ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರಮಾ.02: ಅಡಿಕೆ ಕೊಯ್ಯಲು ತೆರಳಿದ್ದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ನಾಡ ಸಮೀಪದ ಕೋಣ್ಕಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಕೋಣ್ಕಿ ಅಂಗಡಿಬೆಟ್ಟು ನಿವಾಸಿ ಭುಜಂಗ ಶೆಟ್ಟಿ (58) ಮೃತಪಟ್ಟಿದ್ದಾರೆ.
ತಮ್ಮ ತೋಟದ ಅಡಿಕೆ ಕೊಯ್ಯಲು ಭುಜಂಗ ಶೆಟ್ಟಿ ಅವರು ತೆರಳಿದ್ದರು. ಅಡಿಕೆ ಕೊಯ್ಯುತ್ತಿದ್ದ ವೇಳೆ ತೋಟದಲ್ಲಿ ಹಾದುಹೊಗಿದ್ದ ವಿದ್ಯುತ್ ತಂತಿಗೆ ಕೊಕ್ಕೆ ತಾಕಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗಂಗೊಳ್ಳಿ ಪೊಲೀಸ್ ಪಿಸ್ಐ ವಿನಯ ಕೊರ್ಲಪಾಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.
ಪೊಲೀಸ್ ಹೆಡ್ ಕಾನ್ಸಟೇಬಲ್ ಕೇಶವ, ಚಾಲಕ ದಿನೇಶ್ ದಿನೇಶ್ ಬೈಂದೂರು, ಅಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ಸ್ಥಳೀಯರು ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕೊಂಡೊಯ್ಯಲು ಸಹಕರಿಸಿದರು.