Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ವಂಡ್ಸೆ: 2000-01ನೇ ಬ್ಯಾಚ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪುನರ್ ಮಿಲನ
    ಊರ್ಮನೆ ಸಮಾಚಾರ

    ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ವಂಡ್ಸೆ: 2000-01ನೇ ಬ್ಯಾಚ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪುನರ್ ಮಿಲನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ನಗು, ಅಳು, ಸಾರ್ಥಕತೆ, ಧನ್ಯತಾ ಭಾವ, ಹಳೆಯ ನೆನಪುಗಳು, ತುಂಟಾಟಗಳ ಮೆಲುಕು, ಏನೋ ಒಂದನ್ನು ಗಳಿಸಿದ ಮನೋಭಾವ, 22 ವರ್ಷಗಳ ಹಿಂದಿನ ಸಹಪಾಠಿಗಳೆಲ್ಲರೂ ಒಂದೇ ಸಭೆಯಲ್ಲಿ, 22 ವರ್ಷಗಳ ಹಿಂದಿನ ಗುರುಗಳೆಲ್ಲರೂ ಒಂದೇ ವೇದಿಕೆಯಲ್ಲಿ…

    Click Here

    Call us

    Click Here

    ಇವೆಲ್ಲವೂ ಕಾಣಸಿಕ್ಕಿದ್ದು ಇತ್ತೀಚಿಗೆ ಕುಂದಾಪುರ ತಾಲೂಕಿನ ಚಿತ್ತೂರಿನ ಸಕಲ ಕನ್ವೆನ್ಷನ್ ಹಾಲ್ ನಲ್ಲಿ. ಹೌದು, 2000-01ನೇ ಸಾಲಿನಲ್ಲಿ ಹತ್ತನೇ ತರಗತಿಯ ಓದನ್ನು ಸರ್ಕಾರಿ ಪ್ರೌಢಶಾಲೆ (ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್) ನೆಂಪು-ವಂಡ್ಸೆಯಲ್ಲಿ ಮುಗಿಸಿದ ವಿದ್ಯಾರ್ಥಿಗಳೆಲ್ಲರೂ ಆವತ್ತು ಪುನರ್ಮಿಲನ-ಗುರುವಂದನ ಎಂಬ ಶೀರ್ಷಿಕೆಯಡಿ ನಡೆಸಿದ ಕಾರ್ಯಕ್ರಮದ ಹೈಲೈಟ್ಸ್ಗಳಿವು.

    ಸುಮಾರು ನಾಲ್ಕಾರು ತಿಂಗಳುಗಳ ಹಿಂದೆ ಕಂಡ ಕನಸೊಂದು ಆವತ್ತು ನನಸಾದ ದಿನ. ಆ ದಿನಗಳಲ್ಲಿ ಸಹೋದ್ಯೋಗಿಗಳಾಗಿದ್ದ ಶಿಕ್ಷಕರೆಲ್ಲರೂ ಶಾಲೆಯ ಪರಿಸರದಲ್ಲಿ ಅಥವಾ ಪರಿಸರದ ಇತಿಹಾಸದಲ್ಲಿ ನಡೆದ ಮೊಟ್ಟಮೊದಲ ಗುರುವಂದನ ಕಾರ್ಯಕ್ರಮದಲ್ಲಿ ಭಾಗಿಯಾದ ಹೆಮ್ಮೆಯ ಕ್ಷಣ. ಒಂದು ರೀತಿಯಲ್ಲಿ ಇದು ಹೆಚ್ಚಿನ ಶಿಕ್ಷಕರುಗಳಿಗೂ ಪುನರ್ಮಿಲನವಾದ ದಿನ. ಓದನ್ನು ಮುಗಿಸಿ ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸ್ನೇಹಿತರೆಲ್ಲರೂ ಮತ್ತೊಮ್ಮೆ ಮಕ್ಕಳಾದ ದಿನ. ಇದಕ್ಕೆ ಸಾಕ್ಷಿಯಾದವರೆಲ್ಲರಿಗೂ ಇದೊಂದು ಮರೆಯಲಾಗದ ದಿನವೆಂಬುದಂತೂ ಸತ್ಯ. ತಮ್ಮ ಸ್ವಂತ ಕಾಲುಗಳಲ್ಲಿ ನಿಂತಿರುವ ವಿದ್ಯಾರ್ಥಿಗಳೆಲ್ಲರಿಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರು ಕರೆಕೊಟ್ಟ ದಿನ. ಆ ನಿಟ್ಟಿನಲ್ಲಿ ಮುನ್ನಡೆಯಬೇಕೆಂಬ ವಿದ್ಯಾರ್ಥಿಗಳೊಂದಿಗೆ ತಾವೂ ಸೇರಿಕೊಳ್ಳುತ್ತೇವೆಂಬ ಶಿಕ್ಷಕರ ಮಾತಿಗಿಂತ ಹೆಚ್ಚಿನ ಪ್ರೋತ್ಸಾಹ ಇನ್ನೇನು ಬೇಕು. ಸರ್ಕಾರಿ ಶಾಲೆಯನ್ನು ವಿಚಿತ್ರ ರೀತಿಯಲ್ಲಿ ನೋಡುವ ಜನತೆಗೆ, ಸರ್ಕಾರಿ ಶಾಲೆಯಲ್ಲೇ ಓದಿ ಬೇರೆ ಬೇರೆ ಊರುಗಳಲ್ಲಿ ಇದ್ದು, ಇಂತಹ ಮಹತ್ವಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡ ವಿದ್ಯಾರ್ಥಿಗಳ ಈ ಪ್ರಯತ್ನವು ಮುಂದಿನ ಪೀಳಿಗೆಗೊಂದು ಮಾದರಿಯಾಗಲಿ, ಬುನಾದಿಯಾಗಲಿ. ಪರಿಸರದಲ್ಲಿ ಇನ್ನೂ ಹತ್ತು ಹಲವು ಈ ತರದ ಕಾರ್ಯಕ್ರಮಗಳು ನಡೆಯಲಿ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕರಾಗಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ

    26/05/2026

    ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

    26/05/2026

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕರಿಗೆ ಕಾರ್ಯಗಾರ

    26/05/2026
    Leave A Reply Cancel Reply

    8 + four =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕರಾಗಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ
    • ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ
    • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕರಿಗೆ ಕಾರ್ಯಗಾರ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಕ್ಯಾಂಪಸ್ ಟು ಕಾರ್ಪೊರೇಟ್ – ಕೆರಿಯರ್ ರೆಡಿನೆಸ್ʼ ಕಾರ್ಯಕ್ರಮ
    • ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಕುಣಿತ ಭಜನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.