ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.01: ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತದಲ್ಲಿ ಓರ್ವ ಮೀನುಗಾರ ಮೃತಪಟ್ಟು, ಇನ್ನೋರ್ವ ನಾಪತ್ತೆಯಾಗಿದ್ದಾನೆ. ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಮೀನುಗಾರರಿಂದ ಘಟನೆಯ ಮಾಹಿತಿ ಪಡೆದುಕೊಂಡದರು.
ಈ ವೇಳೆ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿ.ಎಸ್. ಸುರೇಶ್ ಶೆಟ್ಟಿ, ಮೀನುಗಾರ ಮುಖಂಡರಾದ ಆನಂದ ಖಾರ್ವಿ, ಜಗನ್ನಾಥ ಮೊಗವೀರ, ಬಿಎಚ್‌ಪಿ ನಾಗರಾಜ ಖಾರ್ವಿ, ಪ್ರಜ್ವಲ್ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪಟ್ಟೆಬಲೆ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು. ಸಮುದ್ರದಲೆಗಳ ಹೊಡೆತಕ್ಕೆ ದೋಣಿ ಮಗುಚಿ ಬಿದ್ದು ದುರಂತ ನಡೆದಿದ್ದು, ದೋಣಿಯಡಿಗೆ ಸಿಲುಕಿದ್ದ ನಾಗೇಶ್ ಬಾಬು ಖಾರ್ವಿ [30] ಎಂಬುವವರನ್ನು ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಸತೀಶ್ ಖಾರ್ವಿ [34] ಎಂಬುವವರು ನಾಪತ್ತೆಯಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ. ಉಪ್ಪುಂದದ ಸಚಿನ್ ಖಾರ್ವಿ ಎಂಬುವವರಿಗೆ ಸೇರಿದ ಮಾಸ್ತಿ ಮರ್ಲಿಚಿಕ್ಕು ಪ್ರಸಾದ ಹೆಸರಿನ ದೋಣಿಯಲ್ಲಿ 8 ಮಂದಿ ಮೀನುಗಾರಿಕೆಗೆ ತೆರಳಿದ್ದು, ದಡಕ್ಕೆ ಸಮೀಪವಿರುವಾಗ ದುರಂತ ನಡೆದಿದೆ. 6 ಮಂದಿ ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ:
► ಕರ್ಕಿಕಳಿಯಲ್ಲಿ ದೋಣಿ ದುರಂತ: ಓರ್ವ ಮೀನುಗಾರನ ಸಾವು, ಇನ್ನೋರ್ವ ನಾಪತ್ತೆ – https://kundapraa.com/?p=68119 .