ಮೂಡ್ಲಕಟ್ಟೆ: ಸಂಸ್ಥಾಪಕರ ದಿನಾಚರಣೆಯ ವಿಶೇಷ ಉಪನ್ಯಾಸ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ.ಎ.8:
ಮೂಡ್ಲಕಟ್ಟೆ ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಸಂಸ್ಥೆಯಲ್ಲಿ ಇಸ್ರೋ ಮಾಜಿ ವಿಜ್ಞಾನಿ ಡಾ. ಕೆ. ಗಣೇಶ ರಾಜ್ ಅವರಿಂದ ಐ.ಎಂ. ಜಯರಾಮ ಶೆಟ್ಟಿ ಸ್ಮರಣಾರ್ಥ ಭೂಕಂಪ ಹಾಗೂ ಸಮಾಜದ ಮೇಲೆ ಅದರ ಪರಿಣಾಮ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು.

Call us

Click Here

ಈ ವೇಳೆ ಡಾ. ಕೆ. ಗಣೇಶ ರಾಜ್ ಅವರು ಮಾತನಾಡಿ, ಜಗತ್ತಿನ ವಿವಿಧೆಡೆ ನಡೆದ ದೊಡ್ಡ ಭೂಕಂಪಗಳು ಹಾಗೂ ಅವುಗಳಿಂದ ಸಮಾಜದ ಮೇಲೆ ಆದ ನಷ್ಟ ಮತ್ತು ದುಷ್ಪರಿಣಾಮಗಳನ್ನು ಬಗ್ಗೆ ಮಾತನಾಡಿದರು. ಪ್ರಾಕೃತಿಕವಾಗಿ ಸಂಭವಿಸುವ ಭೂಕಂಪನವನ್ನು ತಡೆಯಲಾಗದಿದ್ದರೂ, ಅದರಿಂದ ಆಗುವ ಪರಿಣಾಮಗಳ ತೀವ್ರತೆಯನ್ನು, ಕಟ್ಟಡಗಳನ್ನು ಸರಿಯಾಗಿ ಕಟ್ಟುವುದರ ಮೂಲಕ ಕಡಿಮೆಗೊಳಿಸಲು ಸಾಧ್ಯವಿದೆ ಎಂದರು. ಈ ದಿಸೆಯಲ್ಲಿ ಜಪಾನ್ ದೇಶದ ಮಾದರಿ ಅನುಕರಣೀಯ. ನಮ್ಮ ಕರವಾಳಿಯು ಸುರಕ್ಷಿತ ವಲಯದಲ್ಲಿರುವುದರಿಂದ ತುಂಬಾ ಚಿಂತಿಸುವ ಅಗತ್ಯವಿಲ್ಲ ಆದರೆ ಕಟ್ಟಡ ನಿರ್ಮಾಣ ಸಮಯದಲ್ಲಿ ಅಗತ್ಯಕ್ರಮಗಳನ್ನು ತೆಗೆದುಕೊಳ್ಳವುದು ಒಳ್ಳೆಯದು ಎಂದರು.

ಐ.ಎಂ.ಜೆ ಸಂಸ್ಥೆಗಳ ಮುಖ್ಯಸ್ಥರಾದ ಸಿದ್ಧಾರ್ಥ ಜೆ. ಶೆಟ್ಟಿ, ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್, ಎಂಐಟಿಕೆ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ, ಐ.ಎಂ.ಜೆ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಎಂಸಿಎನ್ ಪ್ರಾಂಶುಪಾಲರಾದ ಹಾಗೂ ಈ ಕಾರ್ಯಕ್ರಮದ ಸಂಯೋಜಕರಾದ ಜೆನ್ನಿಫರ್ ಮಿನೇಜಸ್, ಸಂಸ್ಥಾಪಕರ ದಿನಾಚರಣೆಯ ವ್ಯವಸ್ಥಾಪಕರಾದ ಹಾಗೂ ಎಂಐಟಿಕೆ ಉಪಪಾಂಶುಪಾಲರಾದ ಪ್ರೋ. ಮೆಲ್ವಿನ್ ಡಿಸೋಜ್‌ರವರು, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಸಂಶೋಧಕರಾದ ಡಾ. ಸತ್ಯಜಿತ್, ಸಂಸ್ಥೆಯ ಉಪಪ್ರಾಂಶುಪಾಲರು, ವಿಭಾಗಮುಖ್ಯಸ್ಥರು, ಉಪನ್ಯಾಸವರ್ಗ ಮತ್ತು ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.

Leave a Reply