ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೋನಿ ಟಿವಿಯ ಕೌನ್ ಬನೇಗಾ ಕರೋಡ್ಪತಿ (ಕೆಬಿಸಿ) ಜೂನಿಯರ್ 15ನೇ ಸೀಸನ್‌ನಲ್ಲಿ ಭಾಗವಹಿಸಿದ ಶಿರೂರಿನ ಪ್ರತಿಷ್ಟಾ ಶೆಟ್ಟಿ 11 ಸುತ್ತುಗಳ ತನಕ ಪ್ರವೇಶ ಪಡೆದು 6.40 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಪ್ರತಿಷ್ಟಾ ಶೆಟ್ಟಿ ಅವರು, ಬೈಂದೂರು ಕಬೈಲು ಜಾಡಿಮನೆ ನಾಗರಾಜ ಶೆಟ್ಟಿ ಮತ್ತು ಶಿರೂರು ಕೆಳಹೊಸ್ಮನೆ ಪ್ರಫುಲ್ಲಾ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಪ್ರಸ್ತುತ ಪೊಷಕರೊಂದಿಗೆ ಗುಜರಾತಿನ ವಾಪಿಯಲ್ಲಿ ನೆಲೆಸಿದ್ದು, 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಒಟ್ಟು 11 ಸುತ್ತುಗಳವರೆಗೆ ಪ್ರವೇಶ ಪಡೆದು 6.40 ಲಕ್ಷ ಬಹುಮಾನ ಗೆದ್ದಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರು ಪ್ರತಿಷ್ಠಾ, 2022ರ ಮಿಸ್ ಟೀನ್ ಗುಜರಾತ್ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಆಫ್ ಆಗಿದ್ದರು.
ಪ್ರತಿಷ್ಠಾ ಭಾಗವಹಿಸಿದ್ದ ಕಾರ್ಯಕ್ರಮ ಸೋನಿ ಟಿವಿಯಲ್ಲಿ ಬುಧವಾರ ಹಾಗೂ ಗುರುವಾರ ಪ್ರಸಾರವಾಗಲಿದೆ.