ದೇವರ ನವನವೀನ ಅವತಾರಗಳೊಂದಿಗಿನ ತರಹೇವಾರಿ ದೀಪಗಳು…!

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ಇಷ್ಟದ ದೇವರ ಪಟ, ಮೂರ್ತಿಯ ಮುಂದೆ ಪ್ರಾರ್ಥನೆ ಸಲ್ಲಿಸೋದು ಸಹಜ. ದೀಪದ ಹಣತೆಯೇ ದೇವಾನುದೇವತೆಗಳ ನವನವೀನ ಅವತಾರಗಳೊಂದಿಗೆ ಸಂಯೋಜಿತಗೊಂಡರೆ? ಅಂಥ ಹಣತೆಯ ಒಳಗೇ ಮಾಡರ್ನ್ ಗತ್ತಿನ ದೇವರ ಚಿತ್ರಗಳು ಕಾಣಿಸಿಕೊಂಡರೆ? ಒಮ್ಮೆ ಹಚ್ಚಿದ ಹಣತೆ ಯಾವುದೇ ಕಾರಣಕ್ಕೂ ನಂದದ ಹಾಗೆ ದೀಪದ ಪ್ರಭೆ ಹರಡಿದರೆ?

Call us

Click Here

ಹಾಗಾದರೆ ನೋಡುಗರಿಗೆ ವಿನೂತನ ಬಗೆಯ ದೀಪವನ್ನು ಸಾಕ್ಷೀಕರಿಸಿಕೊಂಡ ಅವಕಾಶ ಲಭ್ಯವಾಗುತ್ತದೆ. ಹೊಸದೊಂದು ಅವತಾರಗಳೊಂದಿಗಿನ ದೇವ-ದೇವತೆಗಳ ಮೂರ್ತಿಗಳ ಮುಂದೆ ಹಣತೆ ಹಚ್ಚಿ ಪ್ರಾರ್ಥನೆ ಸಲ್ಲಿಸುವ ವಿನೂತನ ಬಗೆ ಆವಿಷ್ಕಾರಗೊಳ್ಳುತ್ತದೆ. ಇಂಥದ್ದೊಂದು ಆರಾಧನಾ ಟ್ರೆಂಡ್‌ನ್ನು ಆರಂಭಿಸುವುದಕ್ಕೆ ಬೇಕಾದ ಒತ್ತಾಸೆ ಮೂಡಿಸಿದೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಲಾಮೇಳ. ಇದಕ್ಕೆ ಕಾರಣವಾಗಿರೋದು ವಿವಿಧ ರೂಪಗಳ ಮ್ಯಾಜಿಕ್ ದೀಪದ ತರಹೇವಾರಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಭರಾಟೆ.

ಇಲ್ಲಿ ಮಾರಾಟಕ್ಕೆ ಲಭ್ಯವಿರುವ ವಿವಿಧ ಬಗೆಯ ಮಣ್ಣಿನ ದೀಪಗಳು ಆರಾಧನೆಯ ಕ್ರಮವನ್ನು ಇನ್ನಷ್ಟು ವಿನೂತನವಾಗಿಸುವ ರೀತಿಯಲ್ಲಿವೆ. ಮನೆಯಲ್ಲೇ ಸಿದ್ಧಪಡಿಸಿದ ಡಿಸೈನ್ ಮಣ್ಣಿನ ದೀಪಗಳು ಇಲ್ಲಿ ಮನಸೆಳೆಯುತ್ತಿವೆ, ಮ್ಯಾಜಿಕ್ ದೀಪ, ಲಿಂಗು ಗಣೇಶ ದೀಪ, ತುಳಸಿ ದೀಪ, ಬೋಟಿಂಗ್ ಗಣೇಶ, ಫ್ಲವರ್ ಡಿಸೈನ್ ದೀಪ, ಅಷ್ಟಲಕ್ಷ್ಮಿಯರ ದೀಪ, ಪಂಚ ದೀಪ, ಆರಾಮ್ ಗಣೇಶ ದೀಪ, ಹಂಸ ದೀಪಗಳು ಅನೇಕರಿಂದ ಖರೀದಿಸಲ್ಪಡುತ್ತಿವೆ.

ಗಣೇಶ ದೀಪ, ಮ್ಯಾಜಿಕ್ ದೀಪ ಹಾಗೂ ಅಷ್ಟ ಲಕ್ಷಿಯರ ದೀಪಗಳಿಗೆ ಭಾರಿ ಬೇಡಿಕೆ ಇದೆ. ಇಲ್ಲೊಂದು ಮಣ್ಣಿನಿಂದ ತಯಾರಿಸಿದ ವಿಶೇಷ ದೀಪವಿದೆ, ಇದು ಮ್ಯಾಜಿಕ್ ದೀಪವೆಂದೇ ಖ್ಯಾತಿ ಪಡೆದಿದೆ, ದೀಪಕ್ಕೆ ಎಣ್ಣೆಹಾಕಿ ತಿರುಗಿಸಿದರೂ ದೀಪದ ಎಣ್ಣೆ ಕೆಳಗೆ ಬೀಳುವುದಿಲ್ಲ. ಸತತ ೧೩ ತಾಸುಗಳ ಕಾಲ ಸುದೀರ್ಘ ಅವಧಿಗೆ ಬಾಳಿಕೆ ಬರುತ್ತದೆ.

  • ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Leave a Reply