ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 6ನೇ ವಾರ್ಷಿಕ ಮಹಾಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿ. ಬೈಂದೂರು ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಗುರುವಾರ ಸಹಕಾರಿಯ ಕಛೇರಿ ಆವರಣದಲ್ಲಿ ನಡೆಯಿತು.

Call us

Click Here

ಸಹಕಾರಿ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ರೂ. 10.73 ಕೋಟಿ ಠೇವಣಿ ಸಂಗ್ರಹಿಸಿ, ರೂ. 6.34 ಕೋಟಿ ಸಾಲ ನೀಡಿದೆ. ರೂ.11.03 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿದ್ದು, ರೂ. 81 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದೆ. ಆರ್ಥಿಕ ವರ್ಷದಲ್ಲಿ ರೂ. 19.99 ಲಕ್ಷ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಶೇ. 11% ಡಿವಿಡೆಂಡ್ ಘೋಷಿಸಲಾಗಿದೆ. ಕ್ರಮಬದ್ಧವಾಗಿ ಹಾಗೂ ವಿಶ್ವಾಸದಿಂದ ಸೇವೆಯನ್ನು ನೀಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಅಪಘಾತ ವಿಮೆ, ಶೈಕ್ಷಣಿಕ ನಿಧಿ, ಸ್ವಸಹಾಯ ಗುಂಪುಗಳ ರಚನೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಅವರು ಮಾನಾಡಿ, ಸೌಹಾರ್ದ ಸಹಕಾರಿಗಳು ವಾಣಿಜ್ಯ ಬ್ಯಾಂಕುಗಳಿಗೆ ಪರ್ಯಾಯ ಸೇವೆಯನ್ನು ನಿರಂತರವಾಗಿ ನೀಡುತ್ತಿದೆ. ಸೌಹಾರ್ದ ಸಹಕಾರಿಗಳು ಸಂಯುಕ್ತ ಸಹಕಾರಿಗಳ ಒಕ್ಕೂಟ ಹಾಗೂ ಫೆಡರೇಶನ್ನ ನಿಯಂತ್ರಣ ಹೊಂದಿದೆ. ಕಾಮಾಕ್ಷಿ ಸೌಹಾರ್ದವು ಜಿಲ್ಲೆಯ ಸಹಕಾರಿ ಸಂಘಗಳ ಪೈಕಿ ಎ ಶ್ರೇಣಿಯನ್ನು ಕಾಯ್ದುಕೊಂಡು ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದರು.

ನಿರ್ದೇಶಕರಾದ ಗೋಪಾಲಕೃಷ್ಣ ಕೆ, ಯು. ಪ್ರಕಾಶ ಭಟ್ ಉಪ್ಪುಂದ, ಭೀಮೇಶ ಕುಮಾರ್ ಎಸ್.ಜಿ, ಪ್ರಸಾದ ಪ್ರಭು, ರಾಜೇಶ ಪೈ, ಬಾಲಕೃಷ್ಣ ಪ್ರಭು, ಗೌರಿ ಮಂಗೇಶ್, ಶೆಟ್ಟಿ, ಗಣೇಶ ಗಾಣಿಗ, ಮೋಹಿನಿ ಜಿ., ಮಮತಾ ಕಿಣಿ ಹಾಜರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಎಂ. ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸದರು.

Click here

Click here

Click here

Click Here

Call us

Call us

Leave a Reply