಂಬಿಸಿತು. ಒಂದಷ್ಟು ಕಥೆ ಇಂಗ್ಲಿಷ್‌ನಲ್ಲಿ, ತದನಂತರದ ಪ್ರಸಂಗಾಧಾರಿತ ವರ್ಣನೆಯ ಹಾಡು ಕನ್ನಡದಲ್ಲಿ ವ್ಯಕ್ತವಾಗಿ ಇಡೀ ಹರಿಕಥೆಯ ನಿರೂಪಣೆಯನ್ನು ದೇಶೀಯವಾಗಿಸಿತು.

Click here

Click here

Click here

Click Here

Call us

Call us

ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ
ಚಿತ್ರಗಳು: ವಿನೀತಾ ಎಸ್

Leave a Reply