ಬೆಳಗಾವಿ: ಬಹು ನಿರೀಕ್ಷಿತ ಇನಾಮ್ದಾರ ಚಿತ್ರ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಬೆಳಗಾವಿ ನಗರದ ಸರ್ದಾರ ಮೈದಾನದಲ್ಲಿ ಅ.15ರಂದು ಭಾನುವಾರ ಸಂಜೆ 4ಗಂಟೆಗೆ ನಡೆಯಲಿದೆ.
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕರಾದ ರಾಜು ಸೇಠ್, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ಅಭಯ ಪಾಟೀಲ್ ಮಾಜಿ ಶಾಸಕ ಮಾಜಿ ಶಾಸಕ ಅರವಿಂದ್ ಚ. ಪಾಟೀಲ್, ಸಾಮಾಜಿಕ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗ್ನಟಿ, ಕಾರ್ಯಕರ್ತ ಸಂತೋಶ ಗುಬಚೆ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಠಲ್ ಗಡ್ಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕುಂತಿಯಮ್ಮಾ ಮತ್ತು ತಸ್ಮಯ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪ್ರಮೋದ್ ಶೆಟ್ಟಿ ನಿರ್ಮಾಪಕರು. ಉತ್ತರ ಕರ್ನಾಟಕದ ಅದರಲ್ಲೂ ಮೂಲತಃ ಕುಂದಾನಗರಿ ಬೆಳಗಾವಿ ಜಿಲ್ಲೆಯ ನಟ ಖಡಕ್ ಸ್ಟಾರ್ ರಂಜನ್ ಛತ್ರಪತಿ, ಇನಾಮ್ದಾರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಚಿರಶ್ರೀ ಅಂಚನ್ ಮತ್ತು ಎಸ್ತಾರ್ ನೆರೋನಾ ಈ ಚಿತ್ರದ ನಾಯಕಿಯಾಗಿದ್ದಾರೆ.
ಹಿರಿಯ ಕಲಾವಿದ ಅವಿನಾಶ, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಎಂ.ಕೆ. ಮಠ, ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಡ್ರೆಂಡ್ ನಿರ್ಮಿಸಿರುವ ಇನಾಮ್ದಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆ ಕುಂದಾ ನಗರಿ ಸಾಕ್ಷಿಯಾಗಲಿದ್ದು, ಚಿತ್ರತಂಡದ ಬಹುತೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಇದೇ ಚಿತ್ರದ ಸಿಲ್ಕು… ಸಿಲ್ಕು.., ಮಿಲ್ಕು..ಮಿಲ್ಕು ಸಾಂಗ್ ಸಾಂಗ್ ಬಿಡುಗಡೆಯಾಗಿ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. ನಾಲ್ಕು ಹಾಡುಗಳು ಈ ಚಿತ್ರದಲ್ಲಿದ್ದು, ಈಗ ಚಿತ್ರದ ಎರಡನೇ ಹಾಡು ಚೆಂದಾನೆ ಚೆಂದಾನೆ.. ಅನ್ನೋ ಸಾಂಗ್ ನ ಧ್ವನಿ ಸುರುಳಿ ಬಿಡುಗಡೆಯಾಗಲಿದೆ. ಈ ಹಾಡಿಗೆ ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನವಿದ್ದು, ಪ್ರಮೋದ ಅವರ ಸಾಹಿತ್ಯ. ನಕಲ್ ಮತ್ತು ರಮ್ಯಾ ಈ ಹಾಡಿನ ಗಾಯಕರು.