ಕುಂದಾಪುರದಲ್ಲಿ ನೇತ್ರಾವತಿ ಎಕ್ಸಪ್ರೆಸ್, ಬಾರ್ಕೂರಿನಲ್ಲಿ ಮತ್ಸ್ಯಗಂಧ ಎಕ್ಸಪ್ರೆಸ್ ರೈಲು ನಿಲುಗಡೆಗೆ ಆದೇಶ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರೋನಾ ಸಮಯದಲ್ಲಿ ರದ್ದಾಗಿದ್ದ ತಿರುವನಂತಪುರ ಮುಂಬಯಿ ಎಕ್ಸಪ್ರೆಸ್ – ನೇತ್ರಾವತಿ ಎಕ್ಸಪ್ರೆಸ್ (16346) ರೈಲಿಗೆ ಕುಂದಾಪುರ ನಿಲ್ದಾಣದಲ್ಲಿ ನಿಲುಗಡೆ ಹಾಗೂ ಬಹುದಿನಗಳ ಬೇಡಿಕೆಯಾದ ಮುಂಬಯಿ ಮಂಗಳೂರು ಮತ್ಯಗಂದ ಎಕ್ಸಪ್ರೆಸ್ ರೈಲು (12619/20) ಬಾರ್ಕೂರಿನಲ್ಲಿ ನಿಲುಗಡೆಗೆ ಆದೇಶವಾಗಿದೆ.

Call us

Click Here

ನೇತ್ರಾವತಿ ಎಕ್ಸಪ್ರೆಸ್ ರೈಲು ನಿಲುಗಡೆ ರದ್ದಾಗಿದ್ದರಿಂದ ಕುಂದಾಪುರದಿಂದ ಮುಂಬಯಿ ಮತ್ತು ಗೋವಾಕ್ಕೆ ತೆರಳುವ ಮತ್ತು ಮುಂಬಯಿ ಮತ್ತು ಗೋವಾದಿಂದ ಕುಂದಾಪುರಕ್ಕೆ ಸಂಚರಿಸುವ ಹಲವಾರು ಪ್ರಯಾಣಿಕರಿಗೆ ಅನಾನುಕೂಲತೆಯಾಗಿತ್ತು. ರೈಲು ನಿಲುಗಡೆಗೊಳಿಸಲು ಕ್ರಮ ಜರುಗಿಸಲು ಈ ಹಿಂದೆ ಸಾರ್ವಜನಿಕರು ಮತ್ತು ಕುಂದಾಪುರ ರೈಲ್ವೆ ಹೋರಾಟ ಸಮಿತಿ ಮನವಿ ಮಾಡಿದ್ದರು. ಪ್ರ ಯಾಣಿಕರ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನೇತ್ರಾವತಿ ಎಕ್ಸ್ ಪ್ರೆಸ್ ರೈಲನ್ನು ಕುಂದಾಪುರದಲ್ಲಿ ನಿಲುಗಡೆಗೆ ಕೇಂದ್ರ ರೇಲ್ವೆ ಸಚಿವರು ಆದೇಶಿಸಿದ್ದಾರೆ.

ಮಂಗಳೂರಿನಿಂದ ಮುಂಬೈ, ಮುಂಬೈನಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ಮಂಗಳೂರು ಮತ್ಯಗಂಧ ಎಕ್ಸಪ್ರೆಸ್ (12619/20) ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಬಗ್ಗೆ ಬ್ರಹ್ಮಾವರ, ಬಾರ್ಕೂರು ಭಾಗದ ಪ್ರಯಾಣಿಕರಿಂದ ಬೇಡಿಕೆಯಿತ್ತು. ಕರಾವಳಿ ಭಾಗದ ಪ್ರಯಾಣಿಕರಿಗೆ, ವಿಶೇಷವಾಗಿ ಹೋಟೆಲ್ ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಈ ನಿಲುಗಡೆ ಬಹಳೇ ಉಪಯುಕ್ತವಾಗಲಿವೆ. ಇವೆಲ್ಲವನ್ನು ಪರಿಗಣಿಸಿ ರೇಲ್ವೆ ಇಲಾಖೆ ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಅನುಮತಿಯನ್ನು ಹೊರಡಿಸಿದೆ.

ಇದನ್ನೂ ಓದಿ: ► ಬೈಂದೂರು ನಿಲ್ದಾಣದಲ್ಲಿ ಮುಂಬೈ – ಕೊಚುವಲಿ ಗರೀಬ್ ರಥ ರೈಲು ವಾರದ ನಾಲ್ಕು ದಿನ ನಿಲುಗಡೆಗೆ ಆದೇಶ – https://kundapraa.com/?p=65275 .

ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತು ಸಚಿವರಾದ ಶೋಭಾ ಕರಂದ್ಲಾಂಜೆಯವರೊಂದಿಗೆ ಸಭೆ ನಡೆಸಿ ನೇತ್ರಾವತಿ ಎಕ್ಸ್ ಪ್ರೆಸ್ ಅನ್ನು ನಿಲುಗಡೆಗೆ ಆದೇಶಿಸುವಲ್ಲಿ ಶ್ರಮವಹಿಸಿದ್ದರು.

Click here

Click here

Click here

Click Here

Call us

Call us

ಇನ್ನು ಯಶವಂತಪುರ- ವಾಸ್ಕೋಡಾಗಾಮಾ ಎಕ್ಸ್ ಪ್ರೆಸ್ (17309/10) ಕಡೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಲು ಈ ಭಾಗದ ಪುಯಾಣಿಕರು ಒತ್ತಾಯ ಮಾಡಿದ್ದರು. ಬೆಂಗಳೂರಿನಿಂದ ಗೋವಾಕ್ಕೆ ಗೋವಾದಿಂದ ಬೆಂಗಳೂರಿಗೆ ತೆರಳುವ ಈ ರೈಲಿಗೆ ಕಡೂರಿನಲ್ಲಿ ನಿಲುಗಡೆ ನೀಡುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆಯಂದು ಕೇಂದ್ರದ ರೇಲ್ವೆ ಸಚಿವರಿಗೆ ಮನವರಿಕೆ ಮಾಡಲಾಗಿತ್ತು. ಕೇಂದ್ರದ ರೈಲ್ವೆ ಸಚಿವರು ರೈಲು ಸಂಖ್ಯೆ 17309/10 (ಯಶವಂತಪುರ- ವಾಸ್-ಡ-ಗಾಮಾ ಎಕ್ಷಪೆಸ್)ಗೆ ಕಡೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಿದ್ದಾರೆ.

Leave a Reply