ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.02: ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆಯಾಗಿದೆ.
ಸೋಮವಾರ ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿದ್ದ ಪಟ್ಟೆಬಲೆ ದೋಣಿಯಲ್ಲಿ ಒಟ್ಟು ಎಂಟು ಮಂದಿ ಮೀನುಗಾರರಿದ್ದು, ಈ ಪೈಕಿ ಆರು ಮಂದಿ ಈಜಿ ದಡ ಸೇರಿದ್ದರು. ನಾಗೇಶ್ ಬಾಬು ಖಾರ್ವಿ ಎಂಬವವರು ದುರಂತ ನಡೆದು ಕೆಲಹೊತ್ತಿನಲ್ಲಿಯೇ ಮೃತಪಟ್ಟಿದ್ದರು. ಸತೀಶ್ ಖಾರ್ವಿ ನಾಪತ್ತೆಯಾಗಿದ್ದರು. ಮಂಗಳವಾರ ರಾತ್ರಿ ಕೊಡೇರಿ ಬಂದರು ಸಿ ವಾಕ್ ಬಲಬದಿಯಲ್ಲಿ ಸತೀಶ್ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಮೀನುಗಾರಿಕಾ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ ವಿತರಿಸಿದ್ದರು. ಹಾನಿಗೀಡಾದ ದೋಣಿಗೆ 1 ಲಕ್ಷ ರೂ ಪರಿಹಾರ ಒದಗಿಸುವ ಭರವಸೆ ನೀಡಲಾಗಿತ್ತು.
ಇದನ್ನೂ ಓದಿ:
► ಕರ್ಕಿಕಳಿ ದೋಣಿ ದುರಂತ: ಘಟನಾ ಸ್ಥಳಕ್ಕೆ ಮೀನುಗಾರಿಕಾ ಸಚಿವರು, ಶಾಸಕರ ಭೇಟಿ – https://kundapraa.com/?p=68163 .
► ಕರ್ಕಿಕಳಿಯಲ್ಲಿ ದೋಣಿ ದುರಂತ: ಓರ್ವ ಮೀನುಗಾರನ ಸಾವು, ಇನ್ನೋರ್ವ ನಾಪತ್ತೆ – https://kundapraa.com/?p=68119 .