ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಮಕ್ಷತ್ರಿಯ ಸಮುದಾಯ ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ರಂಗದಲ್ಲಿ ಹಲವರು ಮುಂಚೂಣಿಯಲ್ಲಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿಪ್ರಾಯಭೇದಗಳು ಹಲವಿದ್ದರೂ ಧರ್ಮ ಹಾಗೂ ಸಮುದಾಯದ ಅಭ್ಯುದಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸತೀಶ್ ಬಟವಾಡಿ ಕೆಎಎಸ್ ಹೇಳಿದರು.
ಅವರು ಶ್ರೀ ರಾಮಕ್ಷತ್ರಿಯ ಯುವಕ ಮಂಡಲ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ವತಿಯಿಂದ ಆಯೋಜಿಸಲಾಗುತ್ತಿರುವ 37ನೇ ವರ್ಷದ ಶಾರದೋತ್ಸವದಲ್ಲಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲಾ ರಂಗದಲ್ಲಿ ಪ್ರಗತಿ ಸಾಧಿಸುವುದಷ್ಟೇ ಅಲ್ಲದೇ ಸಾಧನೆಗೈಯುವರ ಇತರರಿಗೂ ದಾರಿ ತೋರುವ ಕೆಲಸವನ್ನು ಸಮುದಾಯದ ನಾಯಕರು ಮಾಡಬೇಕಿದೆ. ಒಗ್ಗಟ್ಟಿನ ಹೋರಾಟ ಹಾಗೂ ಕೆಲಸಕ್ಕೆ ಯಾವಾಗಲು ಜಯ ಸಂದಿದೆ ಎಂದರು.
ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ರಾಮಕೃಷ್ಣ ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಪೊಲೀಸ್ ನಿರೀಕ್ಷಕರಾದ ಸವಿತ್ರತೇಜ್, ಉಡುಪಿ ಕರಾವಳಿ ಕಾವಲುಪಡೆ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಬೆಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ., ನಿವೃತ್ತ ಶಿಕ್ಷಕ ಸದಾನಂದ ಮಾಪಾರಿ, ಉದ್ಯಮಿಗಳಾದ ಗೋಪಾಲಕೃಷ್ಣ ಕಲ್ಮಕ್ಕಿ, ಮಹಾದೇವ ಜಿ, ರಾಘವೇಂದ್ರ ಕಳಿಹಿತ್ಲು ಬಿಜೂರು, ಗಣೇಶ ಬಾಳಯ್ಯನಮನೆ, ಮಂಜುನಾಥ ರಾವ್, ರಾಘವೇಂದ್ರ ಸುರಭಿ, ರಾಘವೇಂದ್ರ ವಿಠ್ಠಲ ನಾಯ್ಕ್ ಹೊನ್ನಾವರ, ಶಾರದಾ ವಿಗ್ರಹ ಒದಗಿಸಿದ ಕೊಡಮಾಡಿದ ರತ್ನಾಕರ ಜಿ. ಮಯ್ಯಾಡಿ ಮೊದಲಾದವರು ವೇದಿಕೆಯಲ್ಲಿದ್ದರು.
ರಾಮಕ್ಷತ್ರಿಯ ಸಮುದಾಯದ ಸಾಧಕರಾದ ಎಸಿಎಫ್ಒ ಶ್ರೀಧರ ಪಿ, ಎಂಐಟಿ ಪ್ರೊಫೆಸರ್ ಡಾ. ಅನಿತಾ ಕರುಣಾಕರ್ ಕೋಟೆಗಾರ್, ಯೋಗ ಸಾಧಕಿ ಐಶ್ವರ್ಯ ಮಹಾದೇವ್, ಕರಾಟೆ ಪಟು ಶಿಖಾ ಬಿಜೂರು ಅವರನ್ನು ಸನ್ಮಾನಿಸಲಾಯಿತು.
ರಾಮಕ್ಷತ್ರಿಯ ಯುವಕ ಸಮಾಜದ ಸ್ಥಾಪಕಾಧ್ಯಕ್ಷ ಸದಾಶಿವ ಡಿ. ಪಡುವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷ ಸುರೇಂದ್ರ ಡಿ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಸೋಡಿತಾರ್ ವಂದಿಸಿದರು. ಗೌರವಾಧ್ಯಕ್ಷ ರಾಘವೇಂದ್ರ ದಡ್ಡು ಕಾರ್ಯಕ್ರಮ ನಿರೂಪಿಸಿದರು.
ಯೋಗ ಸಾಧಕಿ ಐಶ್ವರ್ಯ ಮಹಾದೇವ್ ಅವರ ತಂಡದಿಂದ ಯೋಗ ಪ್ರದರ್ಶನ ಬಳಿಕ ಮಾನಸೀ ಸುಧೀರ್ ಕೊಡವೂರು ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.