ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಸ್ವಾಮಿ ವಿವೇಕಾನಂದ ಜನ್ಮಜಯಂತಿ ಸಪ್ತಾಹ ಸಂಪನ್ನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಯಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮ ಜಯಂತಿ ಸಪ್ತಾಹ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು.

Call us

Click Here

ಸ್ವಾಮಿ ವಿವೇಕಾನಂದ ಜನ್ಮ ಜಯಂತಿ ಅಂಗವಾಗಿ ವಿವಿಧ ಶಾಲೆಗಳಲ್ಲಿ ಹಾಗೂ ಕುಟೀರದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿದಿನ ನಡೆಯುತ್ತಿದ್ದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳು ಹಲವಾರು ವಿಷಯಗಳನ್ನು ತಿಳಿದುಕೊಳ್ಳುವುದರೊಂದಿಗೆ ತಾವು ಕೂಡಾ ಸ್ವಾಮೀಜಿಯವರ ಜೀವನದ ಕುರಿತು ಮಾತನಾಡಿ, ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ನೀಡಿ, ಭಕ್ತಿ ಗೀತೆಗಳನ್ನು ಹಾಡಿ, ಸ್ತೋತ್ರಗಳನ್ನು ಪಟಿಸಿ, ಕಾರ್ಯಕ್ರಮ ಕ್ಕೆ ಸಾರ್ಥಕ್ಯವನ್ನು ತಂದುಕೊಟ್ಟರು.

ಪ್ರತಿನಿತ್ಯದ ಪೂಜಾ ಕಾರ್ಯಗಳೊಂದಿಗೆ ನಡೆದ ಸಮಾರೋಪ ಸಮಾರಂಭ ದಲ್ಲಿ ತೊಂಡ್ಲೆ ಶಾಲೆಯ ಮುಖ್ಯ ಶಿಕ್ಷಕರಾದ ಗೋವಿಂದರಾಯ ಎಸ್. ಹಾಗೂ ಏಳಜಿತ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಜ್ಯೋತಿ ಹೆಚ್, ಎಸ್, ಮತ್ತು ಬಾಬುಗೌಡ ಹೋಳ್ಳಿಕೇರಿ, ನಾಗರಾಜ್ ಗೌಡರು, ಕೇದಿಗೆ ಮನೆ, ಉಪಸ್ಥಿತರಿದ್ದರು. ಅನಿವಾಸಿ ಭಾರತೀಯ ಸದನದಾಸ್, ಪತ್ರಕರ್ತ ಅರುಣ್ ಕುಮಾರ್ ಶಿರೂರು, ಶಿಕ್ಷಕರಾದ ಮಾದವ ಬಿಲ್ಲವ, ಶಂಕರ ಬಿಲ್ಲವ, ಅರುಣ್ ಕುಮಾರ್ ಶೆಟ್ಟಿ, ಮಾತೆಯರಾದ ಯಶೋಧ ಅಡಿಗ ನೈಂಕಬ್ಳಿ, ನಾಗಶ್ರೀ ಮಧ್ಯಸ್ಥ ಕೋಟ, ಚೈತ್ರಾ, ಸುನಿಲ್ ಗೊಳಿಹೊಳೆ, ಹಾಗೂ ವಿವಿಧ ಶಾಲೆಯ ಅಧ್ಯಾಪಕರುಗಳು ಕಾರ್ಯಕ್ರಮಗಳಿಗೆ ಶೋಭೆಯನ್ನು ತಂದುಕೊಟ್ಟರು.

Leave a Reply